ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ 'ಮಾವೋ' ಅಂತೆ; ಗುಜರಾತ್ ಪ್ರಗತಿ ಒಪ್ಪಿದ ರಾಹುಲ್ (Narendra Modi | Rahul Gandhi | Gujarat Development | Mao Zedong)
Bookmark and Share Feedback Print
 
PTI
ಆರೆಸ್ಸೆಸ್ ಅನ್ನು ಸಿಮಿ ಉಗ್ರಗಾಮಿ ಸಂಘಟನೆಗೆ
PTI
ಹೋಲಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್‌ನ 'ಯುವರಾಜ' ರಾಹುಲ್ ಗಾಂಧಿ, ಇದೀಗ ನರೇಂದ್ರ ಮೋದಿಯನ್ನು ಮಾವೋ ಜೆಡಾಂಗ್‌ಗೆ ಹೋಲಿಸಿದ್ದಾರೆ. "ಮಾವೋ ಚೀನಾವನ್ನು ಚೆನ್ನಾಗಿ ಅಭಿವೃದ್ಧಿಪಡಿಸಿದ್ದಾರೆ, ಆದರೆ ದೇಶಕ್ಕೆ ಹಾನಿಯನ್ನೂ ತಂದಿದ್ದಾರೆ" ಎಂಬುದು ಅವರು ನೀಡಿದ ವ್ಯಾಖ್ಯಾನ.


ಇದೀಗ ಗುಜರಾತ್‌ನ ಕಾಲೇಜು ಕಾಲೇಜುಗಳಿಗೆ ಭೇಟಿ ನೀಡುವ ಕಾರ್ಯಕ್ರಮದಲ್ಲಿರುವ ರಾಹುಲ್ ಗಾಂಧಿ, ಗುಜರಾತ್‌ನಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದರೂ, ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನೇಕೆ ದೂಷಿಸುತ್ತಿದ್ದೀರಿ ಎಂದು ಹೋದಲ್ಲೆಲ್ಲಾ ವಿದ್ಯಾರ್ಥಿಗಳು ಕೇಳುತ್ತಿದ್ದ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿ, ಕೊನೆಗೆ ರೋಸಿಹೋದಂತೆ ಕಂಡುಬಂದು, ಒಂದು ಕಾಲೇಜಿನಲ್ಲಿ ಈ ಉತ್ತರ ನೀಡಿದರು.

ವಡೋದರಾ, ರಾಜ್‌ಕೋಟ್ ಕಾಲೇಜುಗಳಿಗೆ ಭೇಟಿ ನೀಡಿದ ನಂತರ, ಅಹಮದಾಬಾದ್‌ನಲ್ಲಿಯೂ ಮುಖ್ಯಮಂತ್ರಿಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಾಗಿಯೇ ಪ್ರಶ್ನೆ ತೂರಿ ಬಂದಿತ್ತು. ಆಗ ರಾಹುಲ್, "ಮಾವೋ ಕೂಡ ಚೀನಾವನ್ನು ಅಭಿವೃದ್ಧಿಪಡಿಸಿದ್ದರು, ಆದರೆ ಅವರು ದೇಶಕ್ಕೆ ಹಾನಿಯನ್ನೂ ತಂದರು" ಎಂದು ರೋಸಿಹೋದಂತೆ ಉತ್ತರಿಸುವ ಮೂಲಕ, ನರೇಂದ್ರ ಮೋದಿ ಕೂಡ ಅಭಿವೃದ್ಧಿ ಮಾಡುತ್ತಿದ್ದಾರೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

ಬಿಹಾರದಲ್ಲಿ ಸಾಕಷ್ಟು ಪ್ರಚಾರ ಕಾರ್ಯಕ್ರಮ ನಡೆಸಿದ್ದರೂ, ಅಲ್ಲಿನ ಜನರು 243ರಲ್ಲಿ ಕೇವಲ 4 ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಿದ್ದರು. ಈ ಸೋಲಿನ ಹೊರತಾಗಿಯೂ, ಮೂರೂ ಕಡೆಗಳಲ್ಲಿಯೂ ರಾಹುಲ್ ಸಭೆಗೆ ಭರ್ಜರಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಎಂದಿನಂತೆಯೇ, ಪತ್ರಕರ್ತರನ್ನು ಈ ಸಭೆಗಳಿಂದ ಇಲ್ಲಿಯೂ ದೂರವಿಡಲಾಗಿತ್ತು.

ಕಾಲೇಜು ವಿದ್ಯಾರ್ಥಿಯೊಬ್ಬಳು ಎದ್ದು ನಿಂತು, ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮೋದಿಯನ್ನು ಸರಿಗಟ್ಟಬಲ್ಲ ಕನಿಷ್ಠ ಇಬ್ಬರು ಕಾಂಗ್ರೆಸ್ ಮುಖಂಡರನ್ನು ಹೆಸರಿಸಿ ಎಂದು ಕೇಳಿದಾಗ, ರಾಹುಲ್ ಅವರು ಮನಮೋಹನ್ ಸಿಂಗ್, ಪಿ.ಚಿದಂಬರಂ, ಜೈರಾಮ್ ರಮೇಶ್ ಮತ್ತು ಎ.ಕೆ.ಆಂಟನಿ ಅವರನ್ನು ಹೆಸರಿಸಿದರು.

ಮೋದಿ ಬಗ್ಗೆ, ಮುಖ್ಯಮಂತ್ರಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಾಹುಲ್ ನಿರಾಕರಿಸಿಲ್ಲವಾದರೂ, ದೇಶಕ್ಕೆ ಅವರು "ಒಂದಿಷ್ಟು ಸಮಸ್ಯೆಗಳನ್ನು ತಂದೊಡ್ಡಿದ್ದಾರೆ" ಎಂದು ಅಭಿಪ್ರಾಯಪಟ್ಟರು. ಈ "ಸಮಸ್ಯೆಗಳೆಂದರೆ, ನೀವು ಗುಜರಾತ್ ಗಲಭೆಗಳನ್ನು ಹೇಳುತ್ತಿದ್ದೀರಾ" ಎಂದು ವಿದ್ಯಾರ್ಥಿನಿ ಕೇಳಿದಳು. ಈ ಗಲಭೆಯಲ್ಲಿ ಮುಸ್ಲಿಮರು ಮತ್ತು ಹಿಂದುಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಸತ್ತಿದ್ದಾರಲ್ಲಾ ಎಂದಾಕೆ ವಾದಿಸಿದಳು. ಆದರೆ ಕಾಂಗ್ರೆಸ್ ಯುವ ಮುಖಂಡ ಈ ಬಗ್ಗೆ ಹೆಚ್ಚು ವಾದ ಮುಂದುವರಿಸಲು ನಿರಾಕರಿಸಿ, ತನಗೆ ತಡವಾಗುತ್ತಿದೆ ಎನ್ನುತ್ತಾ ಹೊರಟರು.
ಸಂಬಂಧಿತ ಮಾಹಿತಿ ಹುಡುಕಿ