ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಮೆರಿಕಾ ಮೂಲ ಸೌಕರ್ಯ ಪಟ್ಟಿಯಲ್ಲಿ ಕರ್ನಾಟಕದ ಗಣಿ! (Orissa | Karnataka | Gujarat | America)
Bookmark and Share Feedback Print
 
ಜಾಗತಿಕ ಮೂಲ ಸೌಕರ್ಯಗಳಿಗೆ ಅಗತ್ಯವಿರುವ ವಿಚಾರಗಳಲ್ಲಿ ಕರ್ನಾಟಕ ಮತ್ತು ಒರಿಸ್ಸಾಗಳಲ್ಲಿರುವ ಎರಡು ಕ್ರೋಮೈಟ್ ಗಣಿಗಳು ಹಾಗೂ ಗುಜರಾತಿನಲ್ಲಿರುವ ಕಿಮೋಥೆರಪಿ ಔಷಧಿ ತಯಾರಿಕಾ ಕಂಪನಿ ಪ್ರಮುಖವಾದುದು. ಒಂದು ವೇಳೆ ಇವುಗಳ ಮೇಲೆ ಭಯೋತ್ಪಾದಕರೇನಾದರೂ ದಾಳಿ ಮಾಡಿದಲ್ಲಿ, ಅದರಿಂದ ಅಮೆರಿಕಾದ ರಾಷ್ಟ್ರೀಯ ಭದ್ರತೆ ಅಪಾಯಕ್ಕೆ ಸಿಲುಕಬಹುದು ಎಂದು ವಿಕಿಲೀಕ್ಸ್ ರಹಸ್ಯ ದಾಖಲೆಗಳು ಹೇಳಿವೆ.

ಉಗ್ರರ ದಾಳಿಯಿಂದ ರಕ್ಷಿಸಬೇಕಾದ, ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ಅನುಗುಣವಾಗಿರುವ ಜಾಗತಿಕ ಮೂಲ ಸೌಕರ್ಯಗಳ ಪ್ರಮುಖ ಅಂಶಗಳ ಪಟ್ಟಿಯನ್ನು ನೀಡುವಂತೆ 2009ರ ಫೆಬ್ರವರಿ 18ರಂದು ಅಮೆರಿಕಾದ ವಿದೇಶಾಂಗ ಇಲಾಖೆಯು ತನ್ನ ವಿಶ್ವದಾದ್ಯಂತದ ರಾಯಭಾರಿಗಳಿಗೆ ಸೂಚಿಸಿತ್ತು.

ಒರಿಸ್ಸಾ ಮತ್ತು ಕರ್ನಾಟಕದ ಕ್ರೋಮೈಟ್ ಗಣಿಗಳು (ಹಾಸನ ಜಿಲ್ಲೆಯ ತಗಡೂರು ಕ್ರೋಮೈಟ್ ಗಣಿ) ಹಾಗೂ ಕ್ಯಾನ್ಸರ್ ವಿರುದ್ಧ ಕಿಮೋಥೆರಪಿ ಚಿಕಿತ್ಸೆಯಲ್ಲಿ ಬಳಸುವ ಔಷಧಿ ತಯಾರಿಸುವ ಗುಜರಾತಿನ 'ಜೆನೆರಾಮೆಡಿಕ್ಸ್' (Generamedix) ಎಂಬ ಕಂಪನಿ -- ಇವುಗಳು ಅಮೆರಿಕಾದ ಹಿತಾಸಕ್ತಿ ಹೊಂದಿರುವ ಭಾರತದ ಮೂರು ಮೂಲಭೂತ ಅಂಶಗಳು.

ವಿದೇಶಗಳಲ್ಲಿನ ಇಂತಹ ಮೂಲ ಸೌಕರ್ಯಗಳನ್ನು ನಾವು ಯಾವುದೇ ಕಾರಣದಿಂದ ಕಳೆದುಕೊಂಡರೂ, ಭಾರೀ ತೊಂದರೆಗೀಡಾಗ ಬೇಕಾಗುತ್ತದೆ. ಪ್ರಮುಖವಾಗಿ ಅಮೆರಿಕಾದ ಸಾರ್ವಜನಿಕ ಆರೋಗ್ಯ, ಆರ್ಥಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಗಳು ದುಷ್ಪರಿಣಾಮಕ್ಕೊಳಗಾಗುತ್ತವೆ ಎಂದು ಅಮೆರಿಕಾದ ರಹಸ್ಯ ದಾಖಲೆ ಹೇಳಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಭಕ್ತರಹಳ್ಳಿ ಮತ್ತು ತಗಡೂರಿನಲ್ಲಿ ಕ್ರೋಮೈಟ್ ಗಣಿಗಾರಿಕೆ ನಡೆಯುತ್ತಿದ್ದು, ಸರಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್ (MML) ಇದರ ಗುತ್ತಿಗೆ ಹೊಂದಿದೆ ಎಂದು ಭೂ ವಿಜ್ಞಾನಿಗಳು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ವಿಕಿಲೀಕ್ಸ್ ಮೂಲಕ ಈ ಮೂಲ ಸೌಕರ್ಯಗಳು ಜಗತ್ತಿಗೆ ಬಹಿರಂಗಗೊಂಡಿರುವುದರಿಂದ, ಇವುಗಳನ್ನು ಭಯೋತ್ಪಾದಕರು ಗುರಿ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ