ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಟೈಮ್' ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಇಂದಿರಾ, ತೆರೆಸಾ (Time | Mother Teresa | Indira Gandhi | India)
Bookmark and Share Feedback Print
 
ಕಳೆದ ಶತಮಾನದ ಅತ್ಯಂತ ಪ್ರಭಾವಿ 25 ಮಹಿಳೆಯರ ಪಟ್ಟಿಯಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ಮದರ್ ತೆರೆಸಾ ಸ್ಥಾನ ಗಿಟ್ಟಿಸಿಕೊಂಡಿದೆ.

ಆ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಕಾಲ ಪ್ರಧಾನಿ ಹುದ್ದೆ ಆಲಂಕರಿಸಿದ್ದ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಇಂದಿರಾಗಾಂಧಿ ಅವರಿಗೆ ಮತ್ತೊಂದು ಗೌರವ ಸಂದಿದೆ.

ಅಮೆರಿಕಾದ ವಾರ್ತಾ ಮ್ಯಾಗಜಿನ್ 'ಟೈಮ್' ನಡೆಸಿದ ಸಮೀಕ್ಷೆಯಲ್ಲಿ ಇಂದಿರಾ 9ನೇ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಮದರ್ ತೆರೆಸಾ 22ನೇ ಸ್ಥಾನದಲ್ಲಿದ್ದಾರೆ.

ಅಮೆರಿಕಾದ ನೊಬೆಲ್ ಪ್ರಶಸ್ತಿ ವಿಜೇತ ಮೊದಲ ಮಹಿಳೆ ಜೇನ್ ಆಂಡಮ್ಸ್ ಈ ವಿಭಾಗದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ.

'ಟೈಮ್' ಶತಮಾನದ ಪ್ರಭಾವಿ ಮಹಿಳೆಯರ ಪಟ್ಟಿ ಇಂತಿದೆ:

1. ಜೇನೆ ಆಂಡಮ್ಸ್ (1860-1935)
2. ಕೊರಜಾನ್ ಅಕ್ವಿನೊ (1933-2009)
3. ರಿಚೆಲ್ ಕಾರ್ಸನ್ (1907-1964)
4. ಕೊಕೊ ಚಾನೆಲ್ (1883-1971)
5. ಜೂಲಿಯಾ ಚೈಲ್ಡ್ (1912-2004)
6. ಹಿಲರಿ ಕ್ಲಿಂಟನ್ (1947-)
7. ಮಾರಿ ಕ್ಯೂರಿ (1867-1934)
8. ಅರೆತಾ ಫ್ರಾಂಕ್ಲಿನ್ (1942-)
9. ಇಂದಿರಾ ಗಾಂಧಿ (1917-1984)
10. ಈಸ್ಟಿ ಲೌಡೆರ್ (1908-2004)
11. ಮಡೋನಾ (1958-)
12. ಮಾರ್ಗರೇಟ್ ಮೀಡ್ (1901-1978)
13. ಗೋಲ್ಡಾ ಮೀರ್ (1898-1978)
14. ಏಂಜೆಲಾ ಮರ್ಕೆಲ್ (1954-)
15. ಸಾಂದ್ರಾ ಡೇ ಒಕೊನರ್ (1930-)
16. ರೋಸಾ ಪಾರ್ಕ್ಸ್ (1913-2005)
17. ಜಿಯಾಂಗ್ ಕ್ವಿಂಗ್ (1914-1991)
18. ಇಲಿನಾರ್ ರೂಸ್‌ವೆಲ್ಟ್ (1884-1962)
19. ಮಾರ್ಗರೇಟ್ ಸಾಂಗರ್ (1879-1966)
20. ಗ್ಲೊರಿಯಾ ಸ್ಟಿನೆಮ್ (1934-)
21. ಮಾರ್ಟಾ ಸ್ಟೀವರ್ಟ್ (1941-)
22. ಮದರ್ ತೆರೇಸಾ (1910-1997)
23. ಮಾರ್ಗರೇಟ್ ಥಾಚ್ಚರ್ (1925-)
24. ಓಪ್ರಾ ವಿನ್‌ಫ್ರೆ (1954-)
ಸಂಬಂಧಿತ ಮಾಹಿತಿ ಹುಡುಕಿ