ಪೂಂಛ್ ಜಿಲ್ಲೆಯಲ್ಲಿನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಡೆದಿರುವ ಕದನ ವಿರಾಮ ಉಲ್ಲಂಘನೆಯನ್ನು ಭಾರತೀಯ ಸೇನೆಯು ಪಾಕಿಸ್ತಾನ ಸೇನೆಯ ಜತೆ ಚರ್ಚಿಸಿದ್ದು, ತನ್ನ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.
ನಡೆದಿರುವ ಘಟನೆಗಳಿಗೆ ನಾವು ಪಾಕಿಸ್ತಾನದ ಸೇನೆಯ ಜತೆ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆ ಪುನರಾವರ್ತನೆಯಾಗಬಾರದು ಎಂದು ಹೇಳಿದ್ದೇವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನಿ ಸೇನೆಯು ಗುರುವಾರ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಹಲವು ಭಾರತೀಯ ಪೋಸ್ಟ್‌ಗಳ ಮೇಲೆ ಮೋರ್ಟಾರ್ ಮತ್ತು ರಾಕೆಟ್ ದಾಳಿಗಳನ್ನು ಸ್ವಯಂಪ್ರೇರಿತವಾಗಿ ನಡೆಸಿತ್ತು.
ಕಿರ್ಪಾನ್, ಚಜ್ಜಾ, ಕ್ರಾಂತಿ, ಗೋಡಾ, ನಂಗಿ ತಿರ್ಕಿ, ಮಂಡೊಲ್ ಮುಂತಾದ ಪೋಸ್ಟ್‌ಗಳ ಮೇಲೆ ಪಾಕಿಸ್ತಾನಿ ಸೇನೆಯು ರಾಕೆಟ್ ಲಾಂಚರುಗಳು ಮತ್ತು ಭಾರೀ ಗನ್ನುಗಳೊಂದಿಗೆ ದಾಳಿ ನಡೆಸಿದ್ದು, ಇದು ಮತ್ತೆ ನಡೆಯಬಾರದು ಎಂದು ನಾವು ಎಚ್ಚರಿಕೆ ನೀಡಿದ್ದೇವೆ ಎಂದು ಸೇನಾ ಮೂಲಗಳು ಹೇಳಿವೆ.