ತಿರುವನಂತಪುರಂ, ಶುಕ್ರವಾರ, 19 ನವೆಂಬರ್ 2010( 09:32 IST )
ಕೇರಳ ಪೊಲೀಸರು ನಡೆಸಿರುವ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಕೊಯಿಕ್ಕೋಡ್ ಜಿಲ್ಲೆಯ ನಾದಪುರಂ ಎಂಬಲ್ಲಿಂದ 21 ಸ್ಟೀಲ್ ಬಾಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಾತ್ಕಾಲಿಕ ಶೆಡ್ ಒಂದರಲ್ಲಿ ಈ ಬಾಂಬುಗಳನ್ನು ಇಡಲಾಗಿತ್ತು. ಇಲ್ಲಿ ಸಿಪಿಎಂ ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತರು ಈ ಹಿಂದೆ ಘರ್ಷಣೆಗಳಲ್ಲಿ ತೊಡಗಿಸಿಕೊಂಡಿದ್ದರು.