ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿಮ್ಮ ಕಲ್ಪನೆ ತಪ್ಪು, ಕೆಲವು ಮಹಿಳೇರು ಮಾತ್ರ ದಪ್ಪ! (Indian women | HSPH | BMI | Female)
Bookmark and Share Feedback Print
 
ಭಾರತೀಯ ಮಹಿಳೆಯರು ಬಹುತೇಕ ದಪ್ಪ ಎಂಬುದು ಸಾಮಾನ್ಯ ಕಲ್ಪನೆ. ಆದರೆ ಅದು ಸುಳ್ಳು ಎಂಬುದು ಬಹಿರಂಗವಾಗಿದೆ. ಸಾರ್ವಜನಿಕರ ಆರೋಗ್ಯ ಕುರಿತ ಹಾರ್ವರ್ಡ್ ಸ್ಕೂಲ್ ನಡೆಸಿದ ಅಧ್ಯಯನದ ಪ್ರಕಾರ ಭಾರತದ ಶೇ.15 ಮಹಿಳೆಯರು ಮಾತ್ರ ದಡೂತಿ ದೇಹಿಗಳು.

ಬಿಎಂಐ ಕುರಿತ ಸಮೀಕ್ಷೆಯನ್ನು 54 ಅಲ್ಪ ಮತ್ತು ಮಧ್ಯಮ ಆದಾಯ ರಾಷ್ಟ್ರಗಳಲ್ಲಿ ನಡೆಸಲಾಗಿದೆ. ಅತಿ ಹೆಚ್ಚು ಬಾಧೆಗೊಳಗಾಗಿರುವ ಅಗ್ರ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕಾಣಿಸಿಕೊಂಡಿದೆ. ಆದರೂ ಒಟ್ಟಾರೆ ಕಲ್ಪನೆ ಮತ್ತು ಸಮೀಕ್ಷೆಗೆ ಅಜಗಜಾಂತರ ಕಂಡು ಬಂದಿದೆ.

ದೇಹ ತೂಕದ ಸೂಚ್ಯಂಕ (ಬಿಎಂಐ) ಸರಾಸರಿ ಪ್ರಕಾರ ಶೇ.21 ಭಾರತೀಯ ಮಹಿಳೆಯರು ಅಗತ್ಯಕ್ಕಿಂತ ಹೆಚ್ಚಿನ ತೂಕ ಹೊಂದಿದ್ದಾರೆ. 15ರಿಂದ 49ರ ನಡುವಿನ ವಯಸ್ಸಿನ ಸ್ತ್ರೀಯರನ್ನು ಮಾತ್ರ ಗಮನಕ್ಕೆ ತೆಗೆದುಕೊಂಡರೆ, ಬೊಜ್ಜು ಹೊಂದಿರುವವರ ಪ್ರಮಾಣ ಶೇ.15 ಮಾತ್ರ.

ಇಥಿಯೋಪಿಯಾ ಶೇ.6.3, ಕಾಂಬೋಡಿಯಾ ಶೇ.7.3, ನೇಪಾಳ ಶೇ.7.9, ಕ್ಯಾಮರೂನ್ ಶೇ.9.2, ಮಡಗಾಸ್ಕರ್ ಶೇ.10.4, ಚಾಡ್ ಶೇ.11.3, ಕಾಂಗೋ ಶೇ.12.9, ಬಾಂಗ್ಲಾದೇಶ ಶೇ.13.8, ಮಲಾವಿ ಶೇ.13.9 ಅತಿ ಹೆಚ್ಚಿನ ತೂಕದ ಮಹಿಳೆಯರನ್ನು ಹೊಂದಿದೆ.

ಕಡಿಮೆ ಬಿಎಂಐಯನ್ನು ಗಣನೆಗೆ ತೆಗೆದುಕೊಂಡಾಗ ಇಥಿಯೋಪಿಯಾದಲ್ಲಿ 20.4, ಬಾಂಗ್ಲಾದೇಶದಲ್ಲಿ 20.9, ನೇಪಾಳದಲ್ಲಿ 20.6, ಭಾರತದಲ್ಲಿ 21 ಇರುವುದು ಕಂಡು ಬಂದಿದೆ. ಅತಿ ಹೆಚ್ಚು ಬಿಎಂಐ ಹೊಂದಿರುವ ದೇಶ ಈಜಿಪ್ತ್. ಈ ದೇಶದಲ್ಲಿ 28.7 ಬಿಎಂಐ ಸಮೀಕ್ಷೆಗೆ ಸಿಕ್ಕಿದೆ. ಇದರ ನಂತರದ ಸ್ಥಾನಗಳಲ್ಲಿ ಜೋರ್ಡಾನ್ 28.3, ಸ್ವಿಜರ್ಲೆಂಡ್ 26.4, ಟರ್ಕಿ 26.7, ಬೊಲಿವಿಯಾ 25.5 ಬಿಎಂಐ ಹೊಂದಿವೆ.

ಬಿಎಂಐ ಕಂಡು ಹಿಡಿಯುವುದು ಹೀಗೆ...
ದೇಹ ಪ್ರಕೃತಿ ಮತ್ತು ತೂಕಕ್ಕೆ ಹೊಂದಾಣಿಕೆಯಾದರೆ ಮಾತ್ರ ಮನುಷ್ಯನೊಬ್ಬ ಹೆಚ್ಚು ಆರೋಗ್ಯಯುತವಾಗಿ ಇರಬಹುದು ಎಂದು ವಿಜ್ಞಾನ ಹೇಳುತ್ತದೆ. ಇದನ್ನು ಲೆಕ್ಕ ಹಾಕುವುದು ಬಾಡಿ ಮಾಸ್ ಇಂಡೆಕ್ಸ್ ಅಥವಾ ದೇಹ ತೂಕದ ಸೂಚ್ಯಂಕದ ಮೂಲಕ. ಇಲ್ಲಿ ಪುರುಷರು ಮತ್ತು ಮಹಿಳೆಯರ ಲೆಕ್ಕಾಚಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಇಲ್ಲಿ ಪ್ರಮುಖವಾಗಿ ಮೂರು ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ. 1) ಮೀಟರ್ ಲೆಕ್ಕದಲ್ಲಿ ಎತ್ತರವನ್ನು ಅಷ್ಟೇ ಮೊತ್ತದಿಂದ ಗುಣಿಸುವುದು. 2) ಕಿಲೋ ಗ್ರಾಮ್ ಲೆಕ್ಕದಲ್ಲಿ ತೂಕ. 3) ತೂಕವನ್ನು ಎತ್ತರದಿಂದ ಭಾಗಿಸುವುದು.

ಅಂದರೆ ನೀವು 1.6 ಮೀಟರ್ ಎತ್ತರವಿದ್ದೀರಿ (5.3 ಅಡಿ) ಎಂದಾಗಿದ್ದರೆ, ನಿಮ್ಮ ತೂಕ 65 ಕೆ.ಜಿ. ಆಗಿದ್ದರೆ, ಲೆಕ್ಕಾಚಾರ ಮಾಡುವುದು ಹೀಗೆ.

ಎತ್ತರ = 1.6 x 1.6 = 2.56

ಬಿಎಂಐ = ತೂಕ/ಎತ್ತರ = 65/2.56 = 25.39

ಸಾಮಾನ್ಯ ಬಿಎಂಐ ಎಷ್ಟು?
ಸಾಮಾನ್ಯ ಬಿಎಂಐ - 14.5ರಿಂದ 24.9. ಅತಿ ಹೆಚ್ಚಿನ ತೂಕವೆಂದರೆ 25ರಿಂದ 29.9 ಬಿಎಂಐ. 30ರಿಂದ 40ರೊಳಗಿನದ್ದು ಬೊಜ್ಜು. 40ಕ್ಕಿಂತ ಹೆಚ್ಚಿನ ಬಿಎಂಐ ಬಂದಿದ್ದರೆ, ಅದು ಗಂಡಾಂತರಕಾರಿ ಬೊಜ್ಜು. 14.5ಕ್ಕಿಂತ ಕಡಿಮೆ ಬಿಎಂಐ ಕಂಡು ಬಂದರೆ ಅದು ಅತಿ ಕಡಿಮೆ ತೂಕ ಎಂದು ಪರಿಗಣಿಸಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ