ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೂ ಹಗರಣದಲ್ಲಿ ಯಡಿಯೂರಪ್ಪ ಪಾತ್ರಕ್ಕೆ ಆರೆಸ್ಸೆಸ್ ಗರಂ (Land scam | RSS | Karnataka | BS Yeddyurappa)
Bookmark and Share Feedback Print
 
NRB
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಗರಿಗೆದರುತ್ತಿರುವ ಭೂ ಹಗರಣಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿರುವುದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಗಳು ಹೇಳಿವೆ.

ತಮ್ಮ ಪುತ್ರರು, ಸಂಬಂಧಿಕರು ಮತ್ತು ಆಪ್ತರಿಗೆ ಅಕ್ರಮವಾಗಿ ಭೂ ಹಂಚಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ಕುರಿತು ಗಂಭೀರ ಚಿಂತನೆ ನಡೆಸದೇ ಇರುವ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯವರನ್ನು ಕೂಡ ಆರೆಸ್ಸೆಸ್ ಪ್ರಶ್ನಿಸಿದೆ.

ಗಡ್ಕರಿಯವರನ್ನು ಭೇಟಿ ಮಾಡಿರುವ ಬಿಜೆಪಿಯ ಆರೆಸ್ಸೆಸ್ ಉಸ್ತುವಾರಿ ಸುರೇಶ್ ಸೋನಿ, ಕೆಐಎಡಿಬಿ ಸೇರಿದಂತೆ ಕರ್ನಾಟಕದ ಆರೋಪಿತ ಭೂ ಹಗರಣದಲ್ಲಿ ಯಡಿಯೂರಪ್ಪ ಪಾತ್ರದ ಕುರಿತು ಚರ್ಚೆ ನಡೆಸಿದ್ದಾರೆ.

ವಿಶ್ವಾಸ ಮತ ಸಾಬೀತು ಪಡಿಸುವ ಮೊದಲೇ ಬೆಳಕಿಗೆ ಬಂದಿದ್ದ ಕೆಐಎಡಿಬಿ ಹಗರಣ ಇದೀಗ ಮತ್ತೆ ಭಾರೀ ಸುದ್ದಿ ಮಾಡುತ್ತಿದೆ. ಸಂಸತ್ತಿನಲ್ಲೂ ಹಗರಣಗಳ ಪ್ರಸ್ತಾಪವಾಗಿದೆ. ಆದರೂ ಬಿಜೆಪಿಯ ಕೇಂದ್ರೀಯ ನಾಯಕತ್ವವು ಯಡಿಯೂರಪ್ಪನವರ ಬಗ್ಗೆ ಗಂಭೀರವಾಗಿ ಚಿಂತಿಸಿದಂತಿಲ್ಲ. ಇದು ಸಂಘ ಪರಿವಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಈ ನಿಟ್ಟಿನಲ್ಲಿ ಸಿಎಂ ಗದ್ದುಗೆ 'ಮಿಸ್ಟರ್ ಕ್ಲೀನ್' ಆಗಿರಬೇಕು ಎಂದು ಕೇಸರಿ ಪಾಳಯವು ಬಯಸುತ್ತಿದೆ.

ಮೂಲಗಳ ಪ್ರಕಾರ ಯಡಿಯೂರಪ್ಪ ಕುಟುಂಬಕ್ಕೆ ಅಕ್ರಮವಾಗಿ ಭೂಮಿಯನ್ನು ಹಂಚಿಕೆ ಮಾಡಿರುವ ಕುರಿತು ಪ್ರತಿಪಕ್ಷಗಳು ಪ್ರತಿದಿನ ಬಿಡುಗಡೆ ಮಾಡುತ್ತಿರುವ ದಾಖಲೆಗಳು ಮತ್ತು ಇತರ ಬೆಳವಣಿಗೆಗಳನ್ನು ಬಿಜೆಪಿ ಹೈಕಮಾಂಡ್ ಕೂಲಂಕಷವಾಗಿ ಗಮನಿಸುತ್ತಿದೆ.

ಜತೆಗೆ ಬಿಜೆಪಿಯೊಳಗಿನ ಒಂದು ಗುಂಪು ಇದಕ್ಕೆ ಉಪ್ಪು-ಖಾರ ಸುರಿಯುತ್ತಿದೆ. ಹಗರಣದಲ್ಲಿ ಕಳಂಕಿತರಾಗಿರುವ ಯಡಿಯೂರಪ್ಪರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿ ಬೇರೊಬ್ಬರಿಗೆ ಆ ಸ್ಥಾನವನ್ನು ನೀಡಬೇಕು ಎಂಬ ಒತ್ತಾಯಗಳು ಕೂಡ ಹೆಚ್ಚುತ್ತಿವೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ