ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅದೇ ರಾಗ, ಅದೇ ಹಾಡು; ಮುಂದುವರಿದ ಸಂಸತ್ ಗದ್ದಲ (Parliament | 2G scam | Meira Kumar | JPC)
Bookmark and Share Feedback Print
 
2ಜಿ ತರಂಗಾಂತರ ಹಗರಣದ ಜಂಟಿ ಸದನ ಸಮಿತಿ ತನಿಖೆ ಗದ್ದಲ ಸಂಸತ್ತಿನಲ್ಲಿ ಇನ್ನೂ ಕೊನೆಗೊಂಡಿಲ್ಲ. ಕಳೆದ ಮೂರು ವಾರಗಳಿಂದ ವಿರೋಧ ಪಕ್ಷಗಳು ಹಗರಣವನ್ನು ಜೆಪಿಸಿ ತನಿಖೆಗೆ ಒಪ್ಪಿಸಲೇ ಬೇಕೆಂದು ಪಟ್ಟು ಹಿಡಿದು ಕೂತಿದ್ದರೆ, ಅತ್ತ ಸರ್ಕಾರ ಸುತರಾಂ ಒಪ್ಪುತ್ತಿಲ್ಲ. ಇದರಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ವ್ಯವಹಾರ ನಡೆಯುತ್ತಿಲ್ಲ.

ಅದು ಇಂದು ಅಂದರೆ ಸತತ 12ನೇ ದಿನವೂ (ಪ್ರಶ್ನೋತ್ತರ ವೇಳೆ) ಮುಂದುವರಿದಿದೆ. ಏಷ್ಯನ್ ಗೇಮ್ಸ್‌‌‌‌‌‌‌‌ನಲ್ಲಿ ಪದಕ ಗೆದ್ದವರನ್ನು ಅಭಿನಂಧಿಸಲು ಸ್ಪೀಕರ್ ಮೀರಾ ಕುಮಾರ್ ಇಂದು ಕೇಳಿಕೊಂಡಾಗ, ಪ್ರತಿಪಕ್ಷಗಳು 2ಜಿ ಹಗರಣದ ಜೆಪಿಸಿ ತನಿಖೆಗೆ ಒತ್ತಾಯಿಸಿ ಕೋಲಾಹಲ ಎಬ್ಬಿಸಿದವು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ನಡುವೆ ಕಾಂಗ್ರೆಸ್ ಹಿರಿಯ ಮುಖಂಡ ಪ್ರಣಬ್ ಮುಖರ್ಜಿ ಬಿಕ್ಕಟ್ಟಿಗೆ ಅಂತ್ಯ ಹಾಡಲು ಯತ್ನಿಸಿದರು. ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮತ್ತು ಇತರ ಪ್ರತಿಪಕ್ಷದ ನಾಯಕರನ್ನು ಭೇಟಿ ಮಾಡಿ ಸದನ ನಡೆಯಲು ಅಡ್ಡಿಪಡಿಸದಂತೆ ಮನವಿ ಮಾಡಿದರು. ಸುಪ್ರೀಂ ಕೋರ್ಟ್‌ನ ಮಾರ್ಗದರ್ಶನದಂತೆ 2ಜಿ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ ಎಂದು ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ತಿಳಿಸಿದರು.

ಆದರೆ, ಜೆಪಿಸಿ ತನಿಖೆ ನಡೆಯಲೇ ಬೇಕೆಂಬ ಕಠಿಣ ನಿಲುವನ್ನು ಪ್ರತಿಪಕ್ಷಗಳು ಸಡಿಲಿಸಲು ಮುಂದಾಗಲಿಲ್ಲ.

ರಾಜ್ಯಸಭೆಯ ಪ್ರತಿಪಕ್ಷದ ಉಪ ನಾಯಕ ಎಸ್.ಎಸ್. ಅಹ್ಲುವಾಲಿಯ ಜಂಟಿ ಸದನ ಸಮಿತಿ ತನಿಖೆಯೇ ಸೂಕ್ತವಾದದ್ದು ಎಂದಿದ್ದಾರೆ.

ಈ ನಡುವೆ ಸಂಸತ್ ಬಿಕ್ಕಟ್ಟು ಕೊನೆಗೊಳಿಸುವ ನಿಟ್ಟಿನಲ್ಲಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಇಂದು ಸಂಜೆ ನಾಲ್ಕು ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ.

ಆದರೆ, ಕಾಂಗ್ರೆಸ್ ವಕ್ತಾರ ಶಕೀಲ್ ಅಹಮದ್ ಮಾತನಾಡಿ, ಸರ್ಕಾರ ಹಗರಣವನ್ನು ಪಿಎಸಿ ತನಿಖೆಗೆ ನೀಡಲು ಮೊದಲೇ ನಿರ್ಧರಿಸಿದ್ದು, ಆ ವರದಿಯ ನಂತರವಷ್ಟೆ ಮುಂದಿನ ತೀರ್ಮಾನ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ