ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೀಘ್ರದಲ್ಲೇ ಮದುವೆಯಾಗುತ್ತೇನೆ: ರಾಹುಲ್ ಗಾಂಧಿ ಸಿಹಿಸುದ್ದಿ (Congress | Nehru family | Rahul Gandhi | Rahul marriage)
Bookmark and Share Feedback Print
 
ತನ್ನ ಮದುವೆಯ ಕುರಿತ ಯೋಜನೆಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನೆಹರೂ ಕುಟುಂಬದ ಕುಡಿ ತನ್ನ ಅಮೇಠಿ ಲೋಕಸಭಾ ಕ್ಷೇತ್ರದ ಜನತೆಗೆ ಭರವಸೆ ನೀಡಿದ್ದಾರೆ.

ಮೂರು ದಿನಗಳ ಅಮೇಠಿ ಪ್ರವಾಸದಲ್ಲಿದ್ದ ರಾಹುಲ್ ಅವರಲ್ಲಿ ಇಲ್ಲಿನ ದೇವಿ ಪ್ರಸಾದ್ ಎಂಬವರು ಈ ಪ್ರಶ್ನೆ ಕೇಳಿದ್ದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಜನರ ಸಮಸ್ಯೆಗಳನ್ನು ಆಲಿಸಲು ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ಪ್ರಸಂಗ ರಾಹುಲ್‌ಗೆ ಎದುರಾಗಿತ್ತು. ನಿಮ್ಮ ಸಮಸ್ಯೆಯೇನು ಎಂದು ಪ್ರಸಾದ್ ಅವರಲ್ಲಿ ರಾಹುಲ್ ಪ್ರಶ್ನಿಸಿದಾಗ, 'ಅಮೇಠಿ ಎಂದು ಸೊಸೆಯನ್ನು ಪಡೆಯುತ್ತದೆ?' ಎಂದಿದ್ದರು.
PTI

ಇದರಿಂದ ತಕ್ಷಣವೇ ಪ್ರತಿಕ್ರಿಯಿಸಲು ಪರದಾಡಿದ 40ರ ಹರೆಯದ 'ಯುವ' ನಾಯಕ, ಶೀಘ್ರದಲ್ಲೇ ತನ್ನ ಮದುವೆಯ ಕುರಿತು ವಿವರಗಳನ್ನು ಬಹಿರಂಗಪಡಿಸುತ್ತೇನೆ. ಮದುವೆಯನ್ನು ತುಂಬಾ ಸಮಯ ಮುಂದೂಡುವುದಿಲ್ಲ ಎಂದರು.

ಸ್ಪಾನಿಷ್ ಗೆಳತಿ ವೆರೋನಿಕಾ ಜತೆ ಸುದೀರ್ಘ ಸಂಬಂಧ ಹೊಂದಿದ್ದ ರಾಹುಲ್, ತನ್ನ ತಂದೆಯಂತೆ ವಿದೇಶಿ ಯುವತಿಯನ್ನು (ರಾಜೀವ್ ಗಾಂಧಿ ಇಟಲಿಯ ಸೋನಿಯಾ ಗಾಂಧಿಯನ್ನು ಮದುವೆಯಾಗಿದ್ದು) ಮದುವೆಯಾಗಲಿದ್ದಾರಾ ಎಂಬುದು ಈ ಹಿಂದೆ ಜನರ ಬಾಯಲ್ಲಿ ಕುಣಿಯುತ್ತಿತ್ತು. ಈಗ ಶೀಘ್ರದಲ್ಲೇ ಮದುವೆಯಾಗಲಿದ್ದೇನೆ ಎಂದು ರಾಹುಲ್ ಹೇಳಿರುವುದರಿಂದ ಹಳೆ ಸಂಬಂಧದ ವಿಚಾರಗಳು ಮತ್ತೆ ಗರಿಗೆದರಿವೆ.

ರಾಹುಲ್ ಸಹೋದರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವರುಣ್ ಗಾಂಧಿಯವರು ಮುಂದಿನ ತಿಂಗಳು ದಾಂಪತ್ಯ ಜೀವನ ಪ್ರವೇಶಿಸುತ್ತಿರುವುದರಿಂದ ಈಗ ಕಾಂಗ್ರೆಸ್ ನಾಯಕ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಕೆಲವು ವರದಿಗಳ ಪ್ರಕಾರ ರಾಹುಲ್ ಗಾಂಧಿ ವೆರೋನಿಕಾ ಜತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಅದಕ್ಕಿರುವ ಕಾರಣ ಕುಟುಂಬ ಮತ್ತು ಪಕ್ಷದಲ್ಲಿನ ಒತ್ತಡ. ರಾಜೀವ್ ಗಾಂಧಿ ವಿದೇಶಿ ಯುವತಿಯನ್ನು ಮದುವೆಯಾದ ನಂತರ ಎದುರಿಸಿದ ಸಂಕಷ್ಟಗಳನ್ನು ಮತ್ತೆ ರಾಜಕೀಯದಲ್ಲಿ ರಾಹುಲ್ ಎದುರಿಸಬೇಕಾಗುವ ಭೀತಿಯ ಹಿನ್ನೆಲೆಯಲ್ಲಿ ಇಂತಹ ಬೆಳವಣಿಗೆ ಕಾಂಗ್ರೆಸ್ ನಾಯಕನ ವೈಯಕ್ತಿಕ ಜೀವನದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ