ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ; 69 ಪರವಾನಗಿ ರದ್ದಿಗೆ ಟ್ರಾಯ್ ಶಿಫಾರಸು (2G scam | TRAI | A Raja | Kapil Sibal)
Bookmark and Share Feedback Print
 
ಮಹತ್ವದ ಬೆಳವಣಿಗೆಯೊಂದರಲ್ಲಿ 2008ರಲ್ಲಿ ಪರವಾನಗಿಗಳನ್ನು ಪಡೆದುಕೊಂಡಿದ್ದ ಸ್ವಾನ್, ಯುನಿನಾರ್ ಮತ್ತು ವೀಡಿಯೋಕಾನ್ ಸೇರಿದಂತೆ ಐದು ಕಂಪನಿಗಳಿಗೆ ನೀಡಿದ್ದ 69 ಪರವಾನಗಿಗಳನ್ನು ರದ್ದು ಮಾಡುವಂತೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.

ಒಪ್ಪಂದದಲ್ಲಿ ಷರತ್ತು ವಿಧಿಸಿರುವಂತೆ ನೆಟ್‌ವರ್ಕ್‌ನ್ನು ಜಾರಿಗೆ ತರದೇ ಇರುವುದು ಅಥವಾ ನಿಯಮಗಳನ್ನು ಪಾಲಿಸದೇ ಇರುವುದನ್ನು ಮುಂದಿಟ್ಟುಕೊಂಡು ಇವುಗಳ ಪರವಾನಗಿಗಳನ್ನು ರದ್ದು ಮಾಡುವಂತೆ ದೂರವಾಣಿ ಸಚಿವಾಲಯಕ್ಕೆ ಟ್ರಾಯ್ ಶಿಫಾರಸು ಮಾಡಲಾಗಿದೆ.

2008ರಲ್ಲಿ ಹೊಸ ಕಂಪನಿಗಳಿಗೆ ಹರಾಜು ನಡೆಸದೆ 2ಜಿ ತರಂಗಾಂತರಗಳನ್ನು ಹಂಚಿಕೆ ಮಾಡಿ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿಗಳ ನಷ್ಟವನ್ನುಂಟು ಮಾಡಿದ್ದಕ್ಕೆ ದೂರಸಂಪರ್ಕ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದ್ದ ಮಹಾ ಲೆಕ್ಕಪರಿಶೋಧಕರ ವರದಿ ಬಹಿರಂಗವಾದ ನಂತರ ಟ್ರಾಯ್ ಈ ಕ್ರಮಕ್ಕೆ ಮುಂದಾಗಿದೆ.

ಟ್ರಾಯ್ ವರದಿಗಳ ಪ್ರಕಾರ ಇಟಿಸಲಾಟ್ (Etisalat) ಸಂಸ್ಥೆಗೆ 15 ವಲಯಗಳಲ್ಲಿ ನೀಡಲಾಗಿದ್ದ ಪರವಾನಗಿಗಳನ್ನು ರದ್ದು ಮಾಡಲು ಶಿಫಾರಸು ಮಾಡಲಾಗಿದೆ. ಈ ಕಂಪನಿ ಹಿಂದೆ 'ಸ್ವಾನ್' (Swan) ಎಂದಾಗಿತ್ತು. ಇದೇ ಕಂಪನಿ ಅನಿಲ್ ಅಂಬಾನಿ ಸಮೂಹದ ಸಂಸ್ಥೆ ಎಂದು ಮಹಾ ಲೆಕ್ಕಪರಿಶೋಧಕರ ವರದಿ ಶಂಕೆ ವ್ಯಕ್ತಪಡಿಸಿತ್ತು.

ಯುನಿಟೆಕ್ ಸಮೂಹದ 'ಯುನಿನಾರ್' ಕಂಪನಿಯ ಎಂಟು ವಲಯಗಳು, ರಷ್ಯಾದ ಸಿಸ್ಟೆಮಾ ಮತ್ತು ಭಾರತದ ಶ್ಯಾಮ್ ಸಮೂಹದ ಜಂಟಿ ಸಂಸ್ಥೆ 'ಸಿಸ್ಟೆಮಾ-ಶ್ಯಾಮ್'ಗೆ ನೀಡಲಾಗಿರುವ 10 ವಲಯಗಳು, ವೀಡಿಯೋಕಾನ್‌ಗೆ ನೀಡಲಾಗಿರುವ 10 ವಲಯಗಳು, ಮಹೇಂದ್ರಾ ನಹ್ತಾ‌ರಲ್ಲಿದ್ದ ಕಂಪನಿಯನ್ನು ಖರೀದಿಸಿದ್ದ ವೇಣುಗೋಪಾಲ್ ಧೂತ್ ನೇತೃತ್ವದ ಸಂಸ್ಥೆಯ 'ಡಾಟಾಕಾಮ್' ಮತ್ತು ಲೂಪ್ ಸಂಸ್ಥೆಯ 19 ಪರವಾನಗಿಗಳನ್ನು ರದ್ದು ಮಾಡುವಂತೆ ಶಿಫಾರಸು ಮಾಡಲಾಗಿದೆ.

ಟ್ರಾಯ್ ಶಿಫಾರಸು ಮಾಡಿರುವ 34 ವಲಯಗಳಗಳಲ್ಲಿ ಕಂಪನಿಗಳು ಸೇವೆಯನ್ನು ಆರಂಭಿಸಿಯೇ ಇಲ್ಲ ಮತ್ತು 28 ವಲಯಗಳಲ್ಲಿ ಸಮರ್ಪಕವಾಗಿ ಸೇವೆಯನ್ನು ನೀಡುತ್ತಿಲ್ಲ ಎಂದು ಹೇಳಲಾಗಿದೆ.

ಇಂತಹ ಮಹತ್ವದ ಶಿಫಾರಸನ್ನು ಟ್ರಾಯ್ ಮಾಡುತ್ತಿದ್ದಂತೆ ಆತಂಕಕ್ಕೀಡಾಗಿರುವ ದೂರಸಂಪರ್ಕ ಸಚಿವ ಕಪಿಲ್ ಸಿಬಲ್, ದೂರಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ, ಸರಕಾರದ ಜತೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆಗಲಿವೆ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ