ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಟ್ಕಾ ದೊರೆಗಳಿಗೆ ದಾವೂದ್ ಲಿಂಕ್; ಹೈಕೋರ್ಟ್ ಗರಂ (Gutkha barons | Bombay High Court | Rasiklal Manikchand Dhariwal | Dawood Ibrahim)
Bookmark and Share Feedback Print
 
ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಅಕ್ರಮವಾಗಿ ಗುಟ್ಕಾ ತಯಾರಿಕಾ ಯಂತ್ರಗಳನ್ನು ದುಬೈ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಿರುವ ರಸಿಕಲಾಲ್ ಮಾಣಿಕ್‌ಚಂದ್ ಧರಿವಾಲ್ ಮತ್ತು ಜಗದೀಶ್ ಜೋಶಿ ಎಂಬ ಗುಟ್ಕಾ ದೊರೆಗಳ ವಿರುದ್ಧ ಹೈಕೋರ್ಟ್ ಕೆಂಗಣ್ಣು ಬೀರಿದ್ದು, ಶರಣಾಗುವಂತೆ ಸೂಚಿಸಿದೆ.

ಕರಾಚಿಯಲ್ಲಿ ನೆಲೆಸಿರುವ ಭೂಗತ ಪಾತಕಿ ದಾವೂದ್‌ ಗುಟ್ಕಾ ಉದ್ಯಮವನ್ನು ಪಾಕಿಸ್ತಾನದಲ್ಲಿ ಸ್ಥಾಪಿಸುವ ಉದ್ದೇಶ ಹೊಂದಿದ್ದ. ಅದಕ್ಕಾಗಿ ಮಾಣಿಕ್‌ಚಂದ್ ಮತ್ತು ಜೋಶಿಯವರು ಭಾರತದಿಂದ ದುಬೈ ಮೂಲಕ ಪಾಕಿಸ್ತಾನಕ್ಕೆ ಗುಟ್ಕಾ ಯಂತ್ರಗಳನ್ನು ರವಾನಿಸಿದ್ದರು ಎಂದು ಆರೋಪಿಸಲಾಗಿತ್ತು.
PR

ಇವರಿಬ್ಬರ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ಅಡಿಯಲ್ಲಿ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಕೋರ್ಟ್ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.

ಇದರ ಪೂರ್ವ ಸೂಚನೆ ಅರಿತಿದ್ದ ಮಾಣಿಕ್‌ಚಂದ್ ಮತ್ತು ಜೋಶಿ ವಿದೇಶಕ್ಕೆ ಹೋಗಿದ್ದರು. ಪ್ರಸಕ್ತ ಇಬ್ಬರೂ ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. 2004ರ ನಂತರ ಅವರು ಭಾರತಕ್ಕೆ ಬಂದಿಲ್ಲ.

ತಮ್ಮ ವಿರುದ್ಧ ಮೋಕಾ ಅಡಿಯಲ್ಲಿ ದಾಖಲಿಸಿರುವ ಪ್ರಕರಣವನ್ನು ಪ್ರಶ್ನಿಸಿದ್ದ ಈ ಇಬ್ಬರು ಆರೋಪಿಗಳ ಪರ ವಕೀಲರು, ಜಾಮೀನು ರಹಿತ ವಾರೆಂಟ್ ರದ್ದುಪಡಿಸಬೇಕು ಎಂದು ವಾದಿಸಿದ್ದರು. ಆದರೆ ಇದನ್ನು ಬಾಂಬೆ ಹೈಕೋರ್ಟ್ ತಳ್ಳಿ ಹಾಕಿದೆ. ಆರೋಪಿಗಳು ಶರಣಾಗಬೇಕು ಎಂದು ಸೂಚಿಸಿದೆ.

ಆದರೂ ಮಾಣಿಕ್‌ಚಂದ್ ಮತ್ತು ಜೋಶಿಯವರು ಶರಣಾಗಲು ನ್ಯಾಯಾಲಯ ಅವಕಾಶ ನೀಡಿದೆ. ಮೋಕಾ ನ್ಯಾಯಾಲಯವು ನೀಡಿರುವ ಜಾಮೀನು ರಹಿತ ವಾರೆಂಟಿಗೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿದೆ. ಈ ಅವಧಿಯಲ್ಲಿ ಆರೋಪಿಗಳು ಪೊಲೀಸರಿಂದ ನೇರವಾಗಿ ಬಂಧನಕ್ಕೊಳಗಾಗುವ ಬದಲು ಶರಣಾಗಬಹುದು ಎಂದಿದೆ.

ದಾವೂದ್ ಗ್ಯಾಂಗಿನ ಸದಸ್ಯ ರಾಜೇಶ್ ಪಂಚಾರಿಯಾ ಎಂಬಾತ ಪೊಲೀಸರ ಬಲೆಗೆ ಬಿದ್ದ ನಂತರ ಮಾಣಿಕ್‌ಚಂದ್ ಮತ್ತು ಜೋಶಿ ಹೆಸರುಗಳು ಹೊರ ಬಿದ್ದಿದ್ದವು. ಪಾತಕಿಗೆ ಗುಟ್ಕಾ ಯಂತ್ರಗಳನ್ನು ಕಳುಹಿಸಿದ್ದು ಭಾರತದ ಗುಟ್ಕಾ ದೊರೆಗಳು ಎಂದು ರಾಜೇಶ್ ಹೇಳಿದ್ದ.
ಸಂಬಂಧಿತ ಮಾಹಿತಿ ಹುಡುಕಿ