ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ಭಾಗ ಮಾಡಿದರೆ ಸಮಾಜ ವಿಭಜನೆ: ಆರೆಸ್ಸೆಸ್ (RSS | Ramjanma bhoomi | Mohan Bhagwat | Ayodhya)
Bookmark and Share Feedback Print
 
ರಾಮ ಜನ್ಮಭೂಮಿಯನ್ನು ಯಾವುದೇ ರೀತಿಯಲ್ಲಿ ವಿಭಜನೆ ಮಾಡುವುದರಿಂದ ಸಮಸ್ಯೆ ಪರಿಹಾರವಾಗುವ ಬದಲು ಮತ್ತಷ್ಟು ಜಟಿಲಗೊಳ್ಳುವುದರಿಂದ ಇದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ತೀವ್ರವಾಗಿ ವಿರೋಧಿಸುತ್ತದೆ ಎಂದು ಅದರ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.

ನಾಗ್ಪುರದಲ್ಲಿನ ವಿರಾಟ್ ಹಿಂದೂ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಜತೆಗೆ ರಾಮ ಜನ್ಮಭೂಮಿಯನ್ನು ವಿಭಜಿಸುವುದಕ್ಕೂ ನಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
PTI

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಭಾರತವು ಸಂಘಟಿತವಾಗಿ ಮತ್ತು ಒಗ್ಗಟ್ಟಿನಿಂದ ಇರಲು ಸಾಧ್ಯ. ಒಂದು ವೇಳೆ ಬೃಹತ್ ಭವ್ಯವಾದ ರಾಮಮಂದಿರವನ್ನು ನಿರ್ಮಿಸಿದಲ್ಲಿ, ಅದು ದೇಶದಲ್ಲಿ ಏಕತೆಯ ವಾತಾವರಣವನ್ನು ಸೃಷ್ಟಿಸಲಿದೆ ಎಂದು ಭಾಗ್ವತ್ ಅಭಿಪ್ರಾಯಪಟ್ಟರು.

ರಾಮ ಜನ್ಮಭೂಮಿಯನ್ನು ಭಾಗ ಮಾಡಿದರೆ, ಅದು ಸಮಾಜದ ವಿಭಜನೆಗೆ ಕಾರಣವಾಗುತ್ತದೆ. ಅಲ್ಲದೆ ರಾಷ್ಟ್ರ ವಿರೋಧಿ ಶಕ್ತಿಗಳ ರಾಜಕೀಯ ಮೇಲುಗೈ ಸಾಧಿಸುತ್ತದೆ ಎಂದರು.

ಕಾಂಗ್ರೆಸ್ಸನ್ನು ಹೆಸರಿಸದೆ ವಾಗ್ದಾಳಿ ನಡೆಸಿದ ಭಾಗ್ವತ್, ಕೆಲವು ಪಕ್ಷಗಳು ಮುಸ್ಲಿಮರ ಓಟುಗಳನ್ನು ಪಡೆಯಲು ಕಸರತ್ತು ಮಾಡುತ್ತಿವೆ. ಕಳೆದ 85 ವರ್ಷಗಳಿಂದ ಸ್ವಾರ್ಥರಹಿತವಾಗಿ ದೇಶದ ಹಿಂದೂಗಳ ಏಳ್ಗೆಗಾಗಿ ಶ್ರಮಿಸುತ್ತಿರುವ ಆರೆಸ್ಸೆಸ್‌ನತ್ತ ಅವರು ಬೆಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದರು.

ರಾಮಮಂದಿರ ಕುರಿತ ಒಂದು ಸುತ್ತಿನ ಹೋರಾಟ ಈಗಾಗಲೇ ಮುಗಿದಿದೆ. ಅದರ ಬಳಿಕ ರಾಮ ಕೊಂಚ ವಿಶ್ರಾಂತಿಯನ್ನು ಕರುಣಿಸಿದ್ದಾನೆ. ಈಗ ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ಮತ್ತೆ ನಡೆಸಬೇಕಾಗಿದೆ. ಅಲಹಾಬಾದ್ ಹೈಕೋರ್ಟ್ ಈ ನಿಟ್ಟಿನಲ್ಲಿ ನಮಗೆ ಮೊದಲನೆ ಹೆಜ್ಜೆಯನ್ನಿಡಲು ಸಾಮರ್ಥ್ಯವನ್ನು ತುಂಬಿದೆ ಎಂದು ನೆರೆದಿದ್ದ ಸಾವಿರಾರು ಮಂದಿಗೆ ಕರೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ