ಇಬ್ಬರು ಆರೋಪಿಗಳ ಪತ್ತೆ
ನವದೆಹಲಿ: ಐವರ ಗುಂಪಿನಿಂದ ಅತ್ಯಾಚಾರಕ್ಕೊಳಗಾದ ಕಾಲ್ ಸೆಂಟರ್ ಉದ್ಯೋಗಿ ಯುವತಿ ಆರೋಪಿಗಳಲ್ಲಿ ಇಬ್ಬರನ್ನು ತಿಹಾರ್ ಜೈಲಿನಲ್ಲಿ ನಡೆಸಲಾದ ಪೆರೇಡ್ನಲ್ಲಿ ಗುರುತಿಸಿದ್ದಾಳೆ. ನವೆಂಬರ್ 24ರಂದು ದೆಹಲಿಯಲ್ಲಿ ಈ ಅತ್ಯಾಚಾರ ನಡೆದಿತ್ತು. ಪತ್ತೆಯಾಗಿರುವ ಇಬ್ಬರು ಆರೋಪಿಗಳನ್ನು ಶಂಶದ್ ಮತ್ತು ಉಸ್ಮಾನ್ ಎಂದು ಗುರುತಿಸಲಾಗಿದೆ.