ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರೇಮಿಗಳ ಓಟಕ್ಕೆ ಕೋರ್ಟ್ ತಡೆ..! (Delhi High Court | Arya Samaj | Hinduism | Minors eloping)
Bookmark and Share Feedback Print
 
ಅಪ್ರಾಪ್ತ ವಯಸ್ಕರ ವಿವಾಹಗಳಿಗೆ ದೆಹಲಿ ಹೈಕೋರ್ಟ್ ಕಡಿವಾಣ ಹಾಕಿದೆ. ಇತ್ತೀಚಿಗೆ ಕದ್ದು ಮುಚ್ಚಿ ಮದುವೆ ಆಗುತ್ತಿರುವವರಲ್ಲಿ ಬಹುತೇಕರು ಅಪ್ರಾಪ್ತ ವಯಸ್ಕರೇ ಆಗಿರುವುದರಿಂದ ಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ. ಈ ಸಂಬಂಧ ಶೀಘ್ರ ತನಿಖೆ ಕೈಗೊಳ್ಳಲು ದೆಹಲಿ ಪೋಲಿಸರಿಗೆ ನಿರ್ದೇಶನ ನೀಡಿದೆ.

ಇತ್ತೀಚೆಗೆ, 12ವರ್ಷದ ಮುಸ್ಲಿಂ ಅಪ್ರಾಪ್ತ ವಯಸ್ಸಿನ ಯುವತಿ, ಹಿಂದೂ ಯುವಕನೊಂದಿಗೆ ಅಕ್ರಮವಾಗಿ ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಳು. ಇದಕ್ಕೆ ನೋಟೀಸ್ ಜಾರಿಮಾಡಿದ ದೆಹಲಿ ಹೈಕೋರ್ಟ್ ಈ ಆದೇಶ ಹೊರ ತಂದಿದೆ.

ಯಮುನಾ ಬಜಾರ್‌ನ ಸುತ್ತಮುತ್ತಲಲ್ಲಿರುವ ಇತರ ದೇವಾಲಯಗಳ ಮದುವೆ ವಿಚಾರಕ್ಕೆ ಸಂಬಂಧಿಸಿದ ಕಳೆದ ಮೂರು ವರ್ಷಗಳ ಕಡತಗಳು, ಬ್ಯಾಂಕ್ ಅಕೌಂಟ್ ಮುಂತಾದ ದಾಖಲೆಗಳನ್ನು ಡಿಸಂಬರ್ 14 ರೊಳಗೆ ಸಲ್ಲಿಸಲು ಪೋಲಿಸರಿಗೆ ಕೋರ್ಟ್ ಸೂಚಿಸಿದೆ. ಹಾಗೂ ದೇವಾಲಯದ ಅಧಿಕಾರಿಗಳು, ಕಛೇರಿ ಸಿಬ್ಬಂದಿಗಳ ವಿವರ ಸಲ್ಲಿಸಲು ಸೂಚಿಸಿದೆ. ಒಟ್ಟಾರೆ ಪ್ರಕರಣದ ಜವಾಬ್ಧಾರಿಯನ್ನು ಉಪ ಪೊಲೀಸ್ ಆಯುಕ್ತರಿಗೆ ವಹಿಸಲಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

'ಇತ್ತೀಚೆಗೆ ಮನೆ ಬಿಟ್ಟು ಓಡಿ ಬಂದು ಮದುವೆ ಆಗುವವರ ಸಂಖ್ಯೆ ಹೆಚ್ಚುತ್ತಿದೆ. ಇವರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಕರು.
ಇಂತಹ ಹಲವು ಅಕ್ರಮ ವಿವಾಹಗಳನ್ನು ದೆಹಲಿಯ ಯಮುನಾ ಬಜಾರ್‌ನ ಆರ್ಯ ಸಮಾಜದ ದೇವಾಲಯದಲ್ಲಿ ಆಯೋಜಿಸಲಾಗಿತ್ತು' ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ತಿಳಿಸಿದ್ದಾರೆ.

ಪ್ರೀತಿ-ಪ್ರೇಮದ ಹೆಸರಿನಲ್ಲಿ ಮನೆಯವರಿಗೆ ವಿರುದ್ಧವಾಗಿ ಮದುವೆಯಾಗಿ, ಮರ್ಯಾದಾ ಹತ್ಯೆ ಬೆದರಿಕೆ ಎದುರಿಸುತ್ತಿರುವುದು ಒಂದೆಡೆಯಾದರೆ, ಇಂತಹ ವಿವಾಹಗಳು ಮತಾಂತರಕ್ಕೂ ಪ್ರಚೋದನೆ ನೀಡುತ್ತಿವೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ, ಸರ್ಕಾರ ಶೀಘ್ರ ಪರಿಶೀಲನೆಗೆ ಕ್ರಮಕೈಗೊಂಡಿದೆ. ಇಂತಹ ಪ್ರಕರಣಗಳು ದಿನೇ-ದಿನೇ ಹೆಚ್ಚುತ್ತಿರುವುದರಿಂದ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ