ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎನ್‌ಡಿಎ ಅಧಿಕಾರಾವಧಿ ಸಿಬಿಐ ತನಿಖೆಗೆ ಸುಪ್ರೀಂ ಸೂಚನೆ (2G spectrum case | Supreme Court | CBI | NDA)
Bookmark and Share Feedback Print
 
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 2ಜಿ ತರಂಗಾಂತರ ಹಂಚಿಕೆಯಲ್ಲಿ ಏನಾಗಿತ್ತು ಎಂಬುದನ್ನು ತನಿಖೆ ನಡೆಸಬೇಕು ಎಂದು ಸಿಬಿಐಗೆ ಸುಪ್ರೀಂ ಕೋರ್ಟ್ ಸೂಚನೆ ನೀಡುವುದರೊಂದಿಗೆ ಹಗರಣ ವಿಸ್ತೃತ ರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪ ಹೊತ್ತು ದೂರಸಂಪರ್ಕ ಸಚಿವ ಸ್ಥಾನಕ್ಕೆ ಎ. ರಾಜಾ ರಾಜೀನಾಮೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ. ಪ್ರಸಕ್ತ ಸಿಬಿಐ ಈ ಕುರಿತು ತನಿಖೆ ನಡೆಸುತ್ತಿದೆ.

2ಜಿ ಹಗರಣದ ಒಟ್ಟು ಮೌಲ್ಯ ಕೇವಲ 1.76 ಲಕ್ಷ ರೂಪಾಯಿಗಳಿಗೆ ಸೀಮಿತವಲ್ಲ. ಅದಕ್ಕಿಂತಲೂ ವಿಶಾಲವಾದ ಆಗರ ಅಲ್ಲಿರಬಹುದು. ತನಿಖೆಯ ಕುರಿತು ಪೂರ್ವಗ್ರಹ ಪೀಡಿತರಾಗಲು ನಾವು ಇಷ್ಟಪಡುವುದಿಲ್ಲ. ಆದರೆ 2001ರಲ್ಲಿ ಏನು ನಡೆದಿದೆ ಎಂಬುದನ್ನು ತನಿಖೆ ನಡೆಸಬೇಕು. ಇದನ್ನು ಸಿಬಿಐ ತನಿಖೆ ನಡೆಸಿ, ಪತ್ತೆ ಹಚ್ಚಬೇಕು ಎಂದು ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿಯವರನ್ನೊಳಗೊಂಡ ಪೀಠವು ಬುಧವಾರ ಆದೇಶ ನೀಡಿದೆ.

2001ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ದಿವಂಗತ ಪ್ರಮೋದ್ ಮಹಾಜನ್ ಮತ್ತು ಅರುಣ್ ಶೌರಿಯವರು ದೂರಸಂಪರ್ಕ ಖಾತೆಯನ್ನು ನಿಭಾಯಿಸಿದ್ದರು. ಯುಪಿಎ ಮೊದಲ ಅವಧಿಯಲ್ಲಿ ದಯಾನಿಧಿ ಮಾರನ್‌ ನಿರ್ವಹಿಸಿದ್ದರು.

ಎನ್‌ಡಿಎ ಸರಕಾರದ ಅವಧಿಯಲ್ಲಿ 65.2 ಮೆಗಾಹರ್ಟ್ಸ್ ತರಂಗಾಂತರವನ್ನು ಹರಾಜು ನಡೆಸದೆ ಹಂಚಿಕೆ ಮಾಡಲಾಗಿತ್ತು ಎಂದು ಕಾಂಗ್ರೆಸ್ ಈ ಹಿಂದೆ ಆರೋಪಿಸಿತ್ತು. ಅಲ್ಲದೆ, ಈ ಹಿಂದಿನ ಸಚಿವರುಗಳು ಪಾಲಿಸಿದ್ದ ನೀತಿಯನ್ನಷ್ಟೇ ರಾಜಾ ಕೂಡ ಪಾಲಿಸಿದ್ದಾರೆ ಎಂದು ಅಕ್ರಮವನ್ನು ಸಮರ್ಥಿಸಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಪ್ರಸಕ್ತ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆ ಮಹತ್ವ ಪಡೆದುಕೊಂಡಿದೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ತರಂಗಾಂತರ ಹರಾಜು ನಡೆಯುವ ಬದಲು 'ಮೊದಲು ಬಂದವರಿಗೆ ಆದ್ಯತೆ' ಎಂಬ ರೀತಿಯಲ್ಲಿ ಹಂಚಿಕೆ ಮಾಡಲಾಗಿತ್ತು. ಆದರೆ ಅದು ಮೊಬೈಲ್ ತಂತ್ರಜ್ಞಾನವು ಭಾರತವನ್ನು ಪ್ರವೇಶಿಸಿದ ಆರಂಭಿಕ ಹೊತ್ತು. ಅದನ್ನೇ ಮುಂದಿಟ್ಟುಕೊಂಡಿದ್ದ ರಾಜಾ, 2008ರಲ್ಲೂ ಹರಾಜು ನಡೆಸದೆ ಆದ್ಯತೆ ಮೇರೆಗೆ ಹಂಚಿದ್ದರು.

2ಜಿ ಹಗರಣದ ಜೆಪಿಸಿ ತನಿಖೆಗೆ ಒತ್ತಾಯಿಸಿ ಬಿಜೆಪಿ ಮುಂತಾದ ಪಕ್ಷಗಳು ಸಂಸತ್ ಕಲಾಪಕ್ಕೆ ಅವಕಾಶ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಎನ್‌ಡಿಎ ಅವಧಿಯಲ್ಲಿ ನಡೆದಿರುವ ಬೆಳವಣಿಗೆಗಳನ್ನು ಸಿಬಿಐ ತನಿಖೆ ನಡೆಸುವಂತೆ ನ್ಯಾಯಾಲಯ ಸೂಚಿಸಿರುವುದು ಆಡಳಿತ ಪಕ್ಷ ಕಾಂಗ್ರೆಸ್‌ಗೆ ಆನೆಬಲ ಬಂದಂತಾಗಿದೆ. ಸಂಸತ್ ಮತ್ತು ಹೊರಗಡೆ ಎನ್‌ಡಿಎ ವಿರುದ್ಧ ಕಾಂಗ್ರೆಸ್ ಪ್ರತಿ ಹೋರಾಟ ನಡೆಸುವ ಸಾಧ್ಯತೆಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ