ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 85ರ ಇಳಿವಯಸ್ಸಿನ ತಿವಾರಿ ಇನ್ನು ಎಲೆಕ್ಷನ್‌ಗೆ ನಿಲ್ಲಲ್ವಂತೆ! (N D Tiwari | Quit India movement | Parliament | Uttarakhand)
85ರ ಇಳಿವಯಸ್ಸಿನ ತಿವಾರಿ ಇನ್ನು ಎಲೆಕ್ಷನ್‌ಗೆ ನಿಲ್ಲಲ್ವಂತೆ!
ಡೆಹ್ರಾಡೂನ್, ಗುರುವಾರ, 2 ಡಿಸೆಂಬರ್ 2010( 15:33 IST )
'ನನಗೆ ಈಗ 85 ವರ್ಷ ವಯಸ್ಸು, ಎಷ್ಟೂಂತ ಚುನಾವಣೆಗಳಲ್ಲಿ ಸ್ಪರ್ಧಿಸಲಿ' ಎಂದಿದ್ದಾರೆ ಕ್ವಿಟ್ ಇಂಡಿಯಾ ಚಳುವಳಿ ಕಾಲದಿಂದಲೂ ರಾಜಕೀಯದಲ್ಲಿರುವ ಎನ್.ಡಿ.ತಿವಾರಿ. ಕೂದಲು ಬೆಳ್ಳಗಾಗಿ ನರ-ನಾಡಿಗಳೆಲ್ಲ ಬಾಡಿ ಹೋದರೂ ನಮ್ಮ ರಾಜಕಾರಣಿಗಳಿಗೆ ಅಧಿಕಾರ ದಾಹ ಮಾತ್ರ ಇಳಿಯೋದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ.
ಕೇಂದ್ರದ ಹಲವು ಕಾಂಗ್ರೆಸ್ ಮುಖಂಡರಿಗೆಲ್ಲಾ ಆತ್ಮೀಯವಾಗುತ್ತಾ, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಒಂದು ಬಾರಿ ಉತ್ತರಾಖಂಡದ ಮುಖ್ಯಮಂತ್ರಿಯೂ ಆಗಿದ್ದ ತಿವಾರಿಯ ರಾಜಕೀಯ ಜೀವನದ ಸಾಧನೆಗಳು ತುಂಬಾ ಇವೆಯಾದರೂ, ದಶಕಗಳ ವಿವಾದಾತ್ಮಕ ರಾಜಕೀಯ ಜೀವನದ ಬಳಿಕ, ತೀರಾ ಇತ್ತೀಚೆಗೆ ಆಂಧ್ರಪ್ರದೇಶದ ರಾಜ್ಯಪಾಲರಾಗಿ ಸೆಕ್ಸ್ ಹಗರಣದಲ್ಲಿ ಸಿಕ್ಕಿಬಿದ್ದು, ಪದತ್ಯಾಗ ಮಾಡಬೇಕಾಗಿಬಂದಿತ್ತು.
ಈಗ ಎಲ್ಲಾ ಸಾಕಾಗಿ ಹೋದಂತಿರುವ 85 ವರ್ಷದ ಅನುಭವಿ ರಾಜಕಾರಣಿ, ರಾಜಕೀಯಕ್ಕೆ ತಿಲಾಂಜಲಿಯಿತ್ತು ಅಭಿವೃದ್ಧಿ ರಾಜಕೀಯ ಮಾಡಲಿದ್ದಾರಂತೆ. ಆದರೆ ರಾಜಕೀಯದಿಂದ ತುಂಬ ದೂರ ಹೋಗಲಿದ್ದಾರೆ ಎಂದೇನು ಭಾವಿಸಬೇಕಾಗಿಲ್ಲ. ಇನ್ಮುಂದೆ "ಅಭಿವೃದ್ಧಿ ರಾಜಕೀಯ"ಕ್ಕೆ ಗಮನ ಹರಿಸುವುದಾಗಿ ಹೇಳಿದ್ದಾರೆ ಅವರು. ಎಲ್ಲೆಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟುತ್ತಾ ಸಾಗುತ್ತದೆಯೋ, ಅಥವಾ ಏನೇನು ಆಗಬೇಕಾಗಿದೆಯೊ ಅದರ ಬಗ್ಗೆ ಸರ್ಕಾರದ ಗಮನ ಸೆಳೆಯುವ ಮೂಲಕ ತಮ್ಮ ನಿವೃತ್ತ ಜೀವನವನ್ನು ಪುನಃ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದೂ ತಿಳಿಸಿದ್ದಾರೆ ತಿವಾರಿ. ಹಾಗಾದ್ರೆ ಇಷ್ಟು ವರ್ಷ ಏನು ಮಾಡಿದ್ರು ಅಂತ ಮಾತ್ರ ಕೇಳ್ಬೇಡಿ.