ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇನ್ಮುಂದೆ ಶ್ರೀಮಂತರಿಗೆ ಮಾತ್ರ ತಾಜ್ ಮಹಲ್ ವೀಕ್ಷಣೆ! (Taj mahal | egypt | Piramid | Indaia | London)
Bookmark and Share Feedback Print
 
PTI
ಇನ್ಮುಂದೆ ವಿಶ್ವವಿಖ್ಯಾತ ತಾಜ್ ಮಹಲ್ ಸೇರಿದಂತೆ ಕೆಲವು ಪ್ರಸಿದ್ಧ ಸ್ಥಳಗಳನ್ನು ನೋಡಲು ಶ್ರೀಮಂತರಿಗೆ ಮಾತ್ರ ಅವಕಾಶ. ಅರೇ ಇದೇನಪ್ಪಾ ಅಂತ ಹುಬ್ಬೇರಿಸಬೇಡಿ....ಹಾಗಂತ ಭವಿಷ್ಯದಲ್ಲಿ ಸ್ಮಾರಕಗಳ ರಕ್ಷಣೆ ಮಾಡುವ ಕಾಳಜಿ ಹೊಂದಿರುವ 'ಭವಿಷ್ಯದ ಪ್ರಯೋಗಾಲಯ' ಎಂಬ ಸಂಸ್ಥೆ ನೀಡಿರುವ ಸಲಹೆ ಇದಾಗಿದೆ.

ತಾಜ್ ಮಹಲ್, ಈಜಿಪ್ಟನ್ ಪಿರಮಿಡ್‌ಗಳು ಸೇರಿದಂತೆ ವಿಶ್ವದ ಪ್ರಸಿದ್ಧ ಪ್ರವಾಸಿ ತಾಣಗಳು ಈಗ ನಿರಂತರ ಪ್ರವಾಸಿಗರ ಒತ್ತಡದಿಂದ ಬಳಲುತ್ತಿವೆ. ಇದರಿಂದ ಈ ಸ್ಥಳಗಳು ಮುಂದಿನ ಇಪ್ಪತ್ತು ವರ್ಷಗಳಲ್ಲಿ ವಿನಾಶದ ಅಂಚಿಗೆ ಸೇರಲಿವೆ.

ಇದನ್ನು ತಡೆಯಲು ಇವುಗಳ ಪ್ರವೇಶವನ್ನು ಉನ್ನತ ವರ್ಗಕ್ಕೆ ಮಾತ್ರವೇ ಮೀಸಲಿಡುವುದು ಒಳಿತು ಎಂದು ಈ ಕುರಿತು ಭವಿಷ್ಯದ ಪ್ರಯೋಗಾಲಯ ಎಂಬ ಪ್ರಖ್ಯಾತ ಸಂಸ್ಥೆ ನಡೆಸಿರುವ ಅಧ್ಯಯನ ತಿಳಿಸಿದೆ. ಈ ಸಂಸ್ಥೆ ಬ್ರಿಟನ್ ಮೂಲದ್ದಾಗಿದೆ. ವಿಶ್ವವಿಖ್ಯಾತ ಸ್ಮಾರಕಗಳನ್ನು ಭವಿಷ್ಯದಲ್ಲಿ ಹೇಗೆ ಸಂರಕ್ಷಣೆ ಮಾಡಬೇಕೆಂದು ಈ ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ ವಿವರಿಸಿದೆ ಎಂದು ಡೈಲಿ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ವಿಶ್ವವಿಖ್ಯಾತ ಪ್ರವಾಸಿ ತಾಣಗಳನ್ನು ಸಂರಕ್ಷಣೆ ಮಾಡುವುದು ಇಂದು ತೀರಾ ಅಗತ್ಯವಾಗಿದೆ. ಶ್ರೀಮಂತರನ್ನು ಮಾತ್ರ ಸ್ಮಾರಕಗಳ ಬಳಿಗೆ ಸಾಗಲು ಬಿಡುವುದು ಒಳಿತು. ಹಾಗೆಯೇ ಸಾಮಾನ್ಯ ಜನರಿಗೆ ಇವುಗಳನ್ನು ಅನತಿ ದೂರದಿಂದಲೇ ವೀಕ್ಷಣೆ ಮಾಡುವಂತಹ ವ್ಯವಸ್ಥೆ ಕಲ್ಪಿಸುವುದು ಉತ್ತಮ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ