ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಧ್ರದ 3 ಸಚಿವರ ರಾಜೀನಾಮೆ; ಸಂಕಷ್ಟದಲ್ಲಿ ಕಾಂಗ್ರೆಸ್ (Congress | Andhra Pradesh | Vatti Vasantha Kumar | Kiran Kumar Reddy)
Bookmark and Share Feedback Print
 
ರೆಡ್ಡಿಗಳ ಮನೆ ಒಡೆದು ಬೀಗುತ್ತಿದ್ದ ಕಾಂಗ್ರೆಸ್‌ಗೆ ಮತ್ತೆ ತಲೆನೋವು ಆರಂಭವಾಗಿದೆ. ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸಂಪುಟ ರಚನೆಯಾದ 24 ಗಂಟೆಗಳ ಒಳಗೆ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ. ಇನ್ನೂ ಕನಿಷ್ಠ 10 ಸಚಿವರು ಇದೇ ಹಾದಿಯಲ್ಲಿದ್ದಾರೆ.

ತಮಗೆ ವಹಿಸಲಾಗಿರುವ ಖಾತೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ವಟ್ಟಿ ವಸಂತ್ ಕುಮಾರ್ ಮತ್ತು ಕೊಮಟಿರೆಡ್ಡಿ ವೆಂಕಟ ರೆಡ್ಡಿ ಎಂಬ ಸಚಿವರು ತಮ್ಮ ರಾಜೀನಾಮೆಗಳನ್ನು ಮುಖ್ಯಮಂತ್ರಿಗೆ ರವಾನಿಸಿದ್ದಾರೆ.
PTI

ಇನ್ನೂ ಹತ್ತು ಸಚಿವರು ತಮಗೆ ನೀಡಲಾಗಿರುವ ಖಾತೆಗಳ ಬಗ್ಗೆ ಅಸಂತುಷ್ಟರಾಗಿದ್ದಾರೆ. ಹಾಗಾಗಿ ಅವರು ಕೂಡ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಕಾಂಗ್ರೆಸ್ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಇದರ ಹಿಂದೆ ವೈ.ಎಸ್. ಜಗನ್ ಮೋಹನ್ ರೆಡ್ಡಿ ಕೈವಾಡವಿರುವ ಬಗ್ಗೆಯೂ ಶಂಕೆಗಳು ವ್ಯಕ್ತವಾಗಿವೆ.

ವಸಂತ್ ಕುಮಾರ್ ಅವರು ವೈ.ಎಸ್. ರಾಜಶೇಖರ ರೆಡ್ಡಿ ಮತ್ತು ಕೆ. ರೋಸಯ್ಯ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದವರು. ಅವರಿಗೆ ಈಗ ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದೆ. ಹಿಂದಿನದಕ್ಕೆ ಹೋಲಿಸಿದಾಗ, ಈಗಿನ ಖಾತೆಗೆ ಬಲ ಕಡಿಮೆ. ಇದೇ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ವೆಂಕಟ್ ರೆಡ್ಡಿಯವರದ್ದೂ ಅದೇ ಕಥೆ. ಅವರಿಗೆ ಈ ಬಾರಿ ಮೂಲಭೂತ ಸೌಕರ್ಯ ಮತ್ತು ಹೂಡಿಕೆ ಖಾತೆ ನೀಡಲಾಗಿದೆ.

ಧರ್ಮಣ ಪ್ರಸಾದ್ ರಾವ್, ಬೋತ್ಸಾ ಸತ್ಯನಾರಾಯಣ, ಪೊನ್ನಾಲ ಲಕ್ಷ್ಮಯ್ಯ, ಜೆ. ಕೃಷ್ಣ ರಾವ್, ದಾಮೋದರ ರಾಜನರಸಿಂಹ, ಕನ್ನ ಲಕ್ಷ್ಮಿನಾರಾಯಣ ಸೇರಿದಂತೆ ಇತರ ಹತ್ತು ಸಚಿವರು ಕೂಡ ಇದೇ ಸಾಲಿನಲ್ಲಿದ್ದಾರೆ. ಯಾವ ಕ್ಷಣದಲ್ಲಾದರೂ ಅವರು ರಾಜೀನಾಮೆ ನೀಡಬಹುದು. ಆದರೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್, ಮನವೊಲಿಕೆಯಲ್ಲಿ ತೊಡಗಿಸಿಕೊಂಡಿದೆ.

ಕಾಂಗ್ರೆಸ್ ಮೂಲಗಳು ಹೇಳುವ ಪ್ರಕಾರ ಸಂಪುಟದ ಅಸಮಾಧಾನ ಜಗನ್ ಪ್ರಭಾವವಲ್ಲ. ಇದು ಖಾತೆ ಹಂಚಿಕೆಯಲ್ಲಿ ನಡೆದಿರುವ ಜಾತಿ ರಾಜಕೀಯದ ಪರಿಣಾಮ. ರೆಡ್ಡಿ ಸಮುದಾಯಕ್ಕೆ ಭರ್ಜರಿ ಆದಾಯಗಳುಳ್ಳ ಖಾತೆಯನ್ನು ನೀಡಲಾಗಿದೆ. ಆದರೆ ಹಿಂದುಳಿದ ವರ್ಗದವರಿಗೆ ಉಪಯೋಗಕ್ಕೆ ಬಾರದ ಖಾತೆಗಳನ್ನು ಹಂಚಲಾಗಿದೆ ಎನ್ನುವುದೇ ಅಸಮಾಧಾನ.

ನೂತನ ಸಂಪುಟದಲ್ಲಿ 14 ಮಂದಿ ರೆಡ್ಡಿ ಸಮುದಾಯದವರಿದ್ದಾರೆ. ಆದರೆ ಹಿಂದುಳಿದ ವರ್ಗದಿಂದ ಬಂದವರಿಗೆ ಕೇವಲ 10 ಸ್ಥಾನಗಳನ್ನಷ್ಟೇ ಮೀಸಲಿಡಲಾಗಿದೆ. ಇದು ಕೂಡ ರೆಡ್ಡಿಗಳ ರಾಜಕೀಯ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿಯವರು ಖಾತೆಗಳನ್ನು ಹಂಚಿಕೆ ಮಾಡಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಹಿರಿಯ ಸಚಿವರೊಬ್ಬರು, 'ಸಚಿವ ಸಂಪುಟವೆಂದರೆ ಇದು ನಿಮ್ಮ ಪ್ರೈವೆಟ್ ಲಿಮಿಟೆಡ್ ಕಂಪನಿಯಲ್ಲ. ಕಾಂಗ್ರೆಸ್ ಪಕ್ಷವು ಆಂಧ್ರಪ್ರದೇಶದಲ್ಲಿ ಚಿಗಿತುಕೊಳ್ಳಬೇಕೆಂದು ಬಯಸುತ್ತಿದ್ದೀರಾ ಅಥವಾ 1994ರಲ್ಲಿ ಕೇವಲ 27 ಸೀಟುಗಳಿಗೆ ಸೀಮಿತವಾದಂತೆ ಮತ್ತೆ ಕುಸಿಯಬೇಕೆಂದು ಅಂದುಕೊಂಡಿದ್ದೀರಾ?' ಎಂದು ಪ್ರಶ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ