ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿದೇಶಿ ಸಂಪಾದನೆ ಮಾಡೋದ್ರಲ್ಲಿ ಭಾರತೀಯರೇ ಮುಂದೆ! (India | Emigrants | World Bank | Pakistan)
Bookmark and Share Feedback Print
 
ವಿದೇಶಗಳಿಂದ ತಾಯ್ನಾಡಿಗೆ ಹಣ ಕಳುಹಿಸುವ ವಿಚಾರದಲ್ಲಿ ಭಾರತೀಯರೇ ಮತ್ತೆ ಪಾರಮ್ಯ ಸಾಧಿಸಿದ್ದಾರೆ. 2009ರಲ್ಲಿ 49.6 ಬಿಲಿಯನ್ ಡಾಲರ್ ಹಣವನ್ನು ಕಳುಹಿಸಿದ್ದ ದಾಖಲೆ ಮಾಡಿದ್ದ ವಿದೇಶಗಳಲ್ಲಿರುವ ಭಾರತೀಯರು, 2010ರಲ್ಲಿ ಇದನ್ನು 55 ಬಿಲಿಯನ್ ಡಾಲರುಗಳಿಗೆ ಹೆಚ್ಚಿಸಿದ್ದಾರೆ.

ಜತೆಗೆ ಮೆಕ್ಸಿಕೋ ನಂತರ ಅತಿ ಹೆಚ್ಚು ಮಂದಿ ವಿದೇಶಕ್ಕೆ ವಲಸೆ ಹೋಗಿರುವವರ ಪಟ್ಟಿಯಲ್ಲೂ ಭಾರತ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯನ್ನು ಬಿಡುಗಡೆ ಮಾಡಿರುವುದು ವಿಶ್ವಬ್ಯಾಂಕ್‌ನ ವಲಸೆ ಮತ್ತು ಮರುಪಾವತಿ ವಾಸ್ತವ ಚಿತ್ರಣ-2011 ವರದಿಯಲ್ಲಿ.

ಆಸಕ್ತಿದಾಯಕ ವಿಚಾರವೆಂದರೆ 1.14 ಕೋಟಿ ಭಾರತೀಯರು ವಿದೇಶಕ್ಕೆ ಹೋಗಿರುವುದು ಮತ್ತು 54 ಲಕ್ಷ ಮಂದಿ ಭಾರತಕ್ಕೆ ಬಂದಿರುವುದು. ಆ ಮೂಲಕ ವಲಸಿಗರನ್ನು ಬಹುವಾಗಿ ಆಕರ್ಷಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ. ಆದರೆ ಏಷಿಯಾವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರೆ, ನಂ.2. ಮೊದಲ ಸ್ಥಾನ ಸೌದಿ ಅರೇಬಿಯಾ ಪಾಲಾಗಿದೆ.

ಭಾರತ (55 ಬಿಲಿಯನ್ ಡಾಲರ್) ಮತ್ತು ಚೀನಾಗಳು 51 ಬಿಲಿಯನ್ ಡಾಲರ್ ಹಣವನ್ನು (ಒಟ್ಟು 106 ಬಿಲಿಯನ್ ಡಾಲರ್) ವಿದೇಶದಲ್ಲಿನ ತಮ್ಮ ಪ್ರಜೆಗಳಿಂದ ಪಡೆದುಕೊಂಡಿವೆ. 2010ರಲ್ಲಿ ಒಟ್ಟಾರೆ ಈ ರೀತಿಯಾಗಿ ದೇಶದಿಂದ ದೇಶಕ್ಕೆ ತಮ್ಮ ಪ್ರಜೆಗಳ ಸಂಪಾದನೆಯ ಹಣ ವರ್ಗಾವಣೆಯಾಗಿರುವುದು 440 ಬಿಲಿಯನ್ ಡಾಲರ್. ಅಂದರೆ ಸರಿಸುಮಾರು ನಾಲ್ಕನೇ ಒಂದು ಭಾಗವನ್ನು ಇವೆರಡೇ ದೇಶಗಳು ಪಡೆದಿವೆ.

ಇಲ್ಲಿ 11ನೇ ಸ್ಥಾನದಲ್ಲಿರುವ ಪಾಕಿಸ್ತಾನವು ವಿದೇಶಗಳಲ್ಲಿರುವ ತನ್ನ ಪ್ರಜೆಗಳಿಂದ 9.4 ಬಿಲಿಯನ್ ಡಾಲರ್ ಹಣವನ್ನು ಸ್ವೀಕರಿಸಿದೆ.

ಅತಿ ಹೆಚ್ಚು ಹಣವನ್ನು ತನ್ನ ದೇಶದಿಂದ ವಿದೇಶಗಳಿಗೆ ಕಳುಹಿಸಿರುವ ಪಟ್ಟಿಯಲ್ಲಿ ದೊಡ್ಡಣ್ಣ ಅಮೆರಿಕಾವೇ ಅಗ್ರ. ಈ ದೇಶ 48.3 ಬಿಲಿಯನ್ ಡಾಲರ್ ಹಣವನ್ನು ಇತರ ದೇಶಗಳಿಗೆ ಕಳುಹಿಸಿದೆ. ನಂತರದ ಸ್ಥಾನ ಸೌದಿ ಅರೇಬಿಯಾದ್ದು. ಅದು 26 ಬಿಲಿಯನ್ ಡಾಲರ್ ಹಣವನ್ನು ವಿದೇಶಿ ಪ್ರಜೆಗಳ ಮೂಲಕ ರವಾನಿಸಿದೆ.

ಈ ಪಟ್ಟಿಯಲ್ಲಿ ಭಾರತ ತುಂಬಾ ಹಿಂದಿದೆ. ಭಾರತಕ್ಕೆ ಬಂದು ಇಲ್ಲಿಂದ ಸಂಪಾದನೆ ಮಾಡಿಕೊಂಡು ತಮ್ಮ ದೇಶಕ್ಕೆ ಕೊಂಡೊಯ್ದ ಒಟ್ಟು ಹಣ 2010ರಲ್ಲಿ ಕೇವಲ 4 ಬಿಲಿಯನ್ ಡಾಲರ್. ಚೀನಾ ನಮಗಿಂತ ಕೊಂಚವಷ್ಟೇ (4.4 ಬಿಲಿಯನ್ ಡಾಲರ್) ಮುಂದಿದೆ.
ಸಂಬಂಧಿತ ಮಾಹಿತಿ ಹುಡುಕಿ