ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಡೋಂ ಬಳಕೆಯಲ್ಲಿ ಕರ್ನಾಟಕ ಹಿಂದೆ, ದೆಹಲಿ ಮುಂದೆ! (Delhi couple | condom use | Karnataka | Bangalore)
Bookmark and Share Feedback Print
 
ಸಂತಾನ ನಿಯಂತ್ರಣಕ್ಕೆ ದಂಪತಿ ಯಾವ ವಿಧಾನಗಳನ್ನು ಅನುಸರಿಸುತ್ತಾರೆ ಎಂಬ ಸಮೀಕ್ಷೆಯಿದು. ಅದರ ಪ್ರಕಾರ ದೆಹಲಿ, ಪಂಜಾಪ್, ಹರ್ಯಾಣ ಮತ್ತು ಉತ್ತರ ಪ್ರದೇಶಗಳ ವಿವಾಹಿತರು ಕಾಂಡೋಮ್‌ಗಳನ್ನು ಹಾಗೂ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡುಗಳ ಮಂದಿ ಇತರೆ ಸಂತಾನ ನಿಯಂತ್ರಣ ಸಾಧನಗಳನ್ನು ಗರ್ಭಧಾರಣೆ ತಡೆಯಲು ಬಳಸುತ್ತಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದು 2009ರ ಸಾಲಿನ ಕುಟುಂಬ ಕಲ್ಯಾಣ ಅಂಕಿ-ಅಂಶಗಳು. ಬಿಡುಗಡೆ ಮಾಡಿರುವುದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ. ಅದರ ಪ್ರಕಾರ ಆಂಧ್ರಪ್ರದೇಶದ ವಿವಾಹಿತ ದಂಪತಿಗಳು ಅತೀ ಕಡಿಮೆ (ಶೇ.0.5) ಕಾಂಡೋಮ್ ಬಳಸುತ್ತಿದ್ದಾರೆ. ನಂತರದ ಸ್ಥಾನದಲ್ಲಿ ಕರ್ನಾಟಕ (ಶೇ.1.7) ಹಾಗೂ ತಮಿಳುನಾಡು (ಶೇ.2.3) ಸ್ಥಾನ ಪಡೆದುಕೊಂಡಿದೆ.

ಒಟ್ಟಾರೆ ಭಾರತವನ್ನು ಗಣನೆಗೆ ತೆಗೆದುಕೊಂಡಾಗ ಕಾಂಡೋಮ್ ಬಳಕೆ ಮಾಡುತ್ತಿರುವ (ಶೇ.5.2) ಜೋಡಿಗಳ ಸಂಖ್ಯೆ 100ರಲ್ಲಿ ಐದು ಮಾತ್ರ. ಆದರೆ ದೆಹಲಿಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಾಗ ಇದರ ನಾಲ್ಕು ಪಟ್ಟು ಅಂದರೆ ಶೇ.22.9 ಜೋಡಿ ಕಾಂಡೋಮ್ ಉಪಯೋಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಪಂಜಾಬ್ ಶೇ.15.5, ಹರ್ಯಾಣ ಶೇ.11.8 ಹಾಗೂ ಉತ್ತರ ಪ್ರದೇಶಗಳು ಶೇ.8.6ರ ಪ್ರಮಾಣದೊಂದಿಗೆ ನಂತರದ ಸ್ಥಾನಗಳಲ್ಲಿವೆ.

ದಕ್ಷಿಣ ಭಾರತದಲ್ಲಿ ಹೆಚ್ಚಿನ ದಂಪತಿಗಳು ಗರ್ಭಧಾರಣೆಯನ್ನು ತಡೆಯಲು ಗರ್ಭಾಶಯದೊಳಗಿನ ಸಾಧನ (ಐಯುಡಿ ಅಥವಾ ಕಾಪರ್-ಟೀ) ಬಳಸುತ್ತಿದ್ದಾರೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶಗಳು ಕಾಂಡೋಮ್ ಬಳಕೆಯಲ್ಲಿ ತುಂಬಾ ಹಿಂದಿದ್ದರೂ, ಐಯುಡಿ ಬಳಕೆಯಲ್ಲಿ ಬಹಳ ಮುನ್ನಡೆ ಪಡೆದಿವೆ.

ಮಹಿಳೆಯರು ಆಂತರಿಕ ಗರ್ಭಾಶಯ ಸಾಧನ ಬಳಸುವುದು ಮತ್ತು ಸಂತಾನಹರಣ ಚಿಕಿತ್ಸೆಗಳ ವಿಚಾರದಲ್ಲಿ ಉನ್ನತ ಸ್ಥಾನ (ಶೇ.63) ಪಡೆದಿರುವುದು ಆಂಧ್ರಪ್ರದೇಶ. ನಂತರದ ಸ್ಥಾನಗಳಲ್ಲಿ ಕರ್ನಾಟಕ (ಶೇ.57.4) ಹಾಗೂ ತಮಿಳುನಾಡು (ಶೇ.55) ಕಾಣಿಸಿಕೊಂಡಿವೆ. ಇಲ್ಲಿನ ಪುರುಷರು ತಮ್ಮ ಪತ್ನಿಯರು ಸಂತಾನ ಹರಣ ಚಿಕಿತ್ಸೆಗೊಳಗಾಗಬೇಕೆಂದು ಒತ್ತಾಯಿಸುತ್ತಿರುವುದು ಕೂಡ ಹೆಚ್ಚು ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ದಕ್ಷಿಣ ಭಾರತದ ರಾಜ್ಯಗಳ ಮಹಿಳೆಯರು ಕಾಂಡೋಮ್ ಹೊರತಾದ ವ್ಯವಸ್ಥೆಯಲ್ಲಿ ಹೆಚ್ಚಿನ ನಂಬಿಕೆ ಮತ್ತು ಅರಿವು ಹೊಂದಿದ್ದಾರೆ. ನನ್ನ ಪ್ರಕಾರ ಇಲ್ಲಿನವರು ಕಾಂಡೋಮ್‌ಗಿಂತ ಜನನ ನಿಯಂತ್ರಣ ಮಾತ್ರೆಗಳು ಮತ್ತು ಕಾಪರ್-ಟೀಯಂತಹ ಸಾಧನಗಳತ್ತ ಒಲವು ತೋರಿಸುತ್ತಾರೆ ಎಂದು ಚೆನ್ನೈ ಮೂಲದ ಸ್ತ್ರೀರೋಗ ತಜ್ಞೆ ಡಾ. ಪ್ರಿಯಾ ಸೆಲ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಡೋಮ್ ಬಳಕೆ ವ್ಯಾಪಕವಾಗದೇ ಇರಲು ಕಾರಣಗಳೇನು ಎಂಬುದನ್ನು ಚೆನ್ನೈಯ ಮತ್ತೊಬ್ಬ ತಜ್ಞೆ ಡಾ. ಆರ್.ವಿ. ತೆನ್ನಿಮೋಳಿ ವಿಶ್ಲೇಷಿಸಿದ್ದಾರೆ.

ಅವರ ಪ್ರಕಾರ, ಕಾಂಡೋಮ್‌ಗಳು ಜನನ ನಿಯಂತ್ರಣದಲ್ಲಿ ವಿಫಲವಾಗುವ ಸಾಧ್ಯತೆಗಳು ಹೆಚ್ಚು. ಪ್ರತಿ ಬಾರಿ ಲೈಂಗಿಕ ಸಂಪರ್ಕ ನಡೆಸುವ ಸಂದರ್ಭದಲ್ಲಿ ಬಳಸಬೇಕಾದ ಅನಿವಾರ್ಯತೆಯೂ ಇಲ್ಲಿರುತ್ತದೆ. ಆದರೆ ಕಾಪರ್-ಟೀಯಂತಹ ಸಾಧನಗಳು ಹಾಗಲ್ಲ. ಐದು ವರ್ಷಕ್ಕೊಮ್ಮೆ ಬದಲಾಯಿಸಿದರೆ ಸಾಕಾಗುತ್ತದೆ. ಕಾಂಡೋಮ್‌ಗಳು ಎಚ್ಐವಿ ತಡೆಯುವಲ್ಲಿ ಮಾತ್ರ ಹೆಚ್ಚಿನ ಯಶಸ್ಸು ಸಾಧಿಸಿವೆ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ