ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ (Delhi | Uttar Pradesh | human rights violations | NHRC)
Bookmark and Share Feedback Print
 
ಪೊಲೀಸರ ಅಮಾನವೀಯತೆ, ಮಹಿಳೆಯರ ದೌರ್ಜನ್ಯ, ಗಲಭೆಗಳು ಮುಂತಾದ ಪ್ರಕರಣಗಳ ತನಿಖೆ ನಡೆಸಿ ನ್ಯಾಯ ಒದಗಿಸುವ ಕೆಲಸಕ್ಕೆ ಸಹಕಾರ ನೀಡುವ ಮಹತ್ವದ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹೊರಗೆಡವಿರುವ ಮಾಹಿತಿಯ ಪ್ರಕಾರ ದೇಶದ ಒಟ್ಟು ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಮತ್ತು ದೆಹಲಿಗಳೇ ಗರಿಷ್ಠ ಪಾಲು ಪಡೆದಿವೆ.

2009 ಡಿಸೆಂಬರ್ ಆರಂಭದಿಂದ 2010ರ ಅಕ್ಟೋಬರ್ ಅಂತ್ಯದವರೆಗೆ ದೇಶದಾದ್ಯಂತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ದಾಖಲಿಸಿಕೊಂಡಿರುವ 78,657 ಪ್ರಕರಣಗಳಲ್ಲಿ ಶೇ.67ರ ಪಾಲನ್ನು ದೆಹಲಿ ಮತ್ತು ಉತ್ತರ ಪ್ರದೇಶಗಳು ಹೊಂದಿವೆ ಎಂದು ದಾಖಲೆ ಸಹಿತ ವಿವರಿಸಲಾಗಿದೆ.

ಇದರಲ್ಲಿ 46,917 ಪ್ರಕರಣಗಳು ಉತ್ತರ ಪ್ರದೇಶವೊಂದರಲ್ಲೇ ದಾಖಲಾಗಿದೆ. ದೆಹಲಿಯ ಪಾಲು 5,498. ಉಳಿದಂತೆ ಇತರ ಮೂರು ಕೆಟ್ಟ ರಾಜ್ಯಗಳು ಎಂದು ಕುಖ್ಯಾತಿಗೊಳಗಾಗಿರುವುದು 2,742 ಪ್ರಕರಣಗಳನ್ನು ಹೊಂದಿರುವ ಬಿಹಾರ, 2,456 ಪ್ರಕರಣಗಳ ರಾಜಸ್ತಾನ ಮತ್ತು 2,191 ಪ್ರಕರಣಗಳನ್ನು ಕಂಡಿರುವ ಮಹಾರಾಷ್ಟ್ರ.

ಈ ಬಗ್ಗೆ ವಿವರಣೆ ನೀಡಿರುವ ಆಯೋಗದ ಅಧಿಕಾರಿಯೊಬ್ಬರು, 'ಮಾನವ ಹಕ್ಕುಗಳ ಉಲ್ಲಂಘನೆಯ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ಉತ್ತರ ಪ್ರದೇಶ ತೀವ್ರ ಆತಂಕಕ್ಕೆ ಕಾರಣವಾಗಿದೆ. ರಾಷ್ಟ್ರ ರಾಜಧಾನಿಯಾಗಿರುವ ದೆಹಲಿ ಕೂಡ ಆತಂಕಕಾರಿ ನಿರ್ವಹಣೆಯನ್ನು ಈ ವಿಚಾರದಲ್ಲಿ ತೋರಿಸಿದೆ' ಎಂದರು.

ಮಕ್ಕಳು, ಆರೋಗ್ಯ, ಜೈಲು, ನ್ಯಾಯಾಂಗ, ಮಾಫಿಯಾ, ಕಾರ್ಮಿಕರು, ಅಲ್ಪಸಂಖ್ಯಾತರು, ಪೊಲೀಸ್, ಮಾಲಿನ್ಯ ಮತ್ತು ಪರಿಸರ, ನಿರಾಶ್ರಿತರು, ಸೇವಾ ವಿಚಾರಗಳು, ಮಹಿಳೆ, ಅರೆಸೇನಾಪಡೆ, ರಕ್ಷಣಾ ಪಡೆಗಳು, ಭಯೋತ್ಪಾದನೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಬಾಲಾಪರಾಧಿಗಳು, ವಿದೇಶೀಯರು ಮತ್ತು ಗಲಭೆಗಳೆಂಬ 21 ಉಲ್ಲಂಘನೆಗಳೆಂದು ವಿಭಾಗ ಮಾಡಲಾಗಿದೆ.

ಪೊಲೀಸರು ನಡೆಸಿರುವ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ ಕಂಡು ಬಂದಿರುವುದು ಉತ್ತರ ಪ್ರದೇಶದಲ್ಲಿ. ಈ ವಿಭಾಗದಲ್ಲಿ ರಾಜ್ಯವು 18,068 ಪ್ರಕರಣಗಳನ್ನು ಕಂಡಿದೆ.

ಆಘಾತಕಾರಿ ವಿಚಾರವೆಂದರೆ 2010ರ ಮಾರ್ಚ್ 31ರವರೆಗೆ ಆಯೋಗವು ದಾಖಲಿಸಿಕೊಂಡಿರುವ ಒಟ್ಟು ಪ್ರಕರಣಗಳಲ್ಲಿ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ ನಡೆದಿರುವುದು ಪೊಲೀಸರಿಂದಲೇ ಎನ್ನುವುದು.
ಸಂಬಂಧಿತ ಮಾಹಿತಿ ಹುಡುಕಿ