ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶದಲ್ಲಿ ಭ್ರಷ್ಟಾಚಾರ, ದುರಾಸೆ ಹೆಚ್ಚುತ್ತಿದೆ: ಸೋನಿಯಾ (India | Congress | Sonia Gandhi | 2G scam)
Bookmark and Share Feedback Print
 
ಯುಪಿಎ ಆಡಳಿತಾವಧಿಯಲ್ಲಿ ನಡೆದಿರುವ ಹಲವು ದೊಡ್ಡ ಹಗರಣಗಳ ಬಗ್ಗೆ ಕಾಂಗ್ರೆಸ್ ಅಧಿನಾಯಕಿ ಪರೋಕ್ಷ ಪ್ರಸ್ತಾವನೆ ನಡೆಸಿ, ನಾಯಕರಿಗೆ ಗುದ್ದು ನೀಡಿದ್ದಾರೆ. ಸ್ವತಂತ್ರ ಭಾರತದ ಉದಾತ್ತ ತತ್ವಗಳು ಅಪಾಯದಲ್ಲಿ ಸಿಲುಕಿವೆ, ಅಕ್ರಮಗಳು-ಅವ್ಯವಹಾರಗಳು ಹೆಚ್ಚುತ್ತಿವೆ. ಭ್ರಷ್ಟಾಚಾರ ಮತ್ತು ದುರಾಸೆ ಮಿತಿ ಮೀರುತ್ತಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಸಾಮಾಜಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದ ಸೋನಿಯಾ, ದೇಶದ ಆರ್ಥಿಕ ಪ್ರಗತಿಗೆ ಎಲ್ಲವೂ ಕೊನೆಯಾಗಬಾರದು; ಸಮಾಜದ ಸನ್ನಡತೆಯು ಇಳಿಮುಖವಾಗುತ್ತಿರುವುದು ನಿಲ್ಲಬೇಕು, ಏಳ್ಗೆಯತ್ತ ಸಾಗಬೇಕು ಎಂದರು.

ಯಾವುದೇ ಪ್ರಜಾಪ್ರಭುತ್ವ ಸಮಾಜದಲ್ಲಿ ನ್ಯಾಯಪರತೆಯು ಅಗತ್ಯವಾಗಿದೆ. ವ್ಯವಸ್ಥೆಯು ನಿರ್ಮಲವಾಗಿರಬೇಕಾದರೆ ಸಾಮಾನ್ಯ ಜನತೆ ಅದರಲ್ಲಿ ವಿಸ್ತಾರವಾದ ನಂಬಿಕೆ ಇಡಬೇಕು ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಕರೆ ನೀಡಿದರು.

ನಮ್ಮ ಆರ್ಥಿಕ ಪ್ರಗತಿಯ ಉತ್ಕೃಷ್ಟ ದರವನ್ನು ಕಂಡು ನಾವು ಸಂತೋಷ ಪಡುವುದು ತಪ್ಪಲ್ಲ. ಜತೆಗೆ ಅದನ್ನು ಉಳಿಸಿಕೊಳ್ಳುವುದು ಕೂಡ ಅಗತ್ಯ. ಅದಕ್ಕಾಗಿ ನಾವು ಶ್ರಮ ವಹಿಸಬೇಕಾಗಿದೆ. ಅದೇ ಹೊತ್ತಿಗೆ ಕೇವಲ ಪ್ರಗತಿ ದರಕ್ಕೆ ಎಲ್ಲವೂ ಕೊನೆಗೊಳ್ಳುತ್ತದೆ ಎಂದುಕೊಳ್ಳಬಾರದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಅದಕ್ಕಿಂತಲೂ ನನ್ನ ಮನಸ್ಸಿನಲ್ಲಿರುವ ಮುಖ್ಯ ವಿಚಾರವೆಂದರೆ ನಾವು ಯಾವ ರೀತಿಯ ಸಮಾಜವನ್ನು ಬಯಸುತ್ತಿದ್ದೇವೆ ಮತ್ತು ಆ ಸಮಾಜದಲ್ಲಿ ಯಾವ ಮೌಲ್ಯಗಳನ್ನು ನಾವು ನಿರ್ಮಿಸುತ್ತೇವೆ ಎನ್ನುವುದು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ನಡೆಯುತ್ತಿರುವ ಹಗರಣಗಳ ಕುರಿತು ನೇರವಾಗಿ ಪ್ರಸ್ತಾಪಿಸದಿದ್ದರೂ, ಅದರತ್ತ ಬೇಸತ್ತು ಇಂತಹ ಹೇಳಿಕೆ ನೀಡಿದ್ದಾರೆನ್ನುವುದು ಸ್ಪಷ್ಟ.

ನಾವು ಆರ್ಥಿಕವಾಗಿ ಪ್ರಬಲರಾಗುತ್ತಿದ್ದೇವೆ. ಆದರೆ ನಮ್ಮ ಶುದ್ಧ ಸಮಾಜವು, ನೈತಿಕತೆಯು ದಿನದಿಂದ ಕುಸಿಯುತ್ತಿದೆ. ಅವ್ಯವಹಾರಗಳು ಮತ್ತು ಹೊಟ್ಟೆಬಾಕತನಗಳು ಏರಿಕೆಯಾಗುತ್ತಿವೆ. ಶ್ರೇಷ್ಠ ನಾಯಕರು ಹೋರಾಟ ಮಾಡಿದಂತಹ ಮೌಲ್ಯಗಳು ಮರೆಯಾಗುತ್ತವೆ. ಅವರು ತ್ಯಾಗಗಳನ್ನು ಮಾಡಿ ಕಟ್ಟಿದ ಸ್ವತಂತ್ರ ಭಾರತದ ಉದಾತ್ತ ನೀತಿಗಳು ಸವಕಲಾಗುತ್ತಿವೆ ಎಂದರು.

2ಜಿ ತರಂಗಾಂತರ ಹಂಚಿಕೆ, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಮುಂಬೈಯಯ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣಗಳು ಕಾಂಗ್ರೆಸ್ ನಿದ್ದೆಗೆಡಿಸಿದ್ದವು. ಸ್ವತಃ ಕಾಂಗ್ರೆಸ್ ಹಿರಿಯ ನಾಯಕರ ಮೇಲೆಯೇ ಹಲವು ಆರೋಪಗಳು ಬಂದಿದ್ದವು.
ಸಂಬಂಧಿತ ಮಾಹಿತಿ ಹುಡುಕಿ