ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೆಕ್ಸ್ ಸಮೀಕ್ಷೆ; ಆಧುನಿಕ ಸ್ತ್ರೀ ಇನ್ನೂ ಪುರುಷನಷ್ಟು ತೃಪ್ತಳಲ್ಲ
(Sex Survey 2010 | Women | What women want? | India)
ಸೆಕ್ಸ್ ಸಮೀಕ್ಷೆ; ಆಧುನಿಕ ಸ್ತ್ರೀ ಇನ್ನೂ ಪುರುಷನಷ್ಟು ತೃಪ್ತಳಲ್ಲ
ನವದೆಹಲಿ, ಶುಕ್ರವಾರ, 19 ನವೆಂಬರ್ 2010( 14:46 IST )
ಸೆಕ್ಸ್ ಎನ್ನುವುದು ಪುರುಷನೊಬ್ಬನದೇ ಸೊತ್ತೇ? ಈ ಬಗ್ಗೆ ಮಹಿಳೆ ಪ್ರಶ್ನೆಗಳನ್ನೇ ಎತ್ತಬಾರದೇ? ಅದು ಆಕೆಯ ಹಕ್ಕು, ಆಯ್ಕೆ ಮತ್ತು ಸ್ವಾತಂತ್ರ್ಯ ಯಾಕಾಗಬಾರದು? ಇಂತಹ ಹತ್ತು ಹಲವು ಪ್ರಶ್ನೆಗಳು ಸೆಕ್ಸ್ ಕುರಿತು ನಡೆಸಲಾದ ಸಮೀಕ್ಷೆಯ ನಂತರ ಹುಟ್ಟಿದೆ.
ಸೆಕ್ಸ್ ಎಂದರೆ ಮೂಗು ಮುರಿಯುವ ಕಾಲ ಇದಲ್ಲ. ಹಾಗೆ ಮಾಡಿದಲ್ಲಿ ಪ್ರಕೃತಿ ಒದಗಿಸಿದ ಸುಪ್ಪತ್ತಿಗೆಯನ್ನು ವಿನಾ ಕಾರಣ ಸಂಪ್ರದಾಯಗಳ ಹೆಸರಿನಲ್ಲಿ ನೀವು ಕಳೆದುಕೊಳ್ಳುತ್ತಿದ್ದೀರಿ ಎಂದೇ ಅರ್ಥ. ಒಂದು ಆರೋಗ್ಯಕರ ಸಂಬಂಧಕ್ಕೆ ನಮ್ಮ ಸಮಾಜವು ವೇದಿಕೆಯನ್ನು ಕಲ್ಪಿಸಿರುವಾಗ, ಅದನ್ನು ಸ್ವತಂತ್ರವಾಗಿ, ಮುಕ್ತವಾಗಿ, ಸಂತೋಷವಾಗಿ ಯಾಕೆ ಅನುಭವಿಸಬಾರದು ಎನ್ನುವುದು ಇಂದಿನ ಆಧುನಿಕ ಮಹಿಳೆಗೆ ತಿಳಿದಿದೆ.
IFM
ಲೈಂಗಿಕ ಸಂಬಂಧದಲ್ಲಿ ಪುರುಷನದ್ದೇ ಮೇಲುಗೈ. ಆತ ಆಡಿದ್ದೇ ಆಟ. ಮಹಿಳೆ ಏನಿದ್ದರೂ ಬಳಸಲ್ಪಡುವವಳು. ಆಕೆಗೆ ಪುರುಷನಷ್ಟು ಆಸಕ್ತಿಯಿಲ್ಲ. ಎಲ್ಲೋ ರೊಮ್ಯಾಂಟಿಕ್ ಆಗಿರುವುದು, ಮಳೆಯಲ್ಲಿ ನೆನೆಯುವುದು, ನುಣ್ಣಗೆ ಕೈ-ಕೈ ಹಿಡಿದುಕೊಂಡು ಹೋಗುವುದು, ಒಂದು ಪ್ರೀತಿಯ ಅಪ್ಪುಗೆ, ಹೂ ಮುಡಿಸುವುದು -- ಇಂತಹ ಓಬೀರಾಯನ ಕಾಲದ ಕಲ್ಪನೆಗಳನ್ನು ಗಂಡಸರು ಬಿಡಲೇಬೇಕಾದ ಅನಿವಾರ್ಯತೆ ಈ ಸೆಕ್ಸ್ ಸಮೀಕ್ಷೆಯಿಂದ ಬಹಿರಂಗವಾಗಿದೆ.
ರತಿಕ್ರೀಡೆಯ ಪ್ರಾಮುಖ್ಯತೆಯನ್ನೇ ಪ್ರಮುಖವಾಗಿ ತೆಗೆದುಕೊಂಡಾಗ ಶೇ.70ರಷ್ಟು ಮಹಿಳೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮುನ್ನೊಲಿವು ಜಾಸ್ತಿ ಬೇಕು, ಭಿನ್ನ ಭಂಗಿಗಳ ಅಗತ್ಯವಿದೆ, ಒಟ್ಟಾರೆ ಸೆಕ್ಸ್ ನಮಗೆ ತೃಪ್ತಿ ತಂದಿಲ್ಲ ಎಂದು ಮಹಿಳೆಯರಿಂದ ಸಾರ್ವತ್ರಿಕ ಅಭಿಪ್ರಾಯ ಹೊರ ಬಂದಿದೆ.
18ರ ವಯಸ್ಕ ಹುಡುಗ-ಹುಡುಗಿಯರಿಂದ ಹಿಡಿದು 60 ವರ್ಷಗಳ ಹಿರಿಯ ಜೀವಗಳಲ್ಲಿ ತಮ್ಮ ಲೈಂಗಿಕ ಜೀವನದ ಕುರಿತು ಪ್ರಶ್ನಿಸಲಾಗಿದೆ. ದೆಹಲಿ, ಚೆನ್ನೈ, ಹೈದರಾಬಾದ್, ಅಹಮದಾಬಾದ್, ಪಾಟ್ನಾ, ಮುಂಬೈ, ಬೆಂಗಳೂರು, ಲಕ್ನೋ, ಜೈಪುರ, ಲುಧಿಯಾನಾ ಮತ್ತು ಕೊಲ್ಕತ್ತಾಗಳ 2,664 ಮಹಿಳೆಯರು ಹಾಗೂ 2,705 ಪುರುಷರು (ಒಟ್ಟು 5,369) ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಅನುಭವ, ಅಭಿಪ್ರಾಯ, ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
'ಸೆಕ್ಸ್ ಸರ್ವೇ 2010' ಎಂಬ ಈ ಸಮೀಕ್ಷೆಯನ್ನು ನಡೆಸಿರುವುದು 'ಇಂಡಿಯಾ ಟುಡೇ'. ಪತ್ರಿಕೆಯ ಕೃಪೆಯೊಂದಿಗೆ ವರದಿಯನ್ನು ಪ್ರಕಟಿಸಲಾಗಿದೆ.
ಸೆಕ್ಸ್ ಎಷ್ಟು ಮುಖ್ಯ? ನಿಮ್ಮ ಜೀವನದಲ್ಲಿ ಸೆಕ್ಸ್ ನಿರ್ಣಾಯಕ ಪಾತ್ರ ವಹಿಸುತ್ತದೆಯೇ ಎಂದು ಮಹಿಳೆಯರನ್ನು ಕೇಳಿದಾಗ, 'ಹೌದು, ಸೆಕ್ಸ್ ಮಹತ್ವವಾದುದು' ಎಂದು ಹೇಳಿದವರು ಶೇ.70 ಮಂದಿ. ಶೇ.6 ಮಹಿಳೆಯರು 'ಮಹತ್ವದ್ದಲ್ಲ' ಎಂದರೆ, ಶೇ.4 ಸ್ತ್ರೀಯರಿಗೆ 'ಯಾವ ರೀತಿಯಿಂದಲೂ ಮಹತ್ವದ್ದಲ್ಲ'. ಶೇ.14 ಮಹಿಳೆಯರು ಮೇಲೆ ಹೇಳಿದ ಯಾವುದನ್ನೂ ಒಪ್ಪಿಕೊಂಡಿಲ್ಲ.
ಈಗ ಸೆಕ್ಸ್ ಲೈಫ್ ಹೇಗಿದೆ? ನಿಮ್ಮ ಪ್ರಸಕ್ತ ಲೈಂಗಿಕ ಜೀವನವನ್ನು ನೀವು ಹೇಗೆ ಬಣ್ಣಿಸಲು ಬಯಸುತ್ತೀರಿ ಎಂಬ ಪ್ರಶ್ನೆಗೆ, 'ಥ್ರಿಲ್ಲಿಂಗ್' ಎಂದವರು ಶೇ.17 ಮಹಿಳೆಯರು ಮಾತ್ರ. ಶೇ.35 ಮಂದಿ 'ಸಂತೃಪ್ತರು' ಎಂದರೆ, ಶೇ.26 ಮಹಿಳೆಯರಿಗೆ 'ಅಲ್ಲಿಂದಲ್ಲಿಗೆ ತೃಪ್ತಿ' ಸಿಕ್ಕಿದೆ. ಶೇ.5 ಮಂದಿ ಬೋರ್ ಎಂದು ಹೇಳಿಕೊಂಡಿದ್ದಾರೆ.
ಜೀವನದ ಮಜಲುಗಳಲ್ಲಿ ನೀವೆಷ್ಟು ತೃಪ್ತರು? ನಿಮ್ಮ ಜೀವನದ ಹಲವು ವಿಚಾರಗಳಲ್ಲಿ ನೀವು ಪಡೆದಿರುವ ತೃಪ್ತಿ ಯಾವ ಮಟ್ಟದಲ್ಲಿದೆ ಎಂದಾಗ 'ಸೆಕ್ಸ್ ಮತ್ತು ರೊಮ್ಯಾನ್ಸ್' ವಿಭಾಗದಲ್ಲಿ ಮಹಿಳೆಯರು ಶೇ.59ರಷ್ಟು ಮಾತ್ರ ತೃಪ್ತರು ಎಂಬ ಉತ್ತರ ಬಂದಿದೆ. ಒಡನಾಟ ಮತ್ತು ಜೀವನಶೈಲಿಯಲ್ಲಿ ಶೇ.86, ಕುಟುಂಬ ಮತ್ತು ಆಪ್ತರ ವಿಚಾರದಲ್ಲಿ ಶೇ.86, ಆರೋಗ್ಯ ವಿಭಾಗದಲ್ಲಿ ಶೇ.83, ಹಣಕಾಸು ವಿಚಾರದಲ್ಲಿ ಶೇ.82 ಹಾಗೂ ವೃತ್ತಿ ಜೀವನದಲ್ಲಿ ಶೇ.42ರಷ್ಟು ತಾವು ತೃಪ್ತರು ಎಂದು ಹೇಳಿಕೊಂಡಿದ್ದಾರೆ.
ಮತ್ತಷ್ಟು ಲೈಂಗಿಕ ತೃಪ್ತಿಗೆ ಏನು ಮಾಡ್ತೀರಿ? ಲೈಂಗಿಕ ಜೀವನದಲ್ಲಿ ಮತ್ತಷ್ಟು ತೃಪ್ತಿಗಾಗಿ ತಾವು ಏನು ಮಾಡುವಿರಿ ಎಂಬ ಪ್ರಶ್ನೆಗೆ ಶೇ.20 ಮಹಿಳೆಯರು, ತಾವು ತಮ್ಮ ಸಂಗಾತಿಯ ಕಾಮಪ್ರಚೋದಕ ಸೂಕ್ಷ್ಮ ಭಾಗಗಳನ್ನು ಗುರುತಿಸಿ ವಿನೂತನ ಯತ್ನ ಮಾಡುವುದಾಗಿ ಹೇಳಿದ್ದಾರೆ. ಅಷ್ಟೇ ಮಹಿಳೆಯರು ತಾವು ಭಿನ್ನ ಭಂಗಿಯಲ್ಲಿ ಯತ್ನಿಸುತ್ತೇವೆ ಎಂದಿದ್ದಾರೆ. ಸುದೀರ್ಘ ಕಾಮಚಟುವಟಿಕೆಗೆ ಮುಂದಾಗುತ್ತೇವೆ ಎಂದು ಶೇ.18 ಸ್ತ್ರೀಯರು ಹೇಳಿದ್ದರೆ, ಶೇ.24 ಮಂದಿ ತಾವು ಮೇಲೆ ಹೇಳಿರುವುದಕ್ಕಿಂತ ಬೇರೆಯ ಯತ್ನ ಮಾಡುವುದಾಗಿ ಹೇಳಿದ್ದಾರೆ.
ಸೆಕ್ಸ್ ನಂತರದ ಭಾವನೆ? ಸಾಮಾನ್ಯವಾಗಿ ಕಾಮ ಚಟುವಟಿಕೆ ಮುಗಿಸಿದ ನಂತರ ನಿಮಗೆ ಬಯಕೆ ಈಡೇರಿದ ಅನುಭವ ಬರುತ್ತದೆಯೇ ಎಂಬುದು ಮತ್ತೊಂದು ಪ್ರಶ್ನೆ. ಹೌದು, ಯಾವತ್ತೂ ಹೀಗೆ ಅನ್ನಿಸಿದೆ ಎಂದವರು ಶೇ.23 ಮಹಿಳೆಯರು. ಕೆಲವು ಬಾರಿ ಮಾತ್ರ ತೃಪ್ತಳಾಗಿದ್ದೇನೆ ಎಂದವರು ಶೇ.35, ಬಹುಮಟ್ಟಿಗೆ ತೃಪ್ತರು ಎಂದು ಶೇ.20 ಮಂದಿ ಹೇಳಿದರೆ, ಅಂತಹ ಅನುಭವದಿಂದ ತಾವು ತುಂಬಾ ದೂರ ಎಂದವರು ಶೇ.4 ಸ್ತ್ರೀಯರು.
IFM
ಮುನ್ನೊಲಿವು ಹೇಗಿರುತ್ತದೆ? ಕಾಮಕೂಟಕ್ಕೆ ಮುಂದಾಗುವ ಮೊದಲು ನಡೆಸುವ ರೊಮ್ಯಾನ್ಸ್ ಯಾವ ರೀತಿಯಲ್ಲಿರುತ್ತದೆ ಮತ್ತು ಹೇಗಿರುತ್ತದೆ ಎಂಬ ಪ್ರಶ್ನೆಗಳನ್ನು ಕೂಡ ಕೇಳಲಾಗಿತ್ತು. ಶೇ.50ರಷ್ಟು ಮಹಿಳೆಯರು ಇದಕ್ಕೆ 'ಕಿಸ್' ಎಂದಿದ್ದಾರೆ. 'ಮಸಾಜ್' ಎಂದವರು ಶೇ.24ರಷ್ಟು ಮಂದಿ ಮಾತ್ರ. 'ನೋಡುವುದು' ಎಂದವರು ಶೇ.9ರಷ್ಟಾದರೆ, ವಿವಸ್ತ್ರಗೊಳ್ಳುತ್ತೇವೆ ಎಂದವರು ಶೇ.8. ತಾವು ಅಶ್ಲೀಲ ಚಿತ್ರಗಳನ್ನು ನೋಡುತ್ತೇವೆ ಎಂದು ಶೇ.5 ಮಂದಿ ಹೇಳಿದ್ದಾರೆ.
ಮುನ್ನೊಲಿವಿಗೆ ಎಷ್ಟು ಸಮಯ ಮೀಸಲಿಡುತ್ತೀರಿ ಎಂದಾಗ ಕೇವಲ ಐದೇ ನಿಮಿಷ ಎಂದು ಶೇ.34 ಮಹಿಳೆಯರು ಹೇಳಿದ್ದಾರೆ. ಅದರಲ್ಲೂ 35ರಿಂದ 40ರ ನಡುವಿನವರು ಅತಿ ಕಡಿಮೆ ಸಮಯವನ್ನು ಪ್ರಣಯ ಚೇಷ್ಟೆಗೆ ಮೀಸಲಿಡುವುದಾಗಿ ತಿಳಿಸಿದ್ದಾರೆ.
ಮಹಿಳೆಯರ ಬಯಕೆಯ ಪಟ್ಟಿಯಲ್ಲೇನಿದೆ? ಪ್ರೀತಿ, ಪ್ರೇಮ ಎಂದಷ್ಟೇ ಪುರುಷರು ತಿಳಿದುಕೊಂಡಿದ್ದರೆ, ಅದು ಶುದ್ಧ ಮೂರ್ಖತನವಲ್ಲದೆ ಮತ್ತೇನಲ್ಲ. ಅದೇನೆಂಬುದಕ್ಕೆ ವಾಸ್ತವಿಕ ಅಂಶಗಳು ಇಲ್ಲಿವೆ ನೋಡಿ. ಕಾಮಕ್ರೀಡೆ ವಿನೂತನವಾಗಿರಬೇಕು ಎಂದು ಶೇ.64, ಭಿನ್ನ ಸಂದರ್ಭಗಳಲ್ಲಿ ಸೆಕ್ಸ್ ಎಂದು ಶೇ.67, ಹೊಸ ರೀತಿಯ ಪ್ರಣಯ ಚೇಷ್ಟೆಗಳು ಬೇಕೆಂದು ಶೇ.68, ಕಾಮ ಪರಾಕಾಷ್ಠೆಯಲ್ಲಿ ತೃಪ್ತಿ ಬೇಕೆಂದು ಶೇ.83, ಸಿನಿಮಾಗಳಲ್ಲಿ ಕಾಣುವ ಹಾಗೆ ಸೆಕ್ಸ್ ಮಾಡಬೇಕೆಂದು ಶೇ.51 ಮಂದಿ ಮಹಿಳೆಯರು ಬಯಸುತ್ತಿದ್ದಾರೆ.
ನಿಮ್ಮ ಸುಖ ಎಷ್ಟು ಮುಖ್ಯ? ಲೈಂಗಿಕ ಜೀವನವೆಂದರೆ ಕೊಡುವುದು ಮತ್ತು ಪಡೆದುಕೊಳ್ಳುವುದು ಎನ್ನುವುದು ಸಾಂಪ್ರದಾಯಿಕ ಮಾತು. ಇದೇ ಸತ್ಯವೇ ಅಂದರೆ, ಪುರುಷರು ಫೇಲಾಗುತ್ತಾರೆ. ಬಹುತೇಕ ಪುರುಷರು ಸ್ವಾರ್ಥಿಗಳಾಗಿರುತ್ತಾರೆ. ಈ ಸಮೀಕ್ಷೆಯಲ್ಲೂ ಅದು ಬಹಿರಂಗವಾಗಿದೆ. ಶೇ.25 ಮಂದಿ ಪುರುಷರು ತಮ್ಮ ಸಂಗಾತಿಯ ಸುಖಕ್ಕಿಂತ ತಮ್ಮ ಸುಖವೇ ಮೊದಲು ಎಂದು ಹೇಳಿಕೊಂಡಿದ್ದಾರೆ.
ಮಹಿಳೆಯರ ವಿಚಾರಕ್ಕೆ ಬರುವುದಾದರೆ, ಸಂಗಾತಿಯ ಸುಖಕ್ಕಿಂತ ತಮ್ಮ ಸುಖವೇ ಮುಖ್ಯ ಎಂದವರು ಶೇ.13 ಮಾತ್ರ. ನಮ್ಮ ಸುಖದ ಜತೆ ಸಂಗಾತಿಯ ಸುಖವೂ ಮುಖ್ಯ ಎಂದು ಶೇ.44 ಮಹಿಳೆಯರು ಹೇಳಿದ್ದಾರೆ. ಕೊಡುವುದರಲ್ಲಿ ನಾನು ಹೆಚ್ಚು ನಂಬಿಕೆ ಇಟ್ಟಿದ್ದೇನೆ ಎಂದ ಮಹಿಳೆಯರು ಶೇ.19. ನನ್ನ ಸುಖ ಇಲ್ಲಿ ಮುಖ್ಯವಲ್ಲ ಎಂದು ಶೇ.6 ಸ್ತ್ರೀಯರು ಅಭಿಪ್ರಾಯಪಟ್ಟಿದ್ದಾರೆ.
ಎಷ್ಟು ದಿನಕ್ಕೊಮ್ಮೆ ಸೇರುತ್ತೀರಿ? ಸಾಮಾನ್ಯವಾಗಿ ನೀವು ಎಷ್ಟು ದಿನಕ್ಕೊಮ್ಮೆ ಸೇರುತ್ತೀರಿ ಎಂಬ ಪ್ರಶ್ನೆಯನ್ನೂ ಕೇಳಲಾಗಿತ್ತು. ಅಚ್ಚರಿಯೆಂಬಂತೆ ದಿನಾ ಕಾಮನ ಹಬ್ಬ ನಡೆಸುತ್ತೇವೆ ಎಂದವರು ಶೇ.6 ಮಂದಿ. ವಾರಕ್ಕೆ ಒಂದು ಬಾರಿಗಿಂತ ಹೆಚ್ಚು ಎಂದು ಶೇ.25, ವಾರಕ್ಕೊಂದು ಎಂದು ಶೇ.22, ತಿಂಗಳಿಗೊಮ್ಮೆ ಎಂದು ಶೇ.15 ಹಾಗೂ ಸೆಕ್ಸ್ ಮಾಡೋದೇ ಇಲ್ಲ ಎಂದವರು ಶೇ.20.
ತೃಪ್ತಿ ಕೊಡದಿದ್ದರೆ ಏನು ಮಾಡ್ತೀರಿ? ಲೈಂಗಿಕ ಜೀವನ ನಿಮಗೆ ಸಂತಸ, ತೃಪ್ತಿಯನ್ನು ನೀಡದಿದ್ದರೆ ನಿಮ್ಮ ಮುಂದಿನ ಹೆಜ್ಜೆ ಯಾವುದು ಎಂದು ಸಮೀಕ್ಷೆಯಲ್ಲಿ ಪ್ರಶ್ನಿಸಲಾಗಿತ್ತು. ಹಾಗಾದಲ್ಲಿ ತಾವು ತಮ್ಮ ಸಂಗಾತಿಯ ಜತೆ ಸಮಾಲೋಚನೆ ನಡೆಸುತ್ತೇವೆ ಎಂದು ಶೇ.53 ಮಹಿಳೆಯರು ಹೇಳಿದ್ದಾರೆ.
ಸುರಕ್ಷಿತ ಎಂದೇ ಹೇಳಲಾಗುವ ಹಸ್ತಮೈಥುನಕ್ಕೆ ಮುಂದಾಗುವವರು ಶೇ.4 ಮಂದಿಯಾದರೆ, ಅಕ್ರಮ ಸಂಬಂಧಕ್ಕೆ ಮುಂದಾಗುತ್ತೇವೆ ಎಂದವರು ಶೇ.5. ಏನೂ ಮಾಡಲ್ಲ ಎಂದು ಶೇ.16 ಮಹಿಳೆಯರು ತಿಳಿಸಿದ್ದಾರೆ.
ಸಂಗಾತಿ ವಂಚಿಸಿದರೆ? ವಿವಾಹೇತರ ಸಂಬಂಧಗಳಂತಹ ವಿಶ್ವಾಸ ದ್ರೋಹಗಳು ನಿಮ್ಮ ಜೀವನದಲ್ಲಿ ಎದುರಾದರೆ ಏನು ಮಾಡುತ್ತೀರಿ? ಇಲ್ಲೂ ಸಮಾಲೋಚನೆಯ ಹಾದಿಯನ್ನು ಆಯ್ಕೆ ಮಾಡಿಕೊಂಡಿರುವವರು ಶೇ.44ರಷ್ಟು ಮಹಿಳೆಯರು. ನಾನೂ ಹಾಗೆ ಮಾಡ್ತೇನೆ ಎಂದು ಶೇ.22 ಮಂದಿ ಎಚ್ಚರಿಕೆ ನೀಡಿದರೆ, ಸಂಬಂಧಕ್ಕೆ ಇತಿಶ್ರೀ ಹಾಡಲು ಶೇ.9 ಮಂದಿ ಬಯಸುತ್ತಾರೆ. ಇಲ್ಲೂ ಕ್ಷಮಾಗುಣವನ್ನು ಶೇ.8 ಸ್ತ್ರೀಯರು ತೋರಿಸಿದ್ದಾರೆ.
ದಿನವನ್ನು ರೊಮ್ಯಾಂಟಿಕ್ ಮಾಡಲು? ಸುಖಾಸುಮ್ಮನೆ ಸಾಗುತ್ತಿರುವ ದಿನವನ್ನು ಮಾದಕ ದಿನವನ್ನಾಗಿ ಪರಿವರ್ತಿಸಲು ಆರಿಸುವ ಉತ್ತಮ ಮಾರ್ಗ ಯಾವುದು ಎಂಬುದಕ್ಕೆ ಶೇ.41ರಷ್ಟು ಗರಿಷ್ಠ ಉತ್ತರ ಬಂದಿರುವುದು ಮನೆಯಲ್ಲೇ ಕಾಲ ಕಳೆಯುವುದು. ರೆಸ್ಟಾರೆಂಟ್‌ಗೆ ಹೋಗುತ್ತೇವೆ ಎಂದು ಶೇ.30, ಸಿನಿಮಾಕ್ಕೆ ಹೋಗ್ತೇವೆ ಎಂದು ಶೇ.19 ಹಾಗೂ ಮೊಂಬೆಳಕಿನಲ್ಲಿ ರಾತ್ರಿಯೂಟಕ್ಕೆ ಮುಂದಾಗುತ್ತೇವೆ ಎಂದು ಶೇ.12 ಮಹಿಳೆಯರು ಹೇಳಿದ್ದಾರೆ.
ಸಂಗಾತಿಯ ದೇಹದ ಯಾವ ಭಾಗ ಇಷ್ಟ? ಪುರುಷನಲ್ಲಿ ನಿಮಗೆ ಲೈಂಗಿಕವಾಗಿ ಹೆಚ್ಚು ಆಕರ್ಷಿತವಾಗುವ ದೇಹದ ಭಾಗ ಯಾವುದು ಎಂದು ಮಹಿಳೆಯರಲ್ಲಿ ಪ್ರಶ್ನಿಸಿದಾಗ, ಶೇ.26ರಷ್ಟು ಮಂದಿ ಸಂಗಾತಿಯ ರೋಮವಿರುವ ಎದೆ ಎಂದಿದ್ದಾರೆ. ಶೇ.23 ಮಹಿಳೆಯರು ಜನನಾಂಗ ಎಂದಿದ್ದರೆ, ತೊಡೆ ಸ್ನಾಯುಗಳು ಎಂದವರು ಶೇ.18 ಮಂದಿ. ಶೇ.6 ಮಂದಿ ಸಂಗಾತಿಯ ಪೃಷ್ಠ ತಮ್ಮನ್ನು ಕೆರಳಿಸುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಇದೇ ಪ್ರಶ್ನೆಯನ್ನು ಪುರುಷರಲ್ಲಿ ಕೇಳಲಾಯಿತು. ಅಲ್ಲಿ ಶೇ.50 ಮಂದಿ ತಮಗೆ ಮಹಿಳೆಯ ಕುಚಗಳು, ಶೇ.13 ಮಂದಿ ಸೊಂಟ, ಶೇ.9ರಷ್ಟು ಪುರುಷರು ಜನನಾಂಗ, ಶೇ.8ರಷ್ಟು ಮಂದಿ ಮುಖ ಹಾಗೂ ಶೇ.7 ಪುರುಷರು ತಮಗೆ ಕಣ್ಣುಗಳು ಕಾಮ ಪ್ರಚೋದಕ ಎನಿಸುತ್ತವೆ ಎಂದಿದ್ದಾರೆ.