ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಎಂ ಒಮರ್ ಗುಡುಗಿದ್ದಕ್ಕೆ ಮರುಗಿದ ಮಿಲಿಟರಿ ಕಮಾಂಡರ್! (Jammu and Kashmir | Omar Abdullah | Manmohan Singh | Lt Gen B S Jaswal)
Bookmark and Share Feedback Print
 
ಸೇನೆಯು ತನ್ನನ್ನು ಮತ್ತು ತನ್ನ ಸರಕಾರವನ್ನು ಸಾರ್ವಜನಿಕವಾಗಿ ಟೀಕಿಸಿರುವುದಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ದೂರು ನೀಡಿದ ಬೆನ್ನಿಗೆ ನಾರ್ತರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿ.ಎಸ್. ಜಸ್ವಾಲ್ ಕ್ಷಮೆ ಯಾಚಿಸಿದ್ದಾರೆ!

ನವೆಂಬರ್ 29ರಂದು ಶ್ರೀನಗರದ ಹೊರ ವಲಯದಲ್ಲಿ ನಡೆದಿದ್ದ ಗುಂಡಿನ ಚಕಮಕಿಯ ಕುರಿತು ಉದಾಂಪುರದಲ್ಲಿನ ಮಿಲಿಟರಿಯ ನಾರ್ತರ್ನ್ ಕಮಾಂಡ್ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ ನಂತರ ವಿವಾದ ಭುಗಿಲೆದ್ದಿತ್ತು.

ಕೆಲವು ತೀವ್ರವಾದಿ ಪ್ರತ್ಯೇಕತಾವಾದಿಗಳು ಮತ್ತು ಐಎಸ್ಐ ಬಾಸ್‌ಗಳ ಒತ್ತಡಕ್ಕೆ ಮಣಿದಂತೆ ಕಂಡು ಬರುವ ಒಮರ್ ಅಬ್ದುಲ್ಲಾ ಸರಕಾರವು, ಅವರನ್ನು ಸಂತುಷ್ಟಗೊಳಿಸುವ ಉದ್ದೇಶದಿಂದ ಬಂಕರುಗಳನ್ನು ತೆಗೆದ ಕಾರಣದಿಂದಲೇ ಎನ್‌ಕೌಂಟರ್ ನಡೆದಿತ್ತು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಇದರ ಬೆನ್ನಿಗೆ ಮತ್ತೊಂದು ಪ್ರತ್ಯೇಕ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದ ಸೇನೆ, ಈ ಹಿಂದಿನ ಪತ್ರಿಕಾ ಹೇಳಿಕೆಯನ್ನು ರದ್ದುಪಡಿಸಿತ್ತು. ಅದನ್ನು ಪ್ರಕಟಿಸದಂತೆ ಸೂಚನೆ ನೀಡಿತ್ತು. ಆದರೂ ಕೆಲವು ಪತ್ರಿಕೆಗಳು ಆರಂಭದಲ್ಲಿ ನೀಡಲಾಗಿದ್ದ ಪತ್ರಿಕಾ ಹೇಳಿಕೆಯನ್ನೇ ಪ್ರಕಟಿಸಿದ್ದವು.

ಈ ಸಂಬಂಧ ಸ್ಪಷ್ಟನೆ ನೀಡಿರುವ ಸೇನೆಯ ವಕ್ತಾರರು, 'ಲೆಫ್ಟಿನೆಂಟ್ ಜನರಲ್ ಜಸ್ವಾಲ್ ಅವರು ಮುಖ್ಯಮಂತ್ರಿಯವರೊಡನೆ ಸಮಾಲೋಚನೆ ನಡೆಸಿದ್ದು, ಆಗಿರುವ ಪ್ರಮಾದಕ್ಕೆ ಕ್ಷಮೆ ಯಾಚಿಸಿದ್ದಾರೆ. ಅವರ ಪಾಲಿಗಿದು ಮುಗಿದು ಹೋಗಿರುವ ವಿಚಾರ' ಎಂದರು.

ರಾಜ್ಯ ಸರಕಾರದ ನೀತಿಗಳ ವಿಚಾರದಲ್ಲಿ ಸೇನೆಯು ಮಧ್ಯಪ್ರವೇಶ ಮಾಡುತ್ತಿರುವುದನ್ನು ಪ್ರತಿಭಟಿಸಿದ್ದ ಒಮರ್, ಈ ಸಂಬಂಧ ಪ್ರಧಾನ ಮಂತ್ರಿಗೆ ದೂರು ಸಲ್ಲಿಸಿದ್ದರು. ಆ ಬಳಿಕ ಲೆಫ್ಟಿನೆಂಟ್ ಜನರಲ್ ನಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ