ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರ ಸರಕಾರ ಅವಧಿಗೆ ಮುಂಚೆಯೇ ಪತನ: ಬಿಜೆಪಿ ಭವಿಷ್ಯ (UPA Govt | NDA | BJP | Arun Jaitley)
Bookmark and Share Feedback Print
 
2ಜಿ ತರಂಗಾಂತರ ಹಂಚಿಕೆ ಹಗರಣ ಸಂಬಂಧ ಸಂಸತ್ ಕಲಾಪವನ್ನು ಸ್ಥಗಿತಗೊಳಿಸಿರುವುದು ಮತ್ತು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿರುವ ಅಭೂತಪೂರ್ವ ಯಶಸ್ಸಿನಿಂದ ಉಬ್ಬಿ ಹೋಗಿರುವ ಬಿಜೆಪಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ತನ್ನ ಅವಧಿಯನ್ನು ಪೂರ್ಣಗೊಳಿಸುವ ಸಾಧ್ಯತೆಗಳು ಕಡಿಮೆ ಎಂದಿದೆ.

ಅಲ್ಲದೆ ಎನ್‌ಡಿಎ ಕೂಟವನ್ನು ಮುಂದಿನ ಚುನಾವಣೆಗಳಲ್ಲಿ ವಿಸ್ತರಿಸುವ ಅಗತ್ಯವಿದೆ ಎಂದು ಹೇಳಿದೆ.

ನಾವೀಗ ಹೊಚ್ಚ ಹೊಸ ಮಾರ್ಗದಲ್ಲಿದ್ದೇವೆ. ಕೆಲ ವಾರಗಳ ಹಿಂದಿನವರೆಗೆ, 2014ರ ಮಹಾ ಚುನಾವಣೆಗೆ ನಾವು ಸಿದ್ಧರಾಗಬೇಕಾಗಿದೆ ಎಂದು ನಾನು ಹೇಳುತ್ತಾ ಬಂದಿದ್ದೆ. ಆದರೆ ಮುಂದಿನ ಚುನಾವಣೆ 2014ಕ್ಕೇ ನಡೆಯಲಿದೆ ಎಂದು ಹೇಳುವ ಯಾವುದೇ ಭರವಸೆ ಅಥವಾ ಅದಕ್ಕೆ ಸಂಬಂಧಪಟ್ಟ ಅಂಶಗಳು ನನಗೆ ಕಾಣುತ್ತಿಲ್ಲ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ನುಡಿದರು.

ಬಹುತೇಕ ಪ್ರತಿದಿನ ಮುಗ್ಗರಿಸುತ್ತಿರುವ ಈ ಸರಕಾರವು ಮೂರೂವರೆ ವರ್ಷ ಅಥವಾ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುತ್ತದೆ ಎಂಬ ಯಾವುದೇ ವಿಶ್ವಾಸ ನನಗಿಲ್ಲ ಎಂದರು.

2ಜಿ ತರಂಗಾಂತರ ಹಂಚಿಕೆ ಹಗರಣ ಪ್ರಕರಣದ ಸಂಬಂಧ ಬಿಜೆಪಿ ಕಾನೂನು ವಿಭಾಗವು ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಜೇಟ್ಲಿ, ಮುಂದಿನ ಮೂರು ತಿಂಗಳುಗಳ ಅವಧಿಯಲ್ಲಿ ಈ ವಿಚಾರವಾಗಿ ರಾಷ್ಟ್ರವ್ಯಾಪಿ ಹೋರಾಟಕ್ಕೆ ಪಕ್ಷ ಸಿದ್ಧವಾಗಬೇಕು ಎಂದರು.

ಮುಂಬರುವ ಪಶ್ಚಿಮ ಬಂಗಾಲ ಮತ್ತು ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಎಡಪಕ್ಷಗಳ ನಿರೀಕ್ಷೆಗಳು ಬುಡಮೇಲಾಗುವ ಎಲ್ಲಾ ಲಕ್ಷಣಗಳೂ ತೋರುತ್ತಿರುವುದರಿಂದ ತೃತೀಯ ರಂಗ ಮತ್ತಷ್ಟು ದುರ್ಬಲವಾಗಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.

2ಜಿ ಹಗರಣ ಸಂಬಂಧ ಮೌನವಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧವೂ ಇದೇ ಸಂದರ್ಭದಲ್ಲಿ ಜೇಟ್ಲಿ ವಾಗ್ದಾಳಿ ನಡೆಸಿದರು.

ಈ ಪ್ರಕರಣ ಗರಿಗೆದರಿದ ಕಳೆದೆರಡು ತಿಂಗಳುಗಳ ಅವಧಿಯಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಮುಖ್ಯಸ್ಥನಾಗಿರುವ ಪ್ರಧಾನ ಮಂತ್ರಿ ಸಂಪೂರ್ಣವಾಗಿ ಮೌನಕ್ಕೆ ಶರಣಾಗಿದ್ದರು. ಅವರು ವಿದೇಶೀ ನೀತಿಗಳ ಬಗ್ಗೆ ಮಾತನಾಡಿ, ಅಲ್ಲಿಗೆ ನಿಲ್ಲಿಸಿ ಬಿಡುತ್ತಾರೆ. ಕೆಲವು ಕಾರಣಗಳಿಂದಾಗಿ ಅವರಿಗೆ ದೇಶದ ರಾಜಕೀಯ ಅಸಂಗತ ಎನಿಸುತ್ತಿದೆ ಎಂದರು.

ಭ್ರಷ್ಟಾಚಾರದ ವಿರುದ್ಧ ಯಾವುದೇ ನಿಲುವನ್ನು ತಳೆಯುವುದು ಅಥವಾ ಸಂಸತ್ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವ ವಿಚಾರದಲ್ಲೂ ಪ್ರಧಾನಿಯವರತ್ತ ಜೇಟ್ಲಿ ಬೆಟ್ಟು ಮಾಡಿದರು.

2ಜಿ ಹಗರಣವನ್ನು ಮುಚ್ಚಿ ಹಾಕಲು ಕೊನೆಯ ಮೂರು ವರ್ಷಗಳ ಕಾಲ ಮುಂದಾಳುತ್ವ ವಹಿಸಿಕೊಂಡಿರುವ ಪ್ರಧಾನಿ 'ಸಮ್ಮಿಶ್ರ ರಾಜಕೀಯದ ಕೈದಿ' ಎಂದು ಅವರು ಬಣ್ಣಿಸಿದರು.
ಸಂಬಂಧಿತ ಮಾಹಿತಿ ಹುಡುಕಿ