ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತ ವಿರೋಧಿ ಉಗ್ರರ ವಿರುದ್ಧ ಕ್ರಮಕ್ಕೆ ಚೀನಾ ಅಡ್ಡಗಾಲು (China | Hafiz Saeed | Pakistan | Mumbai attacks)
Bookmark and Share Feedback Print
 
ಭಾರತದ ವಿರುದ್ಧ ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿರುವ ಜಮಾತ್ ಉದ್ ದಾವಾ ಮತ್ತು ಅದರ ಮುಖಂಡ ಹಫೀಜ್ ಸಯೀದ್ ಮೇಲೆ ನಿರ್ಬಂಧ ಹೇರುವ ಯತ್ನಗಳನ್ನು ಚೀನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಡೆ ಹಿಡಿದಿತ್ತು ಎಂದು ವಿಕಿಲೀಕ್ಸ್ ಬಹಿರಂಗಪಡಿಸಿರುವ ಅಮೆರಿಕಾ ರಾಯಭಾರಿಗಳ ರಹಸ್ಯ ದಾಖಲೆಗಳಿಂದ ತಿಳಿದು ಬಂದಿದೆ.
PR

ವಿಶ್ವಸಂಸ್ಥೆ ಹೇರಿರುವ ನಿರ್ಬಂಧಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸರಕಾರವು ಜಮಾತ್ ಉದ್ ದಾವಾದ ಖಾತೆಗಳನ್ನು ಸ್ಥಗಿತಗೊಳಿಸುವ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟತೆಯಿಲ್ಲ. ದಾವಾ ಎಂದಿನಂತೆ ಕಾರ್ಯಾಚರಿಸುತ್ತಿದ್ದು, ಹಣ ಸಂಗ್ರಹದಲ್ಲಿ ತೊಡಗಿದೆ ಎಂದು ಹೇಳಿರುವ ಅಮೆರಿಕಾದ ವಿದೇಶಾಂಗ ಇಲಾಖೆಯ ಹಿಲರಿ ಕ್ಲಿಂಟನ್ ಸಹಿ ಹಾಕಿರುವ ದಾಖಲೆ ಹೇಳುತ್ತಿದೆ ಎಂದು ವಿಕಿಲೀಕ್ಸ್ ತಿಳಿಸಿದೆ.

'ಮುಂಬೈ ದಾಳಿಗೂ ಮೊದಲು, ಜಮಾತ್ ಉದ್ ದಾವಾ ಮತ್ತು ಅದರ ಮುಖ್ಯಸ್ಥ ಹಫೀಜ್ ಮುಹಮ್ಮದ್ ಸಯೀದ್‌ರನ್ನು ನಿರ್ಬಂಧ ಪಟ್ಟಿಯಲ್ಲಿ ಸೇರಿಸುವಂತೆ ನಾವು ಮಾಡಿದ್ದ ಮನವಿಯನ್ನು ಪಾಕಿಸ್ತಾನದ ಪರವಾಗಿ ಚೀನಾ ತಡೆ ಹಿಡಿದಿತ್ತು' ಎಂದು ರಹಸ್ಯ ಎಂದು ಗುರುತಿಸಲ್ಪಟ್ಟಿರುವ, ಅಮೆರಿಕಾದ ವಿದೇಶಾಂಗ ಇಲಾಖೆಯು ಇಸ್ಲಾಮಾಬಾದ್‌ನಲ್ಲಿನ ಅಮೆರಿಕಾ ರಾಯಭಾರ ಕಚೇರಿ ಮತ್ತು ವಿಶ್ವಸಂಸ್ಥೆಯಲ್ಲಿನ ಅಮೆರಿಕಾ ಖಾಯಂ ಸಮಿತಿಗೆ 2009ರ ಆಗಸ್ಟ್ 10ರಂದು ರವಾನಿಸಿರುವ ದಾಖಲೆ ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯನಾಗಿರುವ ಚೀನಾವು ಯಾವುದೇ ಕ್ರಮವನ್ನು ತಡೆ ಹಿಡಿಯುವ ವಿಟೋ ಅಧಿಕಾರವನ್ನು ಹೊಂದಿದೆ. ಅದರಂತೆ ವಿಶ್ವಸಂಸ್ಥೆಯ 15 ಸದಸ್ಯರ ಉನ್ನತಾಧಿಕಾರ ಸಮಿತಿಯು ಚೀನಾದ ಸಮ್ಮತಿಯಿಲ್ಲದೆ ಯಾವುದೇ ಕ್ರಮವನ್ನು ಕೈಗೊಳ್ಳುವಂತಿಲ್ಲ.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಬಂಧಗಳ ಪಟ್ಟಿಯಲ್ಲಿನ ಅಲ್‌ಖೈದಾ ಮತ್ತು ತಾಲಿಬಾನ್ ಸಾಲಿನಿಂದ ಜಮಾತ್ ಉದ್ ದಾವಾ ಮತ್ತು ಸಯೀದ್‌ರನ್ನು ತೆಗೆದು ಹಾಕುವ ಯಾವುದೇ ಪ್ರಸ್ತಾಪವನ್ನು ಅಮೆರಿಕಾ ವಿರೋಧಿಸುತ್ತದೆ ಎಂದು ಪಾಕಿಸ್ತಾನದ ಅಧಿಕಾರಿಗಳಿಗೆ ಅಮೆರಿಕಾ ಹೇಳಿತ್ತು. ಅಲ್ಲದೆ ಜಮಾತ್ ಮತ್ತು ಸಯೀದ್ ತಮ್ಮ ಕಾರ್ಯ ಚಟುವಟಿಕೆಗಳನ್ನು ಪಾಕಿಸ್ತಾನದೊಳಗೆ ಮುಂದುವರಿಸುತ್ತಿರುವುದರ ಕುರಿತು ಕೂಡ ಪಾಕಿಸ್ತಾನಕ್ಕೆ ರಾಜಕೀಯ ನಡೆಯ ಮೂಲಕ ತಿಳಿಸಿತ್ತು.

2008ರ ನವೆಂಬರ್ 26ರಂದು ನಡೆದಿದ್ದ ಮುಂಬೈ ದಾಳಿಯ ಹಿಂದೆ ಜಮಾತ್ ಉದ್ ದಾವಾ ಮತ್ತು ಹಫೀಜ್ ಸಯೀದ್ ಸಕ್ರಿಯ ಪಾತ್ರ ವಹಿಸಿದ್ದರು. ಅದಕ್ಕೂ ಮೊದಲು ಪಾಕಿಸ್ತಾನದ ಪರವಾಗಿ ಚೀನಾವು ವಿಶ್ವಸಂಸ್ಥೆಯಲ್ಲಿ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿತ್ತು ಎನ್ನುವುದು ವಿಕಿಲೀಕ್ಸ್ ದಾಖಲೆಯ ಸಾರಾಂಶ.
ಸಂಬಂಧಿತ ಮಾಹಿತಿ ಹುಡುಕಿ