ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಷ್ಟೆಲ್ಲ ನುಂಗಲು ರಾಜಾ ಬಕಾಸುರನೇ?: ಕರುಣಾ ಪ್ರಶ್ನೆ (2G spectrum scam | DMK | M Karunanidhi | A Raja)
Bookmark and Share Feedback Print
 
ಕೇಂದ್ರ ದೂರಸಂಪರ್ಕ ಮಾಜಿ ಸಚಿವ ಎ. ರಾಜಾ 1.76 ಲಕ್ಷ ಕೋಟಿ ರೂಪಾಯಿಗಳನ್ನು ನುಂಗಿದ್ದಾರೆ ಎಂಬ ಆರೋಪಗಳನ್ನು ತಳ್ಳಿ ಹಾಕುತ್ತಾ ತನ್ನ ಸಂಸದನನ್ನು ಸಮರ್ಥಿಸಿಕೊಂಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ಬಕಾಸುರನ ಕುರಿತು ಇರುವ ಕಟ್ಟುಕತೆಗಳನ್ನು ಇದಕ್ಕೆ ಉದಾಹರಿಸಿಸುತ್ತಾ 'ಇದನ್ನೆಲ್ಲ ಜನ ಹೇಗೆ ನಂಬುತ್ತಾರೆ' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಒಬ್ಬನೇ ವ್ಯಕ್ತಿ ಬರೋಬ್ಬರಿ 1.76 ಲಕ್ಷ ಕೋಟಿ ರೂಪಾಯಿ ಸಾರ್ವಜನಿಕರ ಹಣವನ್ನು ತರಂಗಾಂತರ ಹಗರಣದಲ್ಲಿ ನುಂಗಿ ಹಾಕಿದ್ದಾನೆ ಎಂಬುದನ್ನು ಇಂದಿನ ವಿದ್ಯಾವಂತರೂ ನಂಬಲು ಸಿದ್ಧವಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿತ್ತಾ, ಇದು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದರು.
PTI

ತನ್ನ ತವರು ನಗರ ತಿರುವಾರೂರಿನಲ್ಲಿ ಮೂಕಿ ಚಿತ್ರಗಳನ್ನು ನೋಡುವ ದಿನಗಳನ್ನು ಮೆಲುಕು ಹಾಕುತ್ತಾ, ಹಗರಣವೇ ಕಾಲ್ಪನಿಕ ಎಂಬಂತೆ ಈ ಸಂದರ್ಭದಲ್ಲಿ ಬಕಾಸುರನ ಕಥೆಯನ್ನೂ ವರ್ಣಿಸಿದ್ದಾರೆ.

ಬಕಾಸುರನಿಗೆ 30,000 ಮೈಲು ವಿಸ್ತಾರದ ಬಾಯಿ ಇದೆ ಎಂದು ನಿರೂಪಕ ಹೇಳುವುದನ್ನು ಸುಲಭವಾಗಿ ನಂಬಿ ಬಿಡುತ್ತಿದ್ದ ಅಂದಿನ ಜನರಿಗೆ ಇಂದು ರಾಜಾ ವಿರುದ್ಧದ ಆರೋಪಗಳನ್ನು ನಂಬುತ್ತಿರುವವರನ್ನು ಹೋಲಿಸಿದರು. ಒಬ್ಬನೇ ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ನುಂಗಿ ನೀರು ಕುಡಿಯಲು ಹೇಗೆ ಸಾಧ್ಯವಿದೆ ಎಂದು ಪ್ರಶ್ನಿಸಿದರು.

ಅಂದಿನ ದಿನಗಳಲ್ಲಿ ಬಕಾಸುರನ ಬಗೆಗಿನ ಕಟ್ಟುಕತೆಗಳನ್ನೊಳಗೊಂಡ ಚಿತ್ರಗಳನ್ನು ಯಾವುದೇ ಪ್ರಶ್ನೆ ಮಾಡದೆ ನೋಡಿದವರಲ್ಲಿ ನಾನೂ ಒಬ್ಬ. ಇದು ಕಲ್ಪನಾಲೋಕದ ವಿಹಾರ. ರಜನಿಕಾಂತ್ ತನ್ನ ರೊಬೊಟ್ ಚಿತ್ರದಲ್ಲಿ ಮಾಡಿದ ಪಾತ್ರದಂತಹ ಕಲ್ಪನೆಗಳಿವು. ಒಬ್ಬ ವ್ಯಕ್ತಿ ಇಷ್ಟೊಂದು ದೊಡ್ಡ ಪ್ರಮಾಣದ ಹಗರಣವನ್ನು ಮಾಡಲು ಸಾಧ್ಯವಿಲ್ಲ ಎನ್ನುವ ವಾಸ್ತವತೆಯನ್ನು ನಾವು ನೋಡಬೇಕು ಎಂದರು.

ತರಂಗಾಂತರ ಹಂಚಿಕೆಯಲ್ಲಿ ನಡೆದಿದೆ ಎಂದು ಹೇಳಲಾಗಿರುವ ಅವ್ಯವಹಾರಗಳ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ಪೂರ್ತಿಗೊಳ್ಳದ ಹೊರತು ಯಾರೊಬ್ಬರೂ ಅಂತಿಮ ನಿರ್ಣಯಕ್ಕೆ ಬರಲಾಗದು ಎಂದು ಮಾಧ್ಯಮದ ಒಂದು ವಿಭಾಗವು ಮಾಡಿರುವ ವರದಿಗಳನ್ನು ಕೂಡ ಅವರು ಉಲ್ಲೇಖಿಸಿದ್ದಾರೆ.

ಸತತವಾಗಿ ಇಂತಹ ಆರೋಪಗಳನ್ನು ಮಾಡಿ ಯಾರೊಬ್ಬರನ್ನೂ ಅಪರಾಧಿ ಎಂದು ಮಾಡಲಾಗದು. ಇದರ ಕುರಿತು ಸೂಕ್ತ ತನಿಖೆ ನಡೆಯಬೇಕು. ಸುಳ್ಳನ್ನು ನೂರು ಬಾರಿ ಹೇಳಿದ ಕೂಡಲೇ ಅದು ಸತ್ಯವಾಗುವುದಿಲ್ಲ. ಇಲ್ಲಿ ಮಾಧ್ಯಮಗಳ ಒಂದು ಗುಂಪು ಮತ್ತು ವಿರೋಧ ಪಕ್ಷಗಳು ವ್ಯವಸ್ಥಿತ ಪಿತೂರಿ ನಡೆಸುತ್ತಿವೆ. ಇದು ನಿಲ್ಲಬೇಕು ಎಂದು ಕರುಣಾನಿಧಿ ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ