ರಕ್ಷಣಾ ಕ್ಷೇತ್ರದಲ್ಲಿ ಸಮರ್ಥ ಪರಮಾಣು ಶಸ್ತ್ರಾಸ್ತ್ರ ಕ್ರೋಢೀಕರಣದಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಸೇನೆಯು ಶೀಘ್ರದಲ್ಲೇ ಕನಿಷ್ಠ ಐದು ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ನಡೆಸಲಿದೆ. ಗುರುವಾರ ಅಗ್ನಿ-I ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಲಾಗಿತ್ತು. ಡಿಸೆಂಬರಿನಲ್ಲಿ ಬ್ರಹ್ಮೋಸ್ ಮತ್ತು ಅಗ್ನಿ-II ಸರಣಿಯ ಎರಡು ಹಾಗೂ ಜನವರಿಯಲ್ಲಿ ಉಳಿದ ಕ್ಷಿಪಣಿಗಳನ್ನು ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಡಿಆರ್‌ಡಿಒ ತಿಳಿಸಿದೆ.