ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಗರಣ-ಸುಪ್ರೀಂ ಪ್ರಶ್ನೆ; ಪ್ರಧಾನಿಗೆ ಮುಜುಗರವಾಗಿಲ್ಲ: ರಾಹುಲ್ (Manmohan Singh | Supreme Court | 2G Spectrum scam | Rahul Gandhi)
Bookmark and Share Feedback Print
 
2ಜಿ ಹಗರಣದ ಸಂಬಂಧ ಮೌನವಾಗಿರುವುದಕ್ಕೆ ಸರ್ವೋಚ್ಚ ನ್ಯಾಯಾಲಯವು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಶ್ನಿಸಿರುವುದನ್ನು ಲಘುವಾಗಿ ಪರಿಗಣಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಇಲ್ಲಿ ಪ್ರಧಾನಿಗೆ ಮುಜುಗರ ಪರಿಸ್ಥಿತಿ ಎದುರಾಗಿದೆ ಎಂದುಕೊಳ್ಳಬೇಕಾಗಿಲ್ಲ ಎಂದಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಂಸತ್ ಹೊರಗಡೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ರಾಹುಲ್, 'ಇಲ್ಲಿ ಪ್ರಧಾನಿಯವರು ಮುಜುಗರ ಅನುಭವಿಸುವ ಪರಿಸ್ಥಿತಿಯಲ್ಲಿದ್ದಾರೆ ಎಂದು ನನಗನ್ನಿಸುತ್ತಿಲ್ಲ' ಎಂದು ಪ್ರಧಾನಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ಎತ್ತಿರುವ ಪ್ರಶ್ನೆಗಳು ಪ್ರಧಾನಿ ಸಿಂಗ್ ಅವರ ಸ್ಥಾನಕ್ಕೆ ಮುಜುಗರವನ್ನುಂಟು ಮಾಡಿದೆಯೇ ಎಂದು ಪತ್ರಕರ್ತರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಲ್ಲಿ ಪ್ರಶ್ನಿಸಿದ್ದರು.

2ಜಿ ತರಂಗಾಂತರ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ, ಹರಾಜು ಹಾಕದೆ ಹಂಚಿಕೆ ಮಾಡಲಾಗಿದೆ ಎಂದು ಎರಡು ವರ್ಷಗಳ ಹಿಂದೆಯೇ ಜನತಾ ಪಕ್ಷದ ಸುಬ್ರಮಣ್ಯನ್ ಸ್ವಾಮಿಯವರು ಪ್ರಧಾನಿಗೆ ದೂರು ನೀಡಿದ್ದರು. ಈ ಸಂಬಂದ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದ್ದರು. ಆದರೆ ಇದಕ್ಕೆ ಪ್ರಧಾನಿಯವರು ಬರೋಬ್ಬರಿ 16 ತಿಂಗಳುಗಳ ಕಾಲ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಇದನ್ನು ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್, 2ಜಿ ತರಂಗಾಂತರ ಹಂಚಿಕೆ ಕುರಿತ ರಾಜಾ ಪಾತ್ರದ ಕುರಿತು ಕ್ರಮ ಕೈಗೊಳ್ಳುವುದು ಅಥವಾ ನಿರಾಕರಿಸುವುದನ್ನು ಪ್ರಧಾನಿಯವರು ಮಾಡಬೇಕಿತ್ತು. ಎರಡನ್ನೂ ಮಾಡದೆ ಸುಮ್ಮನಿರುವುದು ಸಮಸ್ಯೆಯನ್ನು ಸೃಷ್ಟಿಸಿದೆ. ಯಾಕೆ ಮೌನವಾಗಿದ್ದಿರಿ? ಈ ಕುರಿತು ನೀವು ಕೋರ್ಟ್‌ಗೆ ವಿವರಣೆ ನೀಡಬೇಕು. ನಿಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದಿತ್ತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿಯವರು ಪ್ರಧಾನಿಯನ್ನು ಬಲವಾಗಿ ಸಮರ್ಥಿಸಿಕೊಂಡ ಮರುದಿನ ರಾಹುಲ್ ಗಾಂಧಿಯೂ ಅದೇ ಹಾದಿಯನ್ನು ತುಳಿದಿರುವುದು ಮಹತ್ವ ಪಡೆದುಕೊಂಡಿದೆ.

ಪ್ರಧಾನಿ ಸಿಂಗ್ ಅವರ ಪ್ರಾಮಾಣಿಕತೆ ಬಗ್ಗೆ ಇಡೀ ವಿಶ್ವದಲ್ಲೇ ಯಾರೊಬ್ಬರಿಗೂ ಸಂಶಯಗಳಿಲ್ಲ. ಅವರು ಕೈಗೊಂಡಿರುವ ನಿರ್ಧಾರಗಳು ಮತ್ತು ಹೊಂದಿರುವ ನಿಲುವುಗಳ ಬಗ್ಗೆ ಪಕ್ಷವು ಯಾವತ್ತೂ ಬೆಂಬಲ ವ್ಯಕ್ತಪಡಿಸಿದೆ ಮತ್ತು ಮುಂದೆಯೂ ಬೆಂಬಲಿಸುತ್ತದೆ. ಅವರ ಬೆನ್ನಿಗೆ ನಾವಿದ್ದೇವೆ. ಅವರು ಸಮರ್ಥರು ಎಂದು ದ್ವಿವೇದಿ ಸಮರ್ಥಿಸಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ