ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ, ಸೋನಿಯಾ ವೀಕ್, ಲಾಬಿಗಳೇ ಸ್ಟ್ರಾಂಗ್: ಅಡ್ವಾಣಿ (Lobbyists | UPA cabinet | 2G spectrum scam | LK Advani)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿನ ಸಂಪುಟದಲ್ಲಿ ಯಾರು ಇರಬೇಕು, ಯಾರು ಇರಬಾರದು ಎಂಬ ಪ್ರಮುಖ ನಿರ್ಧಾರ ಕೈಗೊಳ್ಳುವುದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅಲ್ಲ, ಬದಲಿಗೆ ಲಾಬಿದಾರರು ಎಂದು ಅಡ್ವಾಣಿ ಆರೋಪಿಸಿದ್ದಾರೆ.

2ಜಿ ತರಂಗಾಂತರ ಹಂಚಿಕೆ ಹಗರಣ ಸಂಬಂಧ ಜಂಟಿ ಸಂಸದೀಯ ಸಮಿತಿ ತನಿಖೆ ಪಟ್ಟು ಸಡಿಲಿಸಲು ನಿರಾಕರಿಸಿರುವ ಪ್ರತಿಪಕ್ಷಗಳು, ಎನ್‌ಡಿಎ ನೇತೃತ್ವದಲ್ಲಿ ಮಂಗಳವಾರ ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದವು.
PTI

ಈ ಸಂದರ್ಭದಲ್ಲಿ ನೇರವಾಗಿ ಪ್ರಧಾನಿ ಸಿಂಗ್ ವಿರುದ್ಧ ಕಿಡಿ ಕಾರಿರುವ ಅಡ್ವಾಣಿ, ಜೆಪಿಸಿ ತನಿಖೆಗೆ ಸರಕಾರ ಮುಂದಾಗದೇ ಇರುವುದನ್ನು ಪ್ರಶ್ನಿಸಿದರು. ಜೆಪಿಸಿ ತನಿಖೆಗೆ ನಿರಾಕರಿಸಲು ಯಾವುದೇ ಪ್ರಮುಖ ಕಾರಣಗಳಿಲ್ಲ. ಆದರೂ ತನಿಖೆಗೆ ಸರಕಾರ ಒಪ್ಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2ಜಿ ಹಗರಣದ ಜೆಪಿಸಿ ತನಿಖೆಯ ಬಗ್ಗೆ ಯುಪಿಎ ಅಂಗ ಪಕ್ಷಗಳಲ್ಲಿ ಒಮ್ಮತವಿಲ್ಲ. ಇಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಏಕಾಂಗಿಯಾಗಿ ಹೋಗಿದೆ ಎಂದಿರುವ ಅಡ್ವಾಣಿ, ಸಂಸತ್ತಿನ ಚಳಿಗಾಲದ ಅಧಿವೇಶನ ಫಲಪ್ರದವಾಗದೇ ಇರಲು ಸಂಪೂರ್ಣ ಕಾರಣ ಸರಕಾರ ಎಂದು ದೂಷಿಸಿದರು.

ಯುಪಿಎ ಸರಕಾರದ ಸಂಪುಟದಲ್ಲಿ ಯಾರು ಇರಬೇಕು ಎನ್ನುವುದನ್ನು ನಿರ್ಧರಿಸುವುದು ಲಾಬಿದಾರರು ಎಂಬುದು ಬಹಿರಂಗವಾದ ನಂತರ ಜನತೆ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ ಎಂದು ರಾಡಿಯಾ ಟೇಪುಗಳನ್ನು ಉಲ್ಲೇಖಿಸುತ್ತಾ ಮಾಜಿ ಉಪ ಪ್ರಧಾನ ಮಂತ್ರಿ ಹೇಳಿದರು.

ಸರಕಾರದ ಸಂಪುಟದಲ್ಲಿ ಯಾರು ಇರಬೇಕು ಅಥವಾ ಇರಬಾರದು ಎನ್ನುವುದನ್ನು ನಿರ್ಧರಿಸುವುದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಎಂದು ಯಾರಾದರೂ ತಿಳಿದುಕೊಂಡಿದ್ದರೆ ಅದು ಸುಳ್ಳು ಎನ್ನುವುದು 2ಜಿ ಹಗರಣ ಸಾಬೀತುಪಡಿಸಿದೆ ಎಂದರು.

ಸರಕಾರದ ವಿರುದ್ಧ ಎನ್‌ಡಿಎ ರಾಷ್ಟ್ರದಾದ್ಯಂತ ರ‌್ಯಾಲಿಗಳನ್ನು ನಡೆಸಲಿದೆ ಎಂದೂ ಇದೇ ಸಂದರ್ಭದಲ್ಲಿ ಅಡ್ವಾಣಿ ಪ್ರಕಟಿಸಿದ್ದಾರೆ. ಡಿಸೆಂಬರ್ 22ರಿಂದ ದೆಹಲಿಯಲ್ಲಿ ಆರಂಭವಾಗುವ ಸಾರ್ವಜನಿಕ ಪ್ರತಿಭಟನೆಗಳು ಜನವರಿ 16ರಂದು ಮುಂಬೈ ಸೇರದಂತೆ ದೇಶದಾದ್ಯಂತ ನಡೆಯಲಿವೆ. ಕೇಂದ್ರವು ನಡೆಸಿರುವ ಹಗರಣಗಳನ್ನು ಜನತೆಗೆ ಮನದಟ್ಟು ಮಾಡುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ