ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮನೆಯಲ್ಲಿ ಸೆಕ್ಸ್ ಸಿನಿಮಾ ನೋಡೋದು ತಪ್ಪಲ್ಲ: ಹೈಕೋರ್ಟ್ (Porn film | Bombay High Court | Mumbai Police | India)
Bookmark and Share Feedback Print
 
ಅಶ್ಲೀಲ ಚಿತ್ರಗಳ ಕುರಿತು ಕಾನೂನು ಏನು ಹೇಳುತ್ತದೆ ಎನ್ನುವುದನ್ನು ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ. ಸೆಕ್ಸ್ ಸಿನಿಮಾಗಳನ್ನು ಮನೆಯಲ್ಲಿ ನೋಡುವುದನ್ನು ತಡೆಯಲು ಸಾಧ್ಯವಿಲ್ಲ. ಇಂತಹ ಚಿತ್ರಗಳನ್ನು ಖಾಸಗಿಯಾಗಿ ವೀಕ್ಷಿಸುವುದು ಅಪರಾಧ ಎಂದು ಹೇಳಲಾಗದು ಎಂದು ನ್ಯಾಯಾಲಯ ತಿಳಿಸಿದೆ.

ಕೆಲವು ಸುಂಕ ಅಧಿಕಾರಿಗಳು ಸೇರಿದಂತೆ 11 ಮಹಿಳೆಯರು ಮತ್ತು 28 ಪುರುಷರ ವಿರುದ್ಧ ಭಾರತೀಯ ದಂಡ ಸಂಹಿತೆ 292ರ ಅಡಿಯಲ್ಲಿ (ಸಾರ್ವಜನಿಕವಾಗಿ ಆಕ್ಷೇಪಕಾರಿ ವಿಚಾರಗಳ ಪ್ರದರ್ಶನ) ಮುಂಬೈ ಪೊಲೀಸರು ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ವಜಾಗೊಳಿಸಿರುವ ನ್ಯಾಯಾಲಯ ಈ ಮಹತ್ವದ ತೀರ್ಪನ್ನು ನೀಡಿದೆ.

ಭಾರತೀಯ ದಂಡ ಸಂಹಿತೆಯಲ್ಲಿ ಹೇಳಿರುವ ರೀತಿಯ 'ಸಾರ್ವಜನಿಕ ಪ್ರದರ್ಶನ' ಈ ಪ್ರಕರಣದಲ್ಲಿ ಕಂಡು ಬಂದಿಲ್ಲ ಎಂದು ನ್ಯಾಯಮೂರ್ತಿ ವಿ.ಕೆ. ತಹಿಲರಾಮಿನಿ ತಿಳಿಸಿದರು.

2008ರ ಆಗಸ್ಟ್ 26ರಂದು ಮುಂಬೈಯ ಲೋನಾವಾಲಾದಲ್ಲಿನ ಪಿಚ್ಲಿ ಹಿಲ್‌ನ ತಾಜ್ ಕಾಟೇಜ್‌ನಲ್ಲಿ ನಡೆಯುತ್ತಿದ್ದ 'ರೇವ್ ಪಾರ್ಟಿ'ಗೆ ದಾಳಿ ಮಾಡಿದ್ದ ಪೊಲೀಸರು, ಹಲವರನ್ನು ಬಂಧಿಸಿ ಕೇಸು ಜಡಿದಿದ್ದರು.

ಈ ಪಾರ್ಟಿಯಲ್ಲಿ ಯುವತಿಯರು ನರ್ತಿಸುತ್ತಿದ್ದರೆ, ಪಾನಮತ್ತರಾಗಿದ್ದ ಯುವಕರು ಹಣ ಎಸೆಯುತ್ತಿದ್ದರು. ಜತೆಗೆ ಅಶ್ಲೀಲ ಸಿನಿಮಾಗಳನ್ನು ನೋಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದರು.

ಈ ಕಾಟೇಜ್ ಹೊಟೇಲ್ ಅಥವಾ ಅತಿಥಿ ಗೃಹವಾಗಿರಲಿಲ್ಲ. ಹಾಗಾಗಿ ಆ ಕಾಜೇಜನ್ನು ಸಾರ್ವಜನಿಕ ಸ್ಥಳ ಎಂದು ಹೇಳಲಾಗದು. ಅದು ಖಾಸಗಿ ಮನೆಯಾಗಿತ್ತು. ಅಲ್ಲಿ ಅಶ್ಲೀಲ ಚಿತ್ರವನ್ನು ನೋಡುವುದು ತಪ್ಪಲ್ಲ ಎಂದು ಆರೋಪಿಗಳ ಪರ ವಾದವನ್ನು ಹೈಕೋರ್ಟ್ ಎತ್ತಿ ಹಿಡಿಯಿತು.

ಈ ಕಾಟೇಜ್‌ಗೆ ಯಾವುದೇ ಹಂತದಲ್ಲಿ ಸಾರ್ವಜನಿಕರು ಬರುವ ಯಾವುದೇ ಪ್ರಮೇಯಗಳು ಇರಲಿಲ್ಲ. ಹಾಗಾಗಿ ಅಲ್ಲಿ ಅಶ್ಲೀಲ ಚಿತ್ರಗಳ ಸಾರ್ವಜನಿಕ ಪ್ರದರ್ಶನ ನಡೆಯುತ್ತಿತ್ತು ಎಂದು ಹೇಳುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ತಹಿಲರಾಮಿನಿ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ