ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ಬಾಲಾಪರಾಧಿ, ಮೆಂಟಲ್ ಎನ್ನುತ್ತಿದ್ದಾನೆ ಉಗ್ರ ಕಸಬ್ (Pakistani terrorist | Ajmal Kasab | Bombay High Court | Amin Solkar)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿ ಸಂಬಂಧ ಮರಣ ದಂಡನೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ವಿವಿಧ ಕಸರತ್ತು ನಡೆಸುತ್ತಿದ್ದಾನೆ. ತನ್ನ ಮನೋಸ್ಥಿತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಬೇಕು ಮತ್ತು ತಾನು ಬಾಲಾಪರಾಧಿಯೆಂದು ಪರಿಗಣಿಸಬೇಕು ಎಂದು ಬಾಂಬೆ ಹೈಕೋರ್ಟನ್ನು ಒತ್ತಾಯಿಸಿದ್ದಾನೆ.
PTI

ಈ ಸಂಬಂಧ ಕಸಬ್ ಪರ ವಕೀಲರಾಗಿರುವ ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಕಸಬ್‌ನ ವಯಸ್ಸನ್ನು ಖಚಿತಪಡಿಸಬೇಕು ಮತ್ತು ಆತನ ಮಾನಸಿಕ ಸ್ಥಿತಿಯನ್ನು ವೈದ್ಯಕೀಯ ಮಂಡಳಿಗಳು ಅಧ್ಯಯನ ನಡೆಸಲು ಸೂಚಿಸಬೇಕು ಎಂದು ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ಮತ್ತು ವಿ.ಎಂ. ಮೋರೆಯವರನ್ನು ಒತ್ತಾಯಿಸಿದ್ದಾರೆ.

ಕಸಬ್ ತನ್ನನ್ನು ಬಾಲಾಪರಾಧಿ ಎಂದು ಪರಿಗಣಿಸಬೇಕು ಎಂದು ಮನವಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವಿಚಾರಣಾ ನ್ಯಾಯಾಲಯದಲ್ಲಿ ಕೂಡ ಇಂತಹುದೇ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ನಂತರ ಅಸ್ಥಿ ಪರೀಕ್ಷೆಯ ಮೂಲಕ ಕಸಬ್ ವಯಸ್ಸು 20ಕ್ಕಿಂತ ಹೆಚ್ಚು ಮತ್ತು ಆತ ವಯಸ್ಕ ಎಂಬ ತೀರ್ಮಾನಕ್ಕೆ ಬರಲಾಗಿತ್ತು.

ವಿಚಾರಣಾ ನ್ಯಾಯಾಲಯವು ಮರಣ ದಂಡನೆ ನೀಡಿರುವ ಶಿಕ್ಷೆಗೆ ಕಾರಣವಾಗಿರುವುದು 2008ರ ಮುಂಬೈ ದಾಳಿ. ಕಸಬ್ ಇಂತಹ ಕೃತ್ಯಕ್ಕಿಳಿಯಬೇಕಾದ ಹಿಂದೆ ಕಾರಣಗಳೇನಿದ್ದವು ಎಂಬುದನ್ನು ತಿಳಿದುಕೊಳ್ಳಬೇಕು. ಆತನ ಕೌಟುಂಬಿಕ ಹಿನ್ನೆಲೆಯನ್ನೂ ಅಧ್ಯಯನ ಮಾಡಬೇಕು. ಅದಕ್ಕಾಗಿ ಭಾರತ ಮತ್ತು ಪಾಕಿಸ್ತಾನ -- ಎರಡೂ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರಕಾರೇತರ ಸಂಸ್ಥೆಯೊಂದನ್ನು ನೇಮಕ ಮಾಡಬೇಕು ಎಂದು ಕಸಬ್ ಪರ ವಕೀಲರು ಇದೀಗ ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಕ್ಕಳ ಹಕ್ಕುಗಳ ಒಪ್ಪಂದಗಳ (ಸಿಆರ್‌ಸಿ) ಅಡಿಯಲ್ಲಿ ಭಾರತದ ಅಂತಾರಾಷ್ಟ್ರೀಯ ಹೊಣೆಗಾರಿಕೆಯನ್ನು ದೇಶೀಯ ಕಾನೂನಿನ ಮೂಲಕ ಸಂಘಟಿಸುವ ನಿಟ್ಟಿನಲ್ಲಿ 2000ದಲ್ಲಿ ಬಾಲಾಪರಾಧ ನ್ಯಾಯ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಈ ಕಾಯ್ದೆಯ ಒಂದು ಅಧಿನಿಯಮದ ಪ್ರಕಾರ ಬಾಲಾಪರಾಧಿಗಳಿಗೆ ಮರಣ ದಂಡನೆ ವಿಧಿಸುವುದು ನಿಷಿದ್ಧ ಎಂದು ಕಸಬ್ ವಕೀಲರು ವಾದ ಮಂಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ