ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ಶ್ರೀಮಂತನಲ್ಲ, ಅಕ್ರಮ ಸಂಪಾದಿಸಿಲ್ಲ: ಕರುಣಾನಿಧಿ (AIADMK | Jayalalithaa | M Karunanidhi | DMK)
Bookmark and Share Feedback Print
 
ಸಾರ್ವಜನಿಕ ಜೀವನದಲ್ಲಿ ಲೋಡುಗಟ್ಟಲೆ ಸಂಪಾದನೆ ಮಾಡಿದ್ದೇನೆ ಎಂಬ ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಆರೋಪಗಳನ್ನು ನಿರಾಕರಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ತಾನು ರಾಜಕಾರಣಕ್ಕೆ ಬರುವಾಗ ಫಕೀರನಾಗಿರಲಿಲ್ಲ; ಈಗ ಇರುವುದು ಕೂಡ ಅಷ್ಟಕಷ್ಟೇ. ಒಂದು ಚಿಕ್ಕ ಮನೆ ಮತ್ತು ಆರು ಕೋಟಿ ರೂಪಾಯಿ ಬ್ಯಾಂಕ್ ಠೇವಣಿ ಬಿಟ್ಟರೆ ನನ್ನಲ್ಲಿ ಏನೂ ಇಲ್ಲ ಎಂದಿದ್ದಾರೆ.
PTI

ನಾನು ಚೆನ್ನೈಗೆ ಬರುವಾಗ ನಿರ್ಗತಿಕನಾಗಿ ಬಂದಿದ್ದೆ ಎಂಬ ಆರೋಪ ನಿಜವಲ್ಲ. ಇಲ್ಲಿ ನೆಲೆಗೊಳ್ಳುವ ಮೊದಲೇ ನಾನು ಸಂಪಾದಿಸಲು ಆರಂಭಿಸಿದ್ದೆ ಎಂದು ಜಯಲಲಿತಾ ತನ್ನ ಪಕ್ಷದ ಮುಖವಾಣಿ 'ಮುರಸೋಲಿ'ಯಲ್ಲಿ ಮಾಡಿರುವ ಆರೋಪಗಳಿಗೆ ಡಿಎಂಕೆ ವರಿಷ್ಠ ಉತ್ತರಿಸಿದ್ದಾರೆ.

ತಾನು ಹಲವು ತಮಿಳು ಸಿನಿಮಾಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದುದರಿಂದ ಆ ಕಾಲದಲ್ಲಿ ಸಾಕಷ್ಟು ಹಣ ನನ್ನಲ್ಲಿ ಹರಿದಾಡುತ್ತಿತ್ತು. ದಿವಂಗತ ಎನ್.ಎಸ್. ಕೃಷ್ಣನ್ ಅವರು ಆ ಕಾಲದಲ್ಲಿ ನನ್ನ 'ಮಂತಿರಿ ಕುಮಾರಿ' ನಾಟಕವನ್ನು ಸಿನಿಮಾ ಮಾಡಿದಾಗ 10,000 ರೂಪಾಯಿ ಕೊಟ್ಟಿದ್ದರು. ನಂತರ ಅವರ ಜತೆ ಬೆಟ್ ಕಟ್ಟಿದ್ದಕ್ಕೆ ಕಾರೊಂದನ್ನು ಕೂಡ ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಿದ್ದಾರೆ.

ತಾನು ಈಗ ವಾಸಿಸುತ್ತಿರುವ ಮನೆಯನ್ನು ಹಲವಾರು ವರ್ಷಗಳ ಹಿಂದೆ 45,000 ರೂಪಾಯಿಗಳಿಗೆ ಕೊಂಡುಕೊಂಡಿದ್ದೆ ಎಂದಿರುವ 87ರ ಹರೆಯದ ಡಿಎಂಕೆ ವರಿಷ್ಠ, ತನ್ನ ಪಕ್ಷದ ಒತ್ತಡದ ಹೊರತಾಗಿಯೂ ತಾನು ಸಚಿವನಾಗಿದ್ದಾಗ ಅಥವಾ ಮುಖ್ಯಮಂತ್ರಿಯಾದಾಗ ಸರಕಾರಿ ನಿವಾಸಕ್ಕೆ ಸ್ಥಳಾಂತರಗೊಳ್ಳಲಿಲ್ಲ ಎಂದಿದ್ದಾರೆ.

ನಿಜಕ್ಕೂ ನಾನು ವಾಸಿಸುತ್ತಿರುವ ಮನೆ ತುಂಬಾ ಚಿಕ್ಕದು. ನನ್ನ ಮಕ್ಕಳು ಅವರೇ ಖರೀದಿ ಮಾಡಿದ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇಂದ್ರ ಸಚಿವ ಎಂ.ಕೆ. ಅಳಗಿರಿ ಮತ್ತು ಸಂಸದೆ ಕನಿಮೋಳಿಯ ಬಗ್ಗೆ ವಿವರಣೆ ನೀಡಿದ್ದಾರೆ.

ತಾನು 75ಕ್ಕೂ ಹೆಚ್ಚು ತಮಿಳು ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದೆ. ಇದೇ ಹಣದಿಂದ ನಾನು ಜೀವನ ಸಾಗಿಸುತ್ತಿದ್ದೆ. ಈಗಲೂ ನನಗೆ ಚೆನ್ನೈನಲ್ಲಿನ ಮನೆ ಬಿಟ್ಟರೆ ಬೇರೆ ಆಸ್ತಿಯಿಲ್ಲ ಎಂದು ಆರೋಪಗಳಿಗೆ ಉತ್ತರಿಸಿದ್ದಾರೆ.

ತನ್ನ ಅಳಿಯನ ಸನ್ ಟಿವಿ ಹುಟ್ಟಿದ್ದು ಮತ್ತು ಬೆಳೆದದ್ದನ್ನು ಮೆಲುಕು ಹಾಕಿರುವ ಕರುಣಾನಿಧಿ, ದಿವಂಗತ ಮುರಸೋಳಿ ಮಾರನ್ ಕಾಲದಲ್ಲಿ ಚಾನೆಲ್ ಹುಟ್ಟಿಕೊಂಡಿತ್ತು; ಅವರ ಪುತ್ರ ಕಲಾನಿಧಿ ಮಾರನ್ ಅದನ್ನು ಸ್ವಂತವಾಗಿ ನಡೆಸಬೇಕೆಂದು ಬಯಸಿದ್ದರು. ಹಾಗಾಗಿ ನಾನು 100 ಕೋಟಿ ರೂಪಾಯಿಗಳ ಪಾಲನ್ನು ಪಡೆದೆ ಎಂದರು.

ಅದರಲ್ಲಿ ತೆರಿಗೆ ಕಳೆದು 77.50 ಕೋಟಿ ರೂಪಾಯಿ ನನ್ನ ಕೈಗೆ ಬಂದಿತ್ತು. ಅದನ್ನು ಮಕ್ಕಳಿಗೆ ಹಂಚಿದ ಮೇಲೆ ನನ್ನಲ್ಲಿ 10 ಕೋಟಿ ಉಳಿಯಿತು. ಅದರಲ್ಲಿ ಐದು ಕೋಟಿಯನ್ನು ಕಳೈಂಞಾರ್ ಕರುಣಾನಿಧಿ ಟ್ರಸ್ಟ್‌ಗೆ ವಿನಿಯೋಗಿಸಿದೆ. ಇದರಿಂದ ಬಡವರಿಗೆ ಸಹಾಯವಾಗುತ್ತಿದೆ. ಉಳಿದ 5.65 ಕೋಟಿ ರೂಪಾಯಿಗಳನ್ನು ಸ್ಥಿರ ಠೇವಣಿಯಿಟ್ಟಿದ್ದೇನೆ. 35.90 ಲಕ್ಷ ರೂಪಾಯಿ ಬ್ಯಾಂಕಿನ ಉಳಿತಾಯ ಖಾತೆಯಲ್ಲಿದೆ ಎಂದು ಕರುಣಾನಿಧಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ