ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಜೆಲಿನಾ ಜೋಲಿ-ಬ್ರಾಡ್ ಪಿಟ್‌ಗೆ ಹಿಂದೂ ವಿವಾಹವಂತೆ! (Angelina Jolie | Bradd Pitt | Jodhpur | Hindu wedding)
Bookmark and Share Feedback Print
 
PR
ಆರು ಮಕ್ಕಳ ತಂದೆ-ತಾಯಿಯರಾಗಿರುವ ಹಾಲಿವುಡ್ ಸೆಲೆಬ್ರಿಟಿಗಳಾದ ಆಂಜೆಲಿನಾ ಜೋಲಿ ಮತ್ತು ಬ್ರಾಡ್ ಪಿಟ್ ಭಾರತೀಯ ಶೈಲಿಯಲ್ಲಿ, ಅದರಲ್ಲೂ ಹಿಂದೂ ವೈವಾಹಿಕ ಶೈಲಿಯಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ವರ್ಷಾಂತ್ಯದಲ್ಲಿ ಅಥವಾ ಹೊಸ ವರ್ಷದಲ್ಲಿ ಅವರು ಮದುವೆಯಾಗಲಿದ್ದಾರೆ ಎಂದು ವರದಿಗಳು ಹೇಳಿವೆ.

ಹಾಲಿವುಡ್‌ನಲ್ಲಿ ಪ್ರಸಕ್ತ ಹಿಂದೂ ಸಂಸ್ಕೃತಿಯನ್ನು ಅನುಸರಿಸುವುದು ಒಂದು ರೀತಿಯಲ್ಲಿ ಫ್ಯಾಶನ್ ಆಗಿ ಹೋಗಿವೆ. ಈ ಹಿಂದೆ ಕ್ಯಾಟಿ ಪೆರಿ ಮತ್ತು ರಸ್ಸೆಲ್ ಬ್ರಾಂಡ್ ಹಿಂದೂ ಶೈಲಿಯಲ್ಲಿ ಮದುವೆಯಾಗಿದ್ದರು. ನಂತರ ಜ್ಯೂಲಿಯಾ ರಾಬರ್ಟ್ ಹಿಂದೂ ಧರ್ಮವನ್ನು ಸ್ವೀಕರಿಸಿದ್ದರು. ಈಗ 'ಬ್ರಾಂಜೆಲಿನಾ' ಜೋಡಿಯೂ ಅದೇ ಸಾಲಿಗೆ ಸೇರ್ಪಡೆಯಾಗುತ್ತಿದೆ.

2005ರಿಂದ ಜತೆಯಾಗಿ ಬದುಕುತ್ತಿರುವ ಆಂಜೆಲಿನಾ ಮತ್ತು ಬ್ರಾಡ್ ಪಿಟ್ ಮದುವೆಯಾಗಿರಲಿಲ್ಲ. ಆದರೆ ಮೂರು ಮಕ್ಕಳಿಗೆ ಇವರು ಜೈವಿಕವಾಗಿ ತಂದೆ-ತಾಯಿಯರಾಗಿದ್ದರು. ಜತೆಗೆ ಮೂರು ಮಕ್ಕಳನ್ನು ದತ್ತು ಪಡೆದುಕೊಂಡು, ಅವುಗಳಿಗೂ ಹೆತ್ತವರಾಗಿದ್ದರು. ಈಗ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

ಹಿಂದೂ ಧರ್ಮದ ಪ್ರಕಾರ ಮದುವೆಯಾದ ನಂತರವಷ್ಟೇ ಸಂಸಾರ ನಡೆಸಬೇಕು. ಆದರೆ ಇಲ್ಲಿ ಸಂಸಾರ ನಡೆಸಿದ ಮೇಲೆ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾಗಿ ಇದು ಹಿಂದೂಗಳಿಗೆ ಹೆಮ್ಮೆ ಪಡಬೇಕಾದ ವಿಚಾರ ಆಗಿರಲಾರದು ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ ಆಂಜೆಲಿನಾ-ಬ್ರಾಡ್ ಕಳೆದ ಐದು ವರ್ಷದಿಂದ ಭಾರತದ ಹಿಂದೂ ಧರ್ಮಗುರು ಗುರು ರಾಮ್ ಲಾಲ್ಜೀಯವರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರಿಂದ ಸಿದ್ಧ ಯೋಗ ಕಲಿಯುತ್ತಿದ್ದಾರೆ. ಗುರುಗಳು ಹೇಳಿಕೊಡುವ ಪವಿತ್ರ ಮಂತ್ರಗಳನ್ನು ಪಠಿಸುತ್ತಿದ್ದಾರೆ. ಯೋಗವನ್ನು ಬಹುತೇಕ ತಿಳಿದುಕೊಂಡಿದ್ದಾರೆ.

ಯೋಗವು 'ಬ್ರಾಂಜೆಲಿನಾ' ಸಂಸಾರದಲ್ಲಿ ಸಾಕಷ್ಟು ಸಹಕಾರಿಯಾಗಿದೆ. ಅವರ ನಡುವಿನ ವಾಗ್ವಾದವನ್ನು ಕಡಿಮೆ ಮಾಡಿದೆ, ಮದ್ಯ ಸೇರಿದಂತೆ ಇತರ ವ್ಯಸನಗಳಿಂದ ದೂರವಾಗಿದ್ದಾರೆ.

ಇವರಿಬ್ಬರ ಮದುವೆಯನ್ನು ಕೂಡ ನಡೆಸುತ್ತಿರುವುದು ಇದೇ ಗುರು ರಾಮ್ ಲಾಲ್. ರಾಜಸ್ತಾನದ ಜೋಧಪುರದಲ್ಲಿ ಹಿಂದೂ ವಿವಾಹ ಶೈಲಿಯಲ್ಲಿ ಮದುವೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಆದರೆ ಈ ಬಗ್ಗೆ ಗುರು ಯಾವುದೇ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ