ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಗರಣಗಳ ಬಗ್ಗೆ ಬಾಯ್ಬಿಡ್ರೀ: ಪ್ರಧಾನಿ ಸಿಂಗ್‌ಗೆ ಗಡ್ಕರಿ (Manmohan Singh | Nitin Gadkari | 2G scam | CWG scam)
Bookmark and Share Feedback Print
 
2ಜಿ ತರಂಗಾಂತರ ಹಗರಣ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಅವ್ಯವಹಾರ ಪ್ರಕರಣಗಳ ಕುರಿತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮೌನವಾಗಿರುವುದು ಯಾಕೆ ಎಂದು ಪ್ರಶ್ನಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ನಾವೇನೂ ಅವರ ರಾಜೀನಾಮೆಗೆ ಆಗ್ರಹಿಸುತ್ತಿಲ್ಲ; ಆದರೆ ಈ ಕುರಿತು ಬಾಯಿ ಬಿಡಬೇಕು ಎಂದಷ್ಟೇ ಹೇಳುತ್ತಿದ್ದೇವೆ ಎಂದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಿಂಗ್ ಮೌನವನ್ನು ಟೀಕಿಸಿರುವ ಜತೆಗೆ ಬಿಜೆಪಿ ಹತ್ತು ಪ್ರಶ್ನೆಗಳನ್ನು ಪ್ರಧಾನಿ ಕಚೇರಿಯತ್ತ ಎಸೆದಿದೆ. ಇದಕ್ಕೆ ಪ್ರಧಾನಿ ಉತ್ತರಿಸಬೇಕು ಎಂದು ಒತ್ತಾಯಿಸಿರುವ ಕೇಸರಿ ಪಕ್ಷವು, ಎರಡೆರಡು ಹಗರಣಗಳ ಕುರಿತ ಜಂಟಿ ಸದನ ಸಮಿತಿ ತನಿಖೆಯ ಕುರಿತ ಪಟ್ಟಿನಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಮನ್‌ವೆಲ್ತ್ ಗೇಮ್ಸ್ ಹಗರಣದಲ್ಲಿ ಕಾಂಗ್ರೆಸ್‌ನ ದೊಡ್ಡ ನಾಯಕರಾದ ಸುರೇಶ್ ಕಲ್ಮಾಡಿ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಕ್ರೀಡಾ ಸಚಿವ ಎಂ.ಎಸ್. ಗಿಲ್ ಮುಂತಾದವರ ಹೆಸರು ಕೇಳಿ ಬಂದಿರುವುದರಿಂದ ಕೇವಲ ಸಿಬಿಐ ತನಿಖೆ ಸಾಲದು. ಇತ್ತೀಚೆಗೆ ನಡೆದಿರುವ ಬಹುತೇಕ ತನಿಖೆಗಳಲ್ಲಿ ಕಾಂಗ್ರೆಸ್ ಪರ ಸಿಬಿಐ ಬ್ಯಾಟಿಂಗ್ ನಡೆಸಿರುವುದರಿಂದ ಅದರ ಫಲಿತಾಂಶಗಳು ನಂಬಲರ್ಹವಲ್ಲ ಎಂದು ಗಡ್ಕರಿ ಅಭಿಪ್ರಾಯಪಟ್ಟರು.

ಯುಪಿಎ ಆಡಳಿತಾವಧಿಯಲ್ಲಿ ದೇಶದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈ ಹಿಂದೆಂದೂ ದೇಶ ಕಾಣದ ಭ್ರಷ್ಟಾಚಾರ ಈಗ ತಾಂಡವವಾಡುತ್ತಿದೆ. ಕಾಂಗ್ರೆಸ್ ಎನ್ನುವ ಪದ ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಎಂಬಂತಾಗಿದೆ ಎಂದೂ ಅವರು ಆರೋಪಿಸಿದರು.

ಭ್ರಷ್ಟಾಚಾರಗಳ ವಿರುದ್ಧ ಕ್ರಮ ಕೈಗೊಳ್ಳದ ಪ್ರಧಾನ ಮಂತ್ರಿಯವರ ಕುರಿತು ದೇಶದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು, ಅವರನ್ನು ಹೊಣೆಗಾರರನ್ನಾಗಿ ಮಾಡಿದೆ. ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿರುವ ಹಗರಣಗಳ ಕುರಿತು ಪ್ರಧಾನ ಮಂತ್ರಿ ಸಿಂಗ್ ಅವರಲ್ಲಿ ಪ್ರಶ್ನಿಸಲು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಹಕ್ಕು ಹೊಂದಿದ್ದಾನೆ ಎಂದು ನುಡಿದರು.

ಕೇಂದ್ರವು ಜಂಟಿ ಸದನ ಸಮಿತಿ ತನಿಖೆ ಬೇಡಿಕೆಯನ್ನು ಸ್ವೀಕರಿಸದಿದ್ದರೆ ತಮ್ಮ ಮುಂದಿನ ನಡೆ ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ನಾವು ಕೇಂದ್ರದ ಭ್ರಷ್ಟಚಾರವನ್ನು ಜನತೆಯ ಬಳಿಗೆ ಕೊಂಡೊಯ್ಯುತ್ತೇವೆ; ಜನತೆಗೆ ಪ್ರಕರಣದ ಗಂಭೀರತೆಯನ್ನು ಮನವರಿಕೆ ಮಾಡುತ್ತೇವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ