ಕೀನ್ಯಾ ಪ್ರಜೆ ಸೆರೆ
ಬೆಂಗಳೂರು: 13 ಲಕ್ಷ ರೂಪಾಯಿ ಮೌಲ್ಯದ ಕೊಕೇನ್ ಹೊಂದಿದ್ದ ಕೀನ್ಯಾ ಪ್ರಜೆಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿ ವಿಸಾದೊಂದಿಗೆ ಭಾರತಕ್ಕೆ ಬಂದಿದ್ದ ಆರೋಪಿ ಫ್ರೆಡ್ರಿಕ್ ಒಟಿನೊ ಅರುಮ್, ಔರಂಗಾಬಾದಿನಲ್ಲಿ ಪದವಿ ವಿದ್ಯಾಭ್ಯಾಸ ಮುಗಿಸಿದ್ದ. ಬಾಣಸವಾಡಿಯಲ್ಲಿ 107 ಗ್ರಾಂ ಕೊಕೇನ್ ಜತೆ ಆತನನ್ನು ಬಂಧಿಸಲಾಗಿದೆ.