ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಬ್ಬಾ...ಒಬಾಮ ಹೆಸರಿನ ಮೇಕೆಗೆ 48 ಲಕ್ಷ ರೂ. ಆಫರ್! (Hasan Ali Obama | Tilak Nagar | goat | Eid | Mohammad Sajid,)
Bookmark and Share Feedback Print
 
ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಎಷ್ಟು ಪವರ್‌ಫುಲ್ ಆಗಿದ್ದಾರೋ ಅದೇ ರೀತಿ ಅವರ ಹೆಸರಿನ ಮೇಕೆಯೊಂದರ ದರ ಅದರ ಮಾಲೀಕನ ಅದೃಷ್ಟವನ್ನೇ ಖುಲಾಯಿಸಿರುವ ಅಪರೂಪದ ಘಟನೆ ಇದಾಗಿದೆ.

ಇಲ್ಲಿಯ ತಿಲಕ್‌ನಗರದಲ್ಲಿರುವ 'ಹಸನ್ ಅಲಿ ಒಬಾಮ' ಹೆಸರಿನ ಮೇಕೆ ಬೆಲೆ ಬರೋಬ್ಬರಿ 48 ಲಕ್ಷ! ಇದರ ಮಾಲೀಕ ಮೊಹಮ್ಮದ್ ಸಾಜಿದ್ ಈ ಇದನ್ನು ಕೇವಲ 4,500 ರೂಪಾಯಿಗೆ ಖರೀದಿಸಿದ್ದ. ಆದರೆ ಈಗ ಜನ ಆ ಮೇಕೆಗೆ 48 ಲಕ್ಷ ರೂ.ನೀಡಿ ಖರೀದಿಸಲು ಮುಂದಾಗಿದ್ದಾರೆ. ಇದೇನ್ ಕಥೆಯಪ್ಪಾ...ಒಂದು ಮೇಕೆ ಬೆಲೆ 48 ಲಕ್ಷ ರೂಪಾಯಿನಾ ಅಂತ ಅನುಮಾನಪಡಬೇಡಿ!

ಈ ಬೆಲೆ ಬರಲು ಮಹತ್ವದ ಕಾರಣವೊಂದಿದೆ. ಇದು ಸಾಮಾನ್ಯ ಮೇಕೆ ಅಲ್ಲ, ಇದರ ಮೈಮೇಲೆ ಅರೆಬಿಕ್ ಅಕ್ಷರಗಳಾದ ಅಲೀಪ್, ಲಾಮ್ ಮತ್ತು ಹಾ ಎಂಬ ಮೂರು ಅಕ್ಷರಗಳಿವೆ.! ಇದು ಅಲ್ಲಾನನ್ನು ಪ್ರತಿನಿಧಿಸುತ್ತದೆ ಎಂದು ಸ್ವತಃ ತಿಲಕ್‌ನಗರದಲ್ಲಿರುವ ಚೋಟಿ ಮಸೀದಿಯ ಇಮಾಮ್ ಕರಿಮೊಹ್ಮದ್ ಮನ್ನಾನ್ ತಿಳಿಸಿದ್ದಾರೆ.

ಇನ್ನೊಬ್ಬ ಇಮಾಮ್ ಮೌಲಾನಾ ಮೊಹಮ್ಮದ್ ಸಾಜಿದ್ ಕೂಡ, ಉರ್ದು ವರ್ಣ ಮಾಲೆಯಲ್ಲಿಯ 29 ಅಕ್ಷರಗಳಲ್ಲಿ ಮೂರು ಅಕ್ಷರಗಳು ಈ ಮೇಕೆಯ ಮೈಮೇಲೆ ಇದೆ. ಹಾಗಾಗಿ ಇದು ಸಾಮಾನ್ಯ ಮೇಕೆ ಅಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಇದ್ಯಾವುದೂ ನನಗೆ ಗೊತ್ತಿಲ್ಲ, ಈ ಮೇಕೆಯನ್ನು ಒಂದು ವಾರದ ಹಿಂದೆ 4,500 ರೂ.ಗೆ ಕೊಂಡು ತಂದಿದ್ದೆ. ತುಂಬಾ ಕೊಳೆಯಾಗಿದ್ದ ಮೇಕೆಯನ್ನು ತೊಳೆದಾಗ ಅದರ ಮೈಮೇಲೆ ಈ ಅಕ್ಷರಗಳು ಕಂಡು ಬಂದವು ಎಂದು ಮೇಕೆ ಮಾಲೀಕ ಸಾಜಿದ್ ವಿವರಿಸಿದ್ದಾನೆ. ಇದೀಗ ಅರೇಬಿಕ್ ಅಕ್ಷರವನ್ನು ಹೊಂದಿರುವ ಒಬಾಮ ಹೆಸರಿನ ಮೇಕೆಯನ್ನು ನೋಡಲು ಜನ ಸಾಗರ ಹರಿದು ಬರುತ್ತಿದೆ ಎಂದು ವರದಿಯೊಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ