ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿಗೆ ಹಗರಣವಲ್ಲ, ಫೋನ್ ಕದ್ದಾಲಿಕೆಯೇ ಚಿಂತೆ: ಅಡ್ವಾಣಿ (BJP | LK Advani | Manmohan Singh | Congress)
Bookmark and Share Feedback Print
 
ಸಚಿವ ಸ್ಥಾನಕ್ಕಾಗಿ ಯಾವ ರೀತಿಯ ಲಾಬಿಗಳು ನಡೆಯುತ್ತಿವೆ ಎಂಬುದನ್ನು ಬಟಾ ಬಯಲು ಮಾಡಿದ್ದ ರಾಡಿಯಾ ಟೇಪ್ ಬಹಿರಂಗವಾಗಿರುವುದು ಹೇಗೆ ಎಂಬುದನ್ನು ತನಿಖೆ ನಡೆಸಲಾಗುತ್ತದೆ ಎಂದು ಕೇಂದ್ರ ಹೇಳಿರುವುದಕ್ಕೆ ತಿರುಗೇಟು ನೀಡಿರುವ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಹಗರಣಗಳಿಗಿಂತ ಟೇಪ್ ಬಹಿರಂಗವಾಗಿರುವುದೇ ದೊಡ್ಡ ವಿಚಾರವಾಗಿದೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ಸಿಂಗ್ ಅವರಿಗೆ ರಾಡಿಯಾ ಟೇಪ್ ಸೋರಿಕೆಯಾಗಿರುವುದೇ ಚಿಂತೆಯ ವಿಚಾರವಾಗಿದೆ. ಅವರ ಕಳವಳದ ಹಿಂದಿನ ಹಕೀಕತ್ತು ಏನು? ಜನಸಾಮಾನ್ಯನಿಗೆ ಸರಕಾರದ ವಿಶ್ವಾಸಾರ್ಹತೆಯೇ ಮುಖ್ಯ ಹೊರತು, ಇತರ ವಿಚಾರಗಳಲ್ಲ. ಇದರ ಕುರಿತು ಕಳವಳಗಳು ಇರಬೇಕಿತ್ತು. ಆದರೆ ಅಲ್ಲಿ ಈ ಕುರಿತು ಚಿಂತೆ ಮಾಡಲಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ದೂರವಾಣಿ ಕದ್ದಾಲಿಕೆ ಕುರಿತು ಪರಿಶೀಲನೆ ನಡೆಸುವಂತೆ ಸಂಪುಟ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್ ಅವರಿಗೆ ಪ್ರಧಾನಿ ಹೇಳಿರುವುದನ್ನು ಉಲ್ಲೇಖಿಸಿದ ಬಿಜೆಪಿ ನಾಯಕ ಮೇಲಿನಂತೆ ಕುಟುಕಿದರು.

ಇವೆಲ್ಲ ಪ್ರಧಾನ ಮಂತ್ರಿ ಚಿಂತೆಗೀಡಾಗಬೇಕಾದ ವಿಚಾರವೇ? ನನಗೆ ಒಂದೂ ಅರ್ಥವಾಗುತ್ತಿಲ್ಲ ಎಂದು 2ಜಿ ಹಗರಣ ಭಾರೀ ಸುದ್ದಿಯಾಗಿದ್ದಾಗ ಸುಮ್ಮನಿದ್ದ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದರು.

ಲಾಬಿದಾರರು ಸರಕಾರದ ಮೇಲೆ ಭಾರೀ ಹಿಡಿತ ಹೊಂದಿದ್ದಾರೆ ಎಂದು ಆರೋಪಿಸಿದ ಅಡ್ವಾಣಿ, ಅದಕ್ಕಾಗಿ ಈ ಹಿಂದೆ ನೀಡಿದ ಉದಾಹರಣೆಗಳನ್ನೇ ನೀಡಿದರು.

ಯುಪಿಎ ಸರಕಾರವನ್ನು ರಚಿಸಿದ್ದು ಪ್ರಧಾನ ಮಂತ್ರಿ ಅಲ್ಲ ಅಥವಾ ನಾವು ಬಹಳ ಹಿಂದಿನಿಂದ ಅಂದುಕೊಂಡಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯೂ ಅಲ್ಲ. ಅದು ಕಾರ್ಪೊರೇಟ್ ಲಾಬಿದಾರರು. ಇದು ರಾಡಿಯಾ ಟೇಪ್ ಮೂಲಕ ಬಹಿರಂಗವಾಗಿದೆ. ಯಾವ ಸಚಿವರು ಸಂಪುಟದಲ್ಲಿರಬೇಕು, ಇರಬಾರದು ಮತ್ತು ಯಾವ ಖಾತೆಯನ್ನು ನೀಡಬೇಕು ಎನ್ನುವುದನ್ನು ನಿರ್ಧರಿಸುವುದು ಪ್ರಧಾನಿಯಲ್ಲ ಎನ್ನುವುದು ಜಗತ್ತಿಗೆ ತಿಳಿದಿದೆ ಎಂದು ಅಭಿಪ್ರಾಯಪಟ್ಟರು.

2ಜಿ ಹಗರಣವನ್ನು ಜೆಪಿಸಿ ತನಿಖೆಗೆ ನೀಡದೇ ಇರುವುದು, ಕೇಂದ್ರ ಜಾಗೃತ ಆಯುಕ್ತರನ್ನಾಗಿ ಪಿ.ಜೆ. ಥಾಮಸ್ ಅವರನ್ನು ನೇಮಕ ಮಾಡಿರುವುದು ಮುಂತಾದ ವಿಚಾರಗಳನ್ನೂ ಪ್ರಸ್ತಾಪಿಸಿರುವ ಅಡ್ವಾಣಿ, ಪ್ರಧಾನಿಯವರ ಕಾರ್ಯದಕ್ಷತೆಯ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ