ಒಲಿಸ್ಸಾದ ಕಂಧಮಾಲ್ ಜಿಲ್ಲೆಯಲ್ಲಿ ನಕ್ಸಲರು ನೆಲಬಾಂಬ್ ಸ್ಪೋಟಿಸಿದ ಹಿನ್ನೆಲೆಯಲ್ಲಿ, ಅಂಬುಲೆನ್ಸ್‌ನಲ್ಲಿದ್ದ ಮೂರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಂಧಮಾಲ್ ಜಿಲ್ಲೆಯ ಬ್ಮಾಹ್ಮಣಿಗಾಂವ್ ಪ್ರದೇಶದಲ್ಲಿ ನಕ್ಸಲರು ನೆಲಬಾಂಬ್ ಸ್ಪೋಟಿಸಿದ್ದರಿಂದ ಅಂಬುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದ ಆರೋಗ್ಯ ಕಾರ್ಯಕರ್ತೆ ಸೇರಿದಂತೆ ಮೂವರು ಮೃತರಾಗಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಮನ್‌ಮೋಹನ್ ಪ್ರಹಾರಾಜ್ ತಿಳಿಸಿದ್ದಾರೆ.
ಪಂಗಡುಗಾಂವ್ ಸೇತುವೆ ಬಳಿ ಈ ಘಟನೆ ನಡೆದಿದ್ದು, ಆರೋಗ್ಯ ಕಾರ್ಯಕರ್ತೆ ರೋಗಿ ಮತ್ತು ಅಂಬುಲೆನ್ಸ್ ಚಾಲಕ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ನವೆಂಬರ್ 25 ರಂದು ಪ್ರದೇಶದ ಪ್ರಮುಖ ಗುತ್ತಿಗೆದಾರ ಮನೋಜ್ ಸಾಹು ಹತ್ಯೆಯಾದ ಕೇವಲ ಮೂರು ದಿನಗಳ ಅವಧಿಯಲ್ಲಿ ನಕ್ಸಲರಿಂದ ಮತ್ತೆ ಇಂತಹ ದುಷ್ಕ್ರತ್ಯ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಆರ್.ಕೆ.ಶರ್ಮಾ ತಿಳಿಸಿದ್ದಾರೆ.