ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಅಗ್ನಿ' ಪರೀಕ್ಷೆ ಯಶಸ್ವಿ; ಸೇನೆಯಿಂದ ಮತ್ತೊಂದು ಸಾಧನೆ (Indian Army | Agni-I | Orissa | missile)
Bookmark and Share Feedback Print
 
ಭಾರತೀಯ ಸೇನೆಯು ಕ್ಷಿಪಣಿ ಕ್ಷೇತ್ರದಲ್ಲಿ ಮಹತ್ತರ ಮುನ್ನಡೆ ಸಾಧಿಸಿದೆ. 700 ಕಿಲೋ ಮೀಟರ್ ದೂರ ಕ್ರಮಿಸಬಲ್ಲ, 1000 ಕಿಲೋ ಗ್ರಾಂ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ಅಗ್ನಿ-I ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.

2002ರಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿ-I ಕ್ಷಿಪಣಿಯನ್ನು 1989ರಲ್ಲಿ ಮೊತ್ತ ಮೊದಲ ಬಾರಿ ಪರೀಕ್ಷೆಗೊಳಪಡಿಸಲಾಗಿತ್ತು. ಸೇನೆಯ ನಿರಂತರ ಪರೀಕ್ಷೆಯ ಅಂಗವಾಗಿ ಗುರುವಾರ ಒರಿಸ್ಸಾ ಕರಾವಳಿಯ ಬಾಲಸೋರ್ ವೀಲರ್ ಐಸ್ಲೆಂಡ್ ಸಮಗ್ರ ಪರೀಕ್ಷಾ ವಲಯದಿಂದ ಈ ಕ್ಷಿಪಣಿಯನ್ನು ಪರಿಶೀಲನೆಗೊಳಪಡಿಸಲಾಯಿತು.

12,000 ಕೇಜಿ ತೂಕವಿರುವ ಈ ಕ್ಷಿಪಣಿ, 15 ಮೀಟರ್ ಉದ್ದವಿದೆ. ಇದರ ವ್ಯಾಸ ಒಂದು ಮೀಟರ್. ಒಂದೇ ಹಂತದಲ್ಲಿ 700 ಕಿಲೋ ಮೀಟರ್ ದೂರ ಮತ್ತು ನೇರವಾಗಿ 90 ಕಿಲೋ ಮೀಟರ್ ಎತ್ತರಕ್ಕೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಅಗ್ನಿ-I ಕ್ಷಿಪಣಿಯೊಂದರ ತಯಾರಿಕೆಗೆ ಆಗಿರುವ ವೆಚ್ಚ ಸರಿಸುಮಾರು 35 ಕೋಟಿ ರೂಪಾಯಿಗಳು.

ಒಂದೇ ಹಂತದ ಹಾರಾಟ ಸಾಮರ್ಥ್ಯ ಹೊಂದಿರುವ ಭೂಮಿಯಿಂದ ಭೂಮಿಗೆ ಚಿಮ್ಮುವ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಾಣವಾಗಿರುವ ಕ್ಷಿಪಣಿಯನ್ನು ಒರಿಸ್ಸಾದ ಮೊಬೈಲ್ ಲಾಂಚರಿನಿಂದ ಬೆಳಿಗ್ಗೆ 10.10ರ ಹೊತ್ತಿಗೆ ಯಶಸ್ವಿಯಾಗಿ ಪ್ರಯೋಗಿಸಲಾಯಿತು ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ.

ಇದೇ ವರ್ಷದ ಮಾರ್ಚ್ 28ರಂದು ಕೊನೆಯ ಬಾರಿ ಅಗ್ನಿ-I ಕ್ಷಿಪಣಿಯನ್ನು ವೀಲರ್ ಐಸ್ಲೆಂಡ್‌ನಿಂದ ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು.

ಸೇನೆಗೆ ಸೇರ್ಪಡೆಗೊಂಡು ಎಂಟು ವರ್ಷಗಳಾಗಿರುವ ಈ ಕ್ಷಿಪಣಿಯನ್ನು ಪ್ರಸಕ್ತ ಸೇನೆಯ ಸಿಬ್ಬಂದಿಗಳ ತರಬೇತಿ ಮತ್ತು ಅವರ ಕ್ಷಿಪಣಿ ಬಳಕೆ ಕುರಿತ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಮಿಲಿಟರಿ ಬಳಸುತ್ತಾ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ