ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಮ್ಮು ಉಗ್ರರ ಜತೆ 'ಬುದ್ದಿ ಜೀವಿ'ಗಳ ಸಂಬಂಧವಿದೆ: ಒಮರ್ (JK militants | Omar Abdullah | Naxals | Left | India | seminar)
Bookmark and Share Feedback Print
 
PTI
ಜಮ್ಮು-ಕಾಶ್ಮೀರದಲ್ಲಿನ ಉಗ್ರಗಾಮಿಗಳು ಮತ್ತು ಮಾವೋವಾದಿಗಳು, ಎಡಪಂಥೀಯ ಒಲವುಳ್ಳ ಬುದ್ದಿಜೀವಿಗಳ ನಡುವೆ ಅವ್ಯಕ್ತ ಸಂಬಂಧಗಳಿವೆ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗಂಭೀರವಾಗಿ ಆರೋಪಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇಂಡಿಯಾ ಟುಡೇ ಸಮೂಹ ಏರ್ಪಡಿಸಿದ್ದ ಭಾರತದಲ್ಲಿ ರಾಜ್ಯಗಳ ಸ್ಥಿತಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಾವೋವಾದಿಗಳ ಬಂಡಾಯ ನಮ್ಮ ಅನುಭವಕ್ಕೆ ಬಂದಿಲ್ಲವಾದರೂ ಇತ್ತೀಚೆಗೆ ಕಾಶ್ಮೀರಿ ಉಗ್ರರು ಮತ್ತು ಭಾರತದ ಇತರೆಡೆಗಳಲ್ಲಿನ ಮಾವೋವಾದಿಗಳು, ಕೆಲವು ಎಡಪಂಥೀಯ ಚಿಂತನೆಯ ಬುದ್ದಿಜೀವಿಗಳು, ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳ ನಡುವೆ ಸಂಪರ್ಕಗಳನ್ನು ಏರ್ಪಡಿಸುವ ಪ್ರಯತ್ನ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು.

ಇದಕ್ಕೆ ಸಾಕ್ಷ್ಯಾಧಾರಗಳೂ ನಮಗೆ ಸಿಕ್ಕಿದೆ. ಈ ಗುಂಪುಗಳ ನಡುವೆ ಸಂವಾದ ರೂಪಿಸುವ ಹೆಚ್ಚೆಚ್ಚು ಪ್ರಯತ್ನಗಳು ನಡೆಯುತ್ತಿವೆ. ಮಾವೋವಾದಿ ಬೆಂಬಲಿಗರೆಂದೇ ಚಿರಪರಿಚಿತರಾಗಿರುವ ಕೆಲವರು ಶ್ರೀನಗರಕ್ಕೆ ತೆರಳಿ ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳ ಹಿಂಸೆಯ ಬೆಂಬಲಿಗರೊಂದಿಗೆ ವಿಚಾರ ಸಂಕಿರಣಗಳು ಮತ್ತು ಸಮ್ಮೇಳನಗಳನ್ನು ಏರ್ಪಡಿಸುತ್ತಿದ್ದಾರೆ ಎಂದರು.

ಅವರ ನಡುವೆ ಕೇವಲ ಕಣ್ಣಿಗೆ ಕಾಣುವ ಸಂಬಂಧಗಳಲ್ಲದೆ, ಇವರ ನಡುವೆ ಹಲವಾರು ರಸಹ್ಯ ಸಂಪರ್ಕಗಳಗೂ ಇವೆ ಎಂದು ದೂರಿದರು. ಲೇಖಕಿ ಅರುಂಧತಿ ರಾಯ್‌ರಂತಹ ಮಾವೋವಾದಿ ಬೆಂಬಲಿಗರನ್ನು ಪ್ರಸ್ತಾಪಿಸಿ ಒಮರ್ ಪರೋಕ್ಷವಾಗಿ ಈ ವಾಗ್ದಾಳಿ ನಡೆಸಿದರು.
ಸಂಬಂಧಿತ ಮಾಹಿತಿ ಹುಡುಕಿ