ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಡ್ಡಿ ಪರ ಆರೆಸ್ಸೆಸ್ ಬ್ಯಾಟಿಂಗ್, ಸಿಎಂ ಬದಲಾವಣೆ ಬೇಡ (BS Yeddyurappa | Karnataka | RSS | Nitin Gadkari)
Bookmark and Share Feedback Print
 
ಸಾಕಷ್ಟು ಹಗರಣಗಳಲ್ಲಿ ಹೆಸರುಗಳು ಕೇಳಿ ಬಂದಿರುವ ಹೊರತಾಗಿಯೂ ಕರ್ನಾಟಕ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರೇ ಮುಂದುವರಿಯಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಒಲವು ತೋರಿಸಿದೆ ಎಂದು ಕೇಸರಿ ಪಾಳಯದ ಮೂಲಗಳು ಹೇಳಿವೆ.

ತನ್ನ ಮಕ್ಕಳು, ಸಂಬಂಧಿಕರು ಮತ್ತು ಆಪ್ತರಿಗೆ ಸರಕಾರಿ ಭೂಮಿಯನ್ನು ಡಿನೋಟಿಫೈ ಮಾಡಿರುವ ಹಗರಣದಲ್ಲಿ ಒದ್ದಾಡುತ್ತಿರುವ ಮುಖ್ಯಮಂತ್ರಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿರುವ ಸಂಘ ಪರಿವಾರ ಈ ಸಂಬಂಧ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರ ಜತೆ ಮಾತುಕತೆ ನಡೆಸಿದೆ.

ಯಡಿಯೂರಪ್ಪನವರ ಗದ್ದುಗೆಗೆ ಯಾವುದೇ ತೊಂದರೆ ಮಾಡಬಾರದು ಎಂದು ಗಡ್ಕರಿಯವರಿಗೆ ಆರೆಸ್ಸೆಸ್ ನಾಯಕರಾದ ಸುರೇಶ್ ಸೋನಿ ಮತ್ತು ಸಂಜಯ್ ಜೋಷಿ ಸೂಚಿಸಿದ್ದಾರೆ. ಹಗರಣಗಳ ಆರೋಪ ಸಂಬಂಧ ಮುಖ್ಯಮಂತ್ರಿಯವರಿಂದ ವಿವರಣೆಯನ್ನು ಪಡೆದುಕೊಂಡ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.

ಯಡಿಯೂರಪ್ಪ ನೀಡಿರುವ ವಿವರಣೆ ಗಡ್ಕರಿ ಮತ್ತು ಆರೆಸ್ಸೆಸ್ ನಾಯಕರಿಗೆ ತೃಪ್ತಿ ತಂದಿದೆ. ಸರಕಾರ ಉರುಳದ ಹೊರತು ಅವರನ್ನು ಬದಲಾಯಿಸುವ ಯಾವುದೇ ಪ್ರಶ್ನೆ ನಮ್ಮ ಮುಂದಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.

ಗಡ್ಕರಿಗೆ ಯಡಿಯೂರಪ್ಪ ದೂರು...
ಈ ನಡುವೆ ಪಕ್ಷದೊಳಗೆ ತನ್ನನ್ನು ಮುಗಿಸಲು ಸಂಚು ನಡೆಯುತ್ತಿದೆ ಎಂದು ಯಡಿಯೂರಪ್ಪನವರು ಗಡ್ಕರಿಯವರಿಗೆ ದೂರು ನೀಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ವರದಿಗಳ ಪ್ರಕಾರ ಮುಖ್ಯಮಂತ್ರಿಯವರು ಸುಷ್ಮಾ ಸ್ವರಾಜ್ ಮತ್ತು ಅನಂತ್ ಕುಮಾರ್ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದಾರೆ. ಈ ಇಬ್ಬರು ನಾಯಕರು ರಾಜ್ಯದ ಇತರ ನಾಯಕರ ಮೂಲಕ ತನ್ನನ್ನು ಮಟ್ಟ ಹಾಕಲು ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿಯವರು ಪ್ರಮುಖವಾಗಿ ಕೆಂಗಣ್ಣು ಬೀರಿರುವುದು ಬಳ್ಳಾರಿ ಸಹೋದರರ ಮೇಲೆ. ಸರಕಾರವನ್ನು ಹಲವು ಬಾರಿ ಉಳಿಸಿರುವ ಹೊರತಾಗಿಯೂ ನಾಯಕತ್ವ ಬದಲಾವಣೆಗೆ ಒತ್ತು ನೀಡುತ್ತಾ ಪಿತೂರಿ ನಡೆಸುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿಯವರ ಮೇಲೆ ಕಿಡಿ ಕಾರಿರುವ ಸಿಎಂ, ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಜಗದೀಶ್ ಶೆಟ್ಟರ್, ಈಶ್ವರಪ್ಪ ಮತ್ತು ಅನಂತ್ ಕುಮಾರ್ -- ಈ ಮೂವರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕೆಲವು ಶಾಸಕರು ಮತ್ತು ನಾಯಕರು ಪರೋಕ್ಷವಾಗಿ ಯತ್ನಿಸುತ್ತಿದ್ದಾರೆ. ಇಂತಹ ಯತ್ನಕ್ಕೆ ರೆಡ್ಡಿಗಳು, ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಸಾಥ್ ನೀಡುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿ ಗಡ್ಕರಿಯವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ