ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರರ ವಿರುದ್ಧ ಪಾಕಿಸ್ತಾನ ಸುಮ್ಮನಿದೆ: ಅಮೆರಿಕಾಕ್ಕೆ ಭಾರತ (Mumbai attack | India | USA | Pakistan)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿಯ ಶಂಕಿತರ ವಿರುದ್ಧ ಪಾಕಿಸ್ತಾನವು ಏನೇನೂ ಕ್ರಮ ಕೈಗೊಂಡಿಲ್ಲ ಎಂದು ಇದೇ ವರ್ಷದ ಆರಂಭದಲ್ಲಿ ಭಾರತವು ಅಮೆರಿಕಾಕ್ಕೆ ದೂರು ನೀಡಿತ್ತು ಎಂದು ವಿಕಿಲೀಕ್ಸ್ ರಹಸ್ಯ ದಾಖಲೆಗಳು ಬಹಿರಂಗಪಡಿಸಿವೆ.

ಫೆಬ್ರವರಿ 23ರಂದು ಎಫ್‌ಬಿಐ ನಿರ್ದೇಶಕ ರಾಬರ್ಟ್ ಮುಲ್ಲರ್ ಅವರನ್ನು ಭೇಟಿಯಾಗಿದ್ದ ಗೃಹಸಚಿವ ಪಿ. ಚಿದಂಬರಂ, ಮುಂಬೈ ದಾಳಿಯ ಶಂಕಿತರನ್ನು ಕಾನೂನು ಕಟಕಟೆಗೆ ತರುವ ಸಂಬಂಧ ಪಾಕಿಸ್ತಾನ ಯಾವೊಂದು ಕ್ರಮಕ್ಕೂ ಮುಂದಾಗಿಲ್ಲ ಎಂದು ದೂರಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮುಲ್ಲರ್, ತಾನು ಮುಂಬರುವ ಇಸ್ಲಾಮಾಬಾದ್ ಭೇಟಿ ಸಂದರ್ಭದಲ್ಲಿ ಈ ವಿಚಾರವನ್ನು ಪಾಕಿಸ್ತಾನದ ಜತೆ ಪ್ರಸ್ತಾಪಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದ್ದರು.

ಅಮೆರಿಕಾ ರಾಯಭಾರ ಕಚೇರಿಯು ತನ್ನ ದಾಖಲೆಯಲ್ಲಿ ಹೇಳಿರುವುದು ಹೀಗೆ: ಮುಂಬೈ ದಾಳಿಯಲ್ಲಿ ಸಿಕ್ಕಿ ಬಿದ್ದಿರುವ ಕಸಬ್ ವಿಚಾರಣೆ ಮುಗಿಯದ ಹೊರತು ತಾವು ಹೆಡ್ಲಿ ವಿರುದ್ಧ ಭಾರತ ಸರಕಾರವು ಆರೋಪಪಟ್ಟಿ ದಾಖಲಿಸುವುದಿಲ್ಲ ಎಂದು ಅವರು (ಚಿದಂಬರಂ) ಹೇಳಿದ್ದಾರೆ. ಹೆಡ್ಲಿ ವಿರುದ್ಧ ಮೊದಲು ಆರೋಪಪಟ್ಟಿ ದಾಖಲಿಸಿದರೆ, ಅದನ್ನು ಬಳಸಿಕೊಂಡು ಕಸಬ್ ತನ್ನ ವಿಚಾರಣೆಯನ್ನು ವಿಳಂಬಿಸಬಹುದು ಎನ್ನುವ ಭೀತಿ ಅವರದ್ದು.

ಶಿಕಾಗೋದಲ್ಲಿರುವ ಹೆಡ್ಲಿ ಪತ್ನಿ ಶೈಜಾಳನ್ನು ವಿಚಾರಣೆ ನಡೆಸಲು ಅನುಮತಿ ಬೇಕೆಂದು ಕೂಡ ಚಿದಂಬರಂ ಆ ಸಂದರ್ಭದಲ್ಲಿ ಮನವಿ ಮಾಡಿದ್ದರು. ಇದನ್ನು ಪರಿಗಣಿಸುವುದಾಗಿ ಮುಲ್ಲರ್ ಭಾರತದ ಸಚಿವರಿಗೆ ಭರವಸೆ ನೀಡಿದ್ದರು.

ಈ ನಡುವೆ ಪಾಕಿಸ್ತಾನಕ್ಕೆ ಲಷ್ಕರ್ ಇ ತೋಯ್ಬಾವನ್ನು ಮುಗಿಸುವ ಯಾವುದೇ ಅಗತ್ಯ ಇಲ್ಲ ಎಂಬುದನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಅಮೆರಿಕಾ ವಿದೇಶಾಗ ಇಲಾಖೆಯ ಸಹಾಯಕ ಕಾರ್ಯದರ್ಶಿ ರಿಚರ್ಡ್ ಬೌಚರ್ ಒಪ್ಪಿಕೊಂಡಿದ್ದರು ಎಂದೂ ವಿಕಿಲೀಕ್ಸ್ ಹೇಳಿದೆ.

ಪಾಕಿಸ್ತಾನಕ್ಕೆ ಅದರ ಅಗತ್ಯ ಇಲ್ಲದೇ ಇರಬಹುದು. ಆದರೆ ಅದು ಲಷ್ಕರ್ ಇ ತೋಯ್ಬಾವನ್ನು ಮಟ್ಟ ಹಾಕಲೇಬೇಕು ಎಂದು ಮೆನನ್ ಮತ್ತು ಬೌಚರ್ ಒಪ್ಪಿಕೊಂಡಿದ್ದರಾದರೂ, ಈ ಸಂಬಂಧದ ತಂತ್ರಗಳ ಕುರಿತು ಅವರಿಬ್ಬರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ