ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾತಾಡಿದ್ದು ಹೌದು, ಸಾಕ್ಷಿಯಿಲ್ಲ; ದಿಗ್ವಿಜಯ್ ಬಣ್ಣ ಬಯಲು (Hemant Karkare | Congress | Digvijay Singh | Mumbai attacks)
Bookmark and Share Feedback Print
 
ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆಯವರ ಜತೆ ಮಾತನಾಡಿದ ಕುರಿತು ನನ್ನಲ್ಲಿ ದಾಖಲೆಗಳಿವೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದು ಬೊಗಳೆ ಎಂದು ಸಾಬೀತಾಗಿದೆ. ಆ ಕುರಿತು ನನ್ನಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ಸ್ವತಃ ದಿಗ್ವಿಜಯ್ ಪ್ರಕಟಿಸಿದ್ದಾರೆ.

ಆರಂಭದಲ್ಲಿ ಕರ್ಕರೆ ಸಾವಿನ ಹಿಂದೆ ಹಿಂದೂ ಭಯೋತ್ಪಾದಕರಿದ್ದಾರೆ ಎಂದು ಆರೋಪಿಸಿದ್ದ ದಿಗ್ವಿಜಯ್, ಇದು ಭಾರೀ ಸುದ್ದಿಯಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದರು. ಇಲ್ಲ, ಮುಂಬೈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡದ ಬಗ್ಗೆ ನಾನು ಶಂಕಿಸಿಲ್ಲ ಎಂದಿದ್ದರು.

ಆದರೂ ಕರ್ಕರೆ ನನ್ನ ಜತೆ ಮಾತನಾಡಿದ್ದು ಹೌದು ಎಂದು ಸಮರ್ಥಿಸಿಕೊಂಡಿದ್ದರು. ಆ ಬಗ್ಗೆ ನನ್ನಲ್ಲಿ ಸಾಕಷ್ಟು ದಾಖಲೆಗಳಿವೆ ಎಂದಿದ್ದರು. ಆದರೆ ಮಂಗಳವಾರ ಅಸ್ಸಾಂನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದಿಗ್ವಿಜಯ್ ಕೈ ಚೆಲ್ಲಿದ್ದಾರೆ.

ಮುಂಬೈ ದಾಳಿಗೆ ಎರಡು ಗಂಟೆ ಮೊದಲು ಕರ್ಕರೆಯವರು ನನ್ನ ಜತೆ ಮಾತನಾಡಿದ್ದು ಹೌದು. ನನಗೆ ಹಿಂದೂ ಭಯೋತ್ಪಾದಕರಿಂದ ಜೀವ ಬೆದರಿಕೆ ಇದೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ನನ್ನಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ತಿಳಿಸಿದ್ದಾರೆ.

ನಾನು ಸುಳ್ಳುಗಾರನಲ್ಲ. ಈ ವಿಚಾರದಲ್ಲಿ ಸುಳ್ಳು ಹೇಳುವ ಅಗತ್ಯವೂ ನನಗಿಲ್ಲ. ನಾನು ಕರ್ಕರೆ ಜತೆ ಮಾತನಾಡಿದ್ದು ಹೌದು. ಈ ಕುರಿತ ದೂರವಾಣಿ ಕರೆ ದಾಖಲೆಗಳಿಗಾಗಿ ನಾನು ದೂರವಾಣಿ ಸಚಿವಾಲಯಕ್ಕೆ ಮನವಿ ಮಾಡಿದ್ದೆ. ನನ್ನ ಮತ್ತು ಕರ್ಕರೆ ನಡುವಿನ ಮಾತುಕತೆ ದಾಖಲೆ ಒದಗಿಸುವಂತೆ ಪುಣೆಯ ದೂರವಾಣಿ ಕೇಂದ್ರಕ್ಕೆ ಕೇಳಿದ್ದೆ. ಆದರೆ ದಾಖಲೆಗಳು ಲಭ್ಯವಿಲ್ಲ ಎಂದರು.

ಇದಕ್ಕೆ ದಿಗ್ವಿಜಯ್ ನೀಡುತ್ತಿರುವ ಕಾರಣ, ದೂರವಾಣಿ ಇಲಾಖೆಯು ಯಾವುದೇ ಕರೆ ದಾಖಲೆಗಳನ್ನು 12 ತಿಂಗಳಿಗಿಂತ ಹೆಚ್ಚು ಕಾಪಾಡದೇ ಇರುವುದು. ತಾನು ಮಾತನಾಡಿರುವುದು 2008ರ ನವೆಂಬರ್ 26ರಂದು. ಅಂದರೆ ಎರಡು ವರ್ಷಗಳೇ ಕಳೆದಿವೆ. ಹಾಗಾಗಿ ದೂರವಾಣಿ ಇಲಾಖೆಯಲ್ಲಿ ದಾಖಲೆಗಳಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೇಳಿಕೊಂಡಿದ್ದಾರೆ.

ಸುಳ್ಳನ್ನು ಹಬ್ಬಿಸುವ ಅಗತ್ಯ ನನಗಿಲ್ಲ. ನಾನು ಈ ಹಿಂದೆ ಏನು ಹೇಳಿದ್ದೆನೋ, ಅದಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದಿರುವ ಅವರು, ಆಗಿರುವ ಗೊಂದಲಕ್ಕೆ ಬಿಜೆಪಿಯೇ ಕಾರಣ ಎಂದು ದೂಷಿಸಿದರು.

ಮುಂಬೈ ದಾಳಿಯ ಹಿಂದೆ ಪಾಕಿಸ್ತಾನಿ ಶಕ್ತಿಗಳು ಇವೆ ಎಂಬುದರ ಕುರಿತು ನಾನು ಯಾವತ್ತೂ ಸಂಶಯ ವ್ಯಕ್ತಪಡಿಸಿಲ್ಲ. ತನಿಖೆಗಳು ನನಗೆ ತೃಪ್ತಿ ತಂದಿವೆ. ಈ ಬಗ್ಗೆ ಬಿಜೆಪಿಯೇ ಅಪಪ್ರಚಾರ ಮಾಡುತ್ತಿದೆ. ಅದು ತನ್ನ ಇಬ್ಬಂದಿತನವನ್ನು ಪ್ರದರ್ಶಿಸುತ್ತಿದೆ. ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

ಕರ್ಕರೆಯವರ ಹೆಸರನ್ನು ಅಸ್ತ್ರವನ್ನಾಗಿಸಿಕೊಂಡು ದೇಶದಲ್ಲಿ ಕೋಮು ಸೌಹಾರ್ದ ಕೆಡಿಸಲು ತಾನು ಯತ್ನಿಸುತ್ತಿದ್ದೇನೆ ಎಂಬ ಆರೋಪಗಳನ್ನೂ ದಿಗ್ವಿಜಯ್ ತಳ್ಳಿ ಹಾಕಿದ್ದಾರೆ.

ಈ ಆರೋಪ ಮಾಡಿರುವುದು ಅಸ್ಸಾಂನ ಮಾಜಿ ಮುಖ್ಯಮಂತ್ರಿ ಪ್ರಫುಲ್ ಕುಮಾರ್ ಮಹಂತಾ. ಅವರು ನನ್ನ ಹಳೆಯ ಗೆಳೆಯರು. ಇಂತಹ ಹೇಳಿಕೆಗಳನ್ನು ನೀಡುವುದನ್ನು ಅವರು ತಕ್ಷಣ ನಿಲ್ಲಿಸಬೇಕು ಎಂದು ಬುದ್ಧಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ