ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತೀಯ ಮುಸ್ಲಿಮರಿಗೆ ಬೇರೆ ದೇಶ: ಇದು ಕಸಬ್ ತಂತ್ರ (Muslim state | Ajmal Kasab | Lashkar-e-Toiba | Mumbai attacks)
Bookmark and Share Feedback Print
 
ಯಾವ್ಯಾವುದೋ ಕಾರಣಗಳಿಗಾಗಿ ನಮ್ಮಿಂದ ಹೊಗಳಲ್ಪಡುವ ನಾಯಕರಿಂದಾಗಿ ಈಗಾಗಲೇ ಧರ್ಮದ ಆಧಾರದಲ್ಲಿ ಇಬ್ಭಾಗವಾಗಿದೆ. ಈಗ ಮತ್ತೆ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರವಾಗಬೇಕೆಂದರೆ? ಹೌದು, ಮುಂಬೈ ದಾಳಿ ಸಂದರ್ಭದಲ್ಲಿ ಸಾಧ್ಯವಾದಷ್ಟು ಜನರನ್ನು ಒತ್ತೆಯಾಗಿಟ್ಟುಕೊಂಡು ಇಂತಹ ಬೇಡಿಕೆಯನ್ನು ಮುಂದಿಡಿ ಎಂದು ಅಜ್ಮಲ್ ಕಸಬ್ ಮತ್ತು ಆತನ ಸಹಚರರಿಗೆ ಪಾಕಿಸ್ತಾನಿ ಲಷ್ಕರ್ ಇ ತೋಯ್ಬಾ ಬಾಸ್‌ಗಳು ಹೇಳಿದ್ದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದನ್ನು ಬಹಿರಂಗಪಡಿಸಿರುವುದು ಸರಕಾರಿ ವಕೀಲ ಉಜ್ವಲ್ ನಿಕ್ಕಂ. ಕಸಬ್ ಮರಣದಂಡನೆ ಖಚಿತಗೊಳಿಸುವ ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟಿಗೆ ಭಯೋತ್ಪಾದಕರ ಕುತಂತ್ರಗಳ ಬಗ್ಗೆ ಅವರು ಪ್ರಕರಣದ ವಿವರಣೆ ನೀಡಿದರು.
PTI

ಭಾರತದಿಂದ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ನಿರ್ಮಾಣವಾಗಬೇಕು, ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬೇಕು ಎನ್ನುವುದು ಬೇಡಿಕೆ. ಅದಕ್ಕಾಗಿ ನೀವು ಗಣ್ಯಾತಿಗಣ್ಯರನ್ನು ಒತ್ತೆಯಾಳಾಗಿಟ್ಟುಕೊಂಡು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಲಷ್ಕರ್ ಇ ತೋಯ್ಬಾ ನಾಯಕರು ಕಸಬ್ ಮತ್ತು ಇತರ ಒಂಬತ್ತು ಭಯೋತ್ಪಾದಕರ ಜತೆ ದೂರವಾಣಿ ಸಂಭಾಷಣೆಯಲ್ಲಿ ನಿರ್ದೇಶನ ನೀಡಿದ್ದರು ಎಂದು ನಿಕ್ಕಂ ತಿಳಿಸಿದರು.

ದೇಶದ ವಿರುದ್ಧ ಯುದ್ಧ ಸಾರಿದ ಆರೋಪದ ಮೇಲೆ ಕಸಬ್ ಮರಣ ದಂಡನೆ ಪಡೆದುಕೊಂಡಿದ್ದು, ಅದನ್ನು ಖಚಿತಗೊಳಿಸುವ ನಿಟ್ಟಿನಲ್ಲಿ ಸರಕಾರ ಹೈಕೋರ್ಟಿನಲ್ಲಿ ತನ್ನ ವಾದವನ್ನು ಮುಂದುವರಿಸಿದೆ.

ಕಸಬ್ ಮತ್ತು ಆತನ ಸಹಚರರು ಪಾಕಿಸ್ತಾನದ ತಮ್ಮ ಬಾಸ್‌ಗಳ ಜತೆ ದೂರವಾಣಿಯಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಈ ಸಂದರ್ಭದಲ್ಲಿ ಅವರಿಗೆ ಇಂತಹ ನಿರ್ದೇಶನಗಳನ್ನು ನೀಡಲಾಗಿತ್ತು.

ಜತೆಗೆ ತಾವು ಪಾಕಿಸ್ತಾನದಿಂದ ಬಂದವರು ಅಥವಾ ಲಷ್ಕರ್ ಇ ತೋಯ್ಬಾ ಸಂಘಟನೆಗೆ ಸೇರಿದವರು ಎಂಬುದನ್ನು ಮರೆ ಮಾಚಿ, ಭಾರತೀಯ ಮುಸ್ಲಿಮರು ಮತ್ತು ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದವರು ಎಂಬಂತೆ ತೋರಿಸಿಕೊಳ್ಳಬೇಕು ಎಂದು ಲಷ್ಕರ್ ನಿಯಂತ್ರಕರು ಉಗ್ರರಿಗೆ ಸಲಹೆ ನೀಡಿದ್ದರು ಎಂದೂ ನಿಕ್ಕಂ ತಿಳಿಸಿದರು.

ಇದನ್ನು ಯಥಾವತ್ತಾಗಿ ಪಾಲಿಸಿದ್ದ ಕಸಬ್ ಮತ್ತು ಆತನ ಸಚಹರ ಅಬೂ ಇಸ್ಮಾಯಿಲ್, ಗಣ್ಯ ವ್ಯಕ್ತಿಗಳಾದ ಹೈಕೋರ್ಟ್ ನ್ಯಾಯಮೂರ್ತಿಗಳು, ಸಚಿವರು, ರಾಜ್ಯಪಾಲರು ಮುಂತಾದವರು ನೆಲೆಸಿದ್ದ ಮಲಬಾರ್ ಹಿಲ್ ಪ್ರದೇಶದತ್ತ ಹೊರಟಿದ್ದರು. ಅವರ ಉದ್ದೇಶ ಗಣ್ಯರನ್ನು ವಶಕ್ಕೆ ತೆಗೆದುಕೊಳ್ಳುವುದಾಗಿತ್ತು. ಆದರೆ ಅದು ಸಫಲವಾಗಲಿಲ್ಲ ಎಂದು ನ್ಯಾಯಮೂರ್ತಿ ರಂಜನಾ ದೇಸಾಯಿಮತ್ತು ಆರ್.ವಿ. ಮೋರೆಯವರಿಗೆ ವಿವರಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ