ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿಗೆ ಅಗೌರವ ತೋರಿದ ರಾಜಾಗೆ ಸುಪ್ರೀಂ ತರಾಟೆ (Supreme Court | A Raja | Manmohan Singh | Radia tapes)
Bookmark and Share Feedback Print
 
2008ರಲ್ಲಿನ 2ಜಿ ತರಂಗಾಂತರದ ವಿವಾದಿತ ಹಂಚಿಕೆ ಕುರಿತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಸಲಹೆಗಳನ್ನು ನಿರ್ಲಕ್ಷಿಸಿದ ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ. ರಾಜಾ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ಸತತ ಎರಡನೇ ದಿನವೂ ಅಸಮಾಧಾನ ವ್ಯಕ್ತಪಡಿಸಿದೆ.

ಮೊದಲು ಬಂದವರಿಗೆ ಮೊದಲು ನೀಡುವ ರಾಜಾ ನಿಲುವಿನ ಬದಲು ತರಂಗಾಂತರವನ್ನು ಹರಾಜು ಹಾಕುವಂತೆ 2007ರ ನವೆಂಬರ್ ತಿಂಗಳಲ್ಲಿ ಪ್ರಧಾನ ಮಂತ್ರಿಯವರು ನೀಡಿದ್ದ ಸಲಹೆಗೆ ರಾಜಾ ಅಗೌರವಯುತವಾದ ಪ್ರತಿಕ್ರಿಯೆಯನ್ನು ನೀಡಿದ್ದರು. ರಾಜಾ ಅವರು ಪ್ರಧಾನಿಗೆ ಉತ್ತರಿಸಿದ ರೀತಿಯು ಸಿಡುಕುತನದಿಂದ ಕೂಡಿತ್ತು ಎಂದು ನ್ಯಾಯಾಲಯವು ಇಂದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು.

ತರಂಗಾಂತರ ಪಡೆದುಕೊಳ್ಳಲು ಡಿಮಾಂಡ್ ಡ್ರಾಫ್ಟ್ ಸೇರಿದಂತೆ ಇತರ ದಾಖಲೆಗಳನ್ನು ಸಲ್ಲಿಸಲು ಕೇವಲ 45 ನಿಮಿಷ ಕಾಲಾವಕಾಶವನ್ನು ದೂರಸಂಪರ್ಕ ಸಚಿವಾಲಯವು ನೀಡಿತ್ತು. ಇದರ ಉದ್ದೇಶ ಸಂಬಂಧಪಟ್ಟವರಿಗೆ ಪರವಾನಗಿಯನ್ನು ನೀಡುವುದಾಗಿದ್ದಂತೆ ತೋರುತ್ತಿಲ್ಲ. 45 ನಿಮಿಷದಲ್ಲಿ ತರಂಗಾಂತರ ಹಂಚಿಕೆ ಮಾಡುವುದು ದೂರಸಂವೇದಿ ಮೂಲಕವೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.

ಸರಕಾರ ಅಥವಾ ದೂರಸಂಪರ್ಕ ಇಲಾಖೆಯು ಒಂದು ಖಾಸಗಿ ಸಂಸ್ಥೆಯಲ್ಲ. ಪ್ರಧಾನಿಯವರ ಸಲಹೆಯನ್ನು ಗೌರವಿಸದೇ ಇರುವುದು ಅಥವಾ ನಿರ್ಲಕ್ಷ್ಯಿಸಿರುವುದು ಯಾವುದೇ ಕಾರಣಕ್ಕೂ ಒಪ್ಪಬೇಕಾದ ವಿಚಾರವಲ್ಲ. ಸಾರ್ವಜನಿಕ ಹಿತಾಸಕ್ತಿ ಮತ್ತು ತರ್ಕಬದ್ಧವಾಗಿ ವರ್ತಿಸಬೇಕಾಗಿತ್ತು ಎಂದು ಕೋರ್ಟ್ ಹೇಳಿದೆ.

ರಾಡಿಯಾ ಟೇಪ್; ಪತ್ರಿಕೆಗಳಿಗೆ ನೊಟೀಸ್
ಲಾಬಿಗಾರ್ತಿ ನೀರಾ ರಾಡಿಯಾ ಮತ್ತು ಇತರರ ನಡುವಿನ ದೂರವಾಣಿ ಸಂಭಾಷಣೆಯ ಕುರಿತು ಸಿಬಿಐ, ಆದಾಯ ತೆರಿಗೆ ಇಲಾಖೆ, ಗೃಹ ಸಚಿವಾಲಯ, ಕೇಂದ್ರ ನೇರ ತೆರಿಗೆ ಮಂಡಳಿ ಹಾಗೂ ಓಪನ್ ಮತ್ತು ಔಟ್‌ಲುಕ್ ನಿಯತಕಾಲಿಕಗಳಿಗೆ ಸುಪ್ರೀಂ ಕೋರ್ಟ್ ನೊಟೀಸ್ ಜಾರಿ ಮಾಡಿದೆ.

ಈ ಪ್ರಕರಣದಲ್ಲಿ ಪಕ್ಷಗಳೆಂದು ಗುರುತಿಸಲ್ಪಟ್ಟಿರುವ ಸರಕಾರದ ವಿವಿಧ ಇಲಾಖೆಗಳು 10 ದಿನಗಳೊಳಗೆ ಅಫಿಡವಿತ್ ಸಲ್ಲಿಸುವಂತೆ ಸುಪ್ರೀಂ ಹೇಳಿದೆ.

ರಾಡಿಯಾ ಜತೆಗಿನ ಸಂಭಾಷಣೆ ಬಹಿರಂಗವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಉದ್ಯಮಿ ರತನ್ ಟಾಟಾ, ಇದು ಖಾಸಗಿತನದ ಭಂಗ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಖಾಸಗಿ ಮಾತುಕತೆಯನ್ನು ಬಹಿರಂಗಪಡಿಸಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಅವರ ವಕೀಲರು ವಾದಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ