ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಗನ್ ನಡೆ ದುರದೃಷ್ಟಕರ, ಪಕ್ಷಕ್ಕೆ ತೊಂದರೆಯಿಲ್ಲ: ಮೊಯ್ಲಿ (M Veerappa Moily | YS Jaganmohan Reddy | Congress | Andhra Pradesh)
Bookmark and Share Feedback Print
 
ವೈಎಸ್ ಜಗನ್ ಮೋಹನ್ ರೆಡ್ಡಿ ಕಾಂಗ್ರೆಸ್ ಮತ್ತು ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ದುರದೃಷ್ಟಕರ, ಹಾಗೆ ಮಾಡಬಾರದಿತ್ತು; ಆದರೂ ಇದರಿಂದ ಪಕ್ಷಕ್ಕೆ ಯಾವುದೇ ತೊಂದರೆಯಾಗದು ಎಂದು ಕೇಂದ್ರ ಕಾನೂನು ಸಚಿವ ಹಾಗೂ ಆಂಧ್ರಪ್ರದೇಶ ಕಾಂಗ್ರೆಸ್ ಉಸ್ತುವಾರಿ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸಂಸತ್ತಿನ ಹೊರಗಡೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಹಾಗಾಗಿ ಜಗನ್ ನಡೆಯು ಪಕ್ಷದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿಯವರ ಪುತ್ರ ಜಗನ್ ಮತ್ತು ಅವರ ತಾಯಿ ವಿಜಯಲಕ್ಷ್ಮಿ ರಾಜೀನಾಮೆ ಕುರಿತು ಪ್ರಶ್ನಿಸಿದಾಗ ಮೇಲಿನಂತೆ ಮೊಯ್ಲಿ ಉತ್ತರಿಸಿದರು.

ಜಗನ್ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ನಿಮಗೆ ಅನ್ನಿಸುತ್ತಿದೆಯೇ ಎಂದು ಪ್ರಶ್ನಿಸಿದಾಗ, ಜೋರಾಗಿ ನಕ್ಕ ಸಚಿವರು, 'ಅದರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ' ಎಂದರು. ಅಲ್ಲದೆ ರಾಜೀನಾಮೆ ಪತ್ರವನ್ನು ನಾನು ಇನ್ನೂ ಸ್ವೀಕರಿಸಿಲ್ಲ ಎಂದರು.

ನಾವೇನು ಮಾಡಕ್ಕಾಗತ್ತೆ...
ಹೀಗೆಂದು ಪ್ರಶ್ನಿಸಿರುವುದು ಹಿರಿಯ ಕಾಂಗ್ರೆಸ್ ನಾಯಕ ವಿ. ಹನುಮಂತ ರಾವ್. ಇದು ಅವರ ಸ್ವಂತ ನಿರ್ಧಾರ. ಕಳೆದ ಹಲವು ಸಮಯದಿಂದ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಎಚ್ಚರಿಕೆ ನೀಡುತ್ತಾ ಬಂದಿತ್ತು. ಅವರೇ ಪಕ್ಷ ಬಿಟ್ಟು ಹೋಗಬೇಕೆಂದು ಬಯಸಿದವರು. ಇಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದರು.

ಜಗನ್ ಅವರ ಹಿಂದೆ ಕಾಂಗ್ರೆಸ್‌ನ ಇತರ ನಾಯಕರು ಹೋಗಬಹುದೇ ಎಂದಾಗ, 'ಇಲ್ಲ ಯಾರೂ ಹೋಗಲ್ಲ. ಜಗನ್‌ರ ಕೆಲವು ಕಟ್ಟಾ ಬೆಂಬಲಿಗಷ್ಟೇ ಹಿಂಬಾಲಿಸಬಹುದು' ಎಂದರು.

ಮೂರು ಅಥವಾ ನಾಲ್ಕು ಮಂದಿ ನಾಯಕರಷ್ಟೇ ಜಗನ್ ಹಿಂದೆ ಹೋಗಬಹುದು. ಅದು ಕೂಡ ಸಂಶಯ. ಅಂತವರು ವರ್ಷದೊಳಗೆ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂದು ಎಐಸಿಸಿಯ ಪರಿಶಿಷ್ಟ ಜಾತಿ-ಪಂಗಡ ವಿಭಾಗದ ಸಂಚಾಲಕರಾಗಿರುವ ರಾವ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ