ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಳಬರ ಚಿಂತೆ ಬಿಡಿ, ಯುವಕರು ರಾಜಕೀಯಕ್ಕೆ ಬನ್ನಿ: ರಾಹುಲ್ (Congress | Rahul Gandhi | politics | Cuttack)
Bookmark and Share Feedback Print
 
ಪ್ರಸಕ್ತ ರಾಜಕೀಯದಲ್ಲಿರುವ ಹಳೆ ಹುಲಿಗಳ ಕುರಿತ ಯೋಚನೆಯನ್ನು ಬದಿಗಿಟ್ಟು, ಯುವ ಜನತೆ ದೊಡ್ಡ ಸಂಖ್ಯೆಯಲ್ಲಿ ರಾಜಕೀಯಕ್ಕೆ ಧುಮುಕಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ವಯಸ್ಸಾದ ರಾಜಕಾರಣಿಗಳು ರಾಜಕಾರಣದಲ್ಲಿದ್ದಾಗ ನಮಗೆಲ್ಲಿದೆ ಅವಕಾಶ ಎಂದು ನೀವು ಯೋಚಿಸಬೇಡಿ. ಯುವಜನತೆಗೆ ಬಾಗಿಲು ಯಾವತ್ತೂ ತೆರೆದಿರುತ್ತದೆ. ದೊಡ್ಡ ಸಂಖ್ಯೆಯಲ್ಲಿ ಹೊಸ ಪೀಳಿಗೆ ರಾಜಕೀಯ ಪ್ರವೇಶಿಸಬೇಕು ಎಂದು ಕಟಕ್‌ನಲ್ಲಿನ ಸಾಹಿದ್ ಭವನ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಆಹ್ವಾನ ನೀಡಿದರು.
PTI

ರಾಜಕೀಯ ಪಕ್ಷಗಳ ಮತ್ತು ಸರಕಾರದ ಆಯಕಟ್ಟಿನ ಜಾಗಗಳಲ್ಲಿ ಹಿರಿಯ ವ್ಯಕ್ತಿಗಳೇ ತುಂಬಿದ್ದಾರಲ್ಲಾ ಎಂಬ ಪ್ರಶ್ನೆಯೊಂದು ಬಂದಾಗ, 'ನಮ್ಮ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೂ ವಯಸ್ಸಾಗಿದೆ. ಆದರೆ ಅವರು ಯುವಕನಂತೆ ಕೆಲಸ ಮಾಡುತ್ತಿದ್ದಾರೆ' ಎಂದರು.

ರಾಷ್ಟ್ರ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ಮತ್ತು ರಾಜಕೀಯದಲ್ಲಿ ಬದಲಾವಣೆ ತರುವುದಿದ್ದರೆ ಅದು ಯುವ ಜನತೆಯಿಂದ ಮಾತ್ರ ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಹುಲ್, ಇಲ್ಲಿ ವಯಸ್ಸಾದವರು ಅಡ್ಡಿಯಾಗಲಾರರು ಎಂದು ಅಭಿಪ್ರಾಯಪಟ್ಟರು.

ಎರಡು ದಿನಗಳ ಒರಿಸ್ಸಾ ಪ್ರವಾಸದಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕಟಕ್ ಮತ್ತು ಬೆರ್ಹಾಂಪುರ್ ವಿದ್ಯಾರ್ಥಿಗಳೊಂದಿಗೆ ಮೊದಲ ದಿನ ಸಂವಾದ ನಡೆಸಿದರು.

ರಾಹುಲ್ ಸಂವಾದದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪೂಜಾ ಎಂಬ ವಿದ್ಯಾರ್ಥಿನಿ, ಕಳೆದ ಐದು ದಶಕಗಳ ಅವಧಿಯಲ್ಲಿ ಭಾರತ ಮತ್ತು ಜಪಾನ್‌ಗಳು ಸಾಧಿಸಿರುವ ಪ್ರಗತಿಯ ಬಗ್ಗೆ ನಮಗೆ ಮನದಟ್ಟು ಮಾಡಿದರು ಎಂದಿದ್ದಾಳೆ.

ಒರಿಸ್ಸಾ ಹಿಂದುಳಿಯುವಲ್ಲಿ ಕೇಂದ್ರ ಸರಕಾರದ ಪಾತ್ರ ಮಹತ್ವದ್ದು. ಅದು ಕಾಂಗ್ರೆಸ್ಸೇತರ ಸರಕಾರಗಳ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆರೋಪಿಸಿರುವುದನ್ನು ಉಲ್ಲೇಖಿಸಿ ಪ್ರಶ್ನಿಸಿದ ವಿದ್ಯಾರ್ಥಿ ಸೌಮೀಂದ್ರ ಪಲ್ಲೂರ್‌ಗೆ ಉತ್ತರಿಸಿದ ರಾಹುಲ್, 'ಕೇಂದ್ರವು ಯಾವತ್ತೂ ಒರಿಸ್ಸಾವನ್ನು ಅಥವಾ ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು ನಿರ್ಲಕ್ಷಿಸಿಲ್ಲ' ಎಂದರು.
ಸಂಬಂಧಿತ ಮಾಹಿತಿ ಹುಡುಕಿ