ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿಗೆ ನೈತಿಕತೆ ಇದೆಯೇ?; ಸೋನಿಯಾ ಗಾಂಧಿ ಪ್ರಶ್ನೆ (Sonia Gandhi | Congress | BJP | BS Yeddyurappa)
Bookmark and Share Feedback Print
 
ಕರ್ನಾಟಕದ ಕಳಂಕಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಮುಂದುವರಿಸಲು ನಿರ್ಧರಿಸಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅನುಸರಿಸುತ್ತಿರುವ ನೈತಿಕತೆ ಕೇಸರಿ ಪಕ್ಷಕ್ಕೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಶಶಿ ತರೂರ್, ಅಶೋಕ್ ಚೌಹಾನ್ ಅವರಿಗೆ ನೀಡಲಾಗಿರುವ ಶಿಕ್ಷೆ ಯಡಿಯೂರಪ್ಪನವರಿಗೆ ಯಾಕಿಲ್ಲ ಎಂದು ಸೋನಿಯಾ ಪ್ರಶ್ನಿಸಿದ್ದು, ಬಿಜೆಪಿಯ ದ್ವಂದ್ವ ನೀತಿಗಳಿಗೆ ಗರಂ ಆಗಿದ್ದಾರೆ.

ಸಾಮಾನ್ಯವಾಗಿ ಪತ್ರಿಕಾಗೋಷ್ಠಿಗಳಲ್ಲಿ ಅಥವಾ ಪತ್ರಕರ್ತರೊಂದಿಗೆ ಅಪರೂಪಕ್ಕೆಂಬಂತೆ ಮಾತಿಗಿಳಿಯುವ ಸೋನಿಯಾ, ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಕುರಿತು ತನ್ನ ನಿರ್ಧಾರವನ್ನು ಪ್ರಕಟಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಬಿಜೆಪಿಯು ನೈತಿಕತೆಯ ಪಾಠವನ್ನು ಕಾಂಗ್ರೆಸ್‌ನಿಂದಲಾದರೂ ಕಲಿಯಲಿ. ಅವರು ಕಾಂಗ್ರೆಸ್ ವಿರುದ್ಧ ಸುಖಾ ಸುಮ್ಮನೆ ಟೀಕಿಸುವುದನ್ನು ಬಿಡಲಿ. ಇಲ್ಲಸಲ್ಲದ ವಿಚಾರಗಳಿಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಮೇಲೆ ಹರಿಹಾಯುವುದನ್ನು ನಿಲ್ಲಿಸಲಿ ಎಂದೂ ಸೋನಿಯಾ ಇದೇ ಸಂದರ್ಭದಲ್ಲಿ ಬಿಜೆಪಿಗೆ ತಾಕೀತು ಮಾಡಿದ್ದಾರೆ.

ಐಪಿಎಲ್ ಹಗರಣದಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಶಶಿ ತರೂರ್, ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆಗಳನ್ನು ಸಲ್ಲಿಸಿದ್ದರು. ಅಲ್ಲದೆ ಕೆಲ ದಿನಗಳ ಹಿಂದಷ್ಟೇ 2ಜಿ ಹಗರಣ ಸಂಬಂಧ ಎ. ರಾಜಾ (ಡಿಎಂಕೆ) ರಾಜೀನಾಮೆಯನ್ನೂ ಪಡೆದಿತ್ತು.

ಆದರೂ ಬಿಜೆಪಿ ಈ ಹಾದಿಯನ್ನು ಅನುಸರಿಸಿಲ್ಲ. ಭೂ ಹಗರಣಗಳ ಆರೋಪ ಬಂದರೂ ಯಡಿಯೂರಪ್ಪನವರನ್ನು ಬದಲಾಯಿಸುವ ಕ್ರಮಕ್ಕೆ ಕೇಸರಿ ಪಕ್ಷ ಮುಂದಾಗಿಲ್ಲ. ಬದಲಿಗೆ ಅವರನ್ನು ಸಮರ್ಥಿಸಿಕೊಂಡು, ಮುಂದುವರಿಸಲು ತೀರ್ಮಾನಿಸಿದೆ. ಇಂತಹ ಬಿಜೆಪಿಯ ಬಗ್ಗೆ ಕರ್ನಾಟಕದ ಜನರೇ ನಿರ್ಧರಿಸಬೇಕು. ದ್ವಂದ್ವ ನಿಲುವಿನಲ್ಲಿರುವ ಪಕ್ಷಕ್ಕೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಸೋನಿಯಾ ಕರೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ