ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಪರ ಅಮೆರಿಕಾ ಹಿಂದೆ ರಾಹುಲ್ ಕುತಂತ್ರ: ಮೋದಿ (Bal Thackeray | Rahul Gandhi | Narendra Modi | BJP)
Bookmark and Share Feedback Print
 
ಪಾಕಿಸ್ತಾನದ ಪರವಾಗಿ ಅಮೆರಿಕಾ ಮಾತನಾಡುತ್ತಾ ಬಂದಿರುವುದರ ಹಿಂದಿನ ಕಾರಣ ಇದುವರೆಗೆ ಏನು ಎಂಬುದು ಅಸ್ಪಷ್ಟವಾಗಿತ್ತು. ಆದರೆ ಅದೇನು ಎಂಬುದು ಈಗ ರಾಹುಲ್ ಗಾಂಧಿ ಹೇಳಿಕೆಯೊಂದಿಗೆ ಸ್ಪಷ್ಟವಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿಶ್ಲೇಷಿಸಿದ್ದಾರೆ.

ಮುಸ್ಲಿಂ ಭಯೋತ್ಪಾದಕರಿಗಿಂತ ಹಿಂದೂ ತೀವ್ರವಾದಿಗಳು ಭಾರತಕ್ಕೆ ಹೆಚ್ಚು ಅಪಾಯಕಾರಿ ಎಂದು ಅಮೆರಿಕಾದ ರಾಯಭಾರಿ ತಿಮೋತಿ ರೋಮರ್ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿರುವುದನ್ನು ಉಲ್ಲೇಖಿಸುತ್ತಾ ಮೋದಿ ಮೇಲಿನಂತೆ ವ್ಯಾಖ್ಯಾನಿಸಿದರು.
PTI

ಅಮೆರಿಕಾಕ್ಕೆ ಎಲ್ಲಾ ಮಾಹಿತಿಗಳನ್ನು ನೀಡುವವರು ಯಾರು ಎನ್ನುವುದು ಮತ್ತು ಪಾಕಿಸ್ತಾನವನ್ನು ಅಮೆರಿಕಾ ಬೆಂಬಲಿಸುತ್ತಿರುವುದು ಯಾಕೆ ಎಂಬ ಪ್ರಶ್ನೆಗಳಿಗೆ ವಿಕಿಲೀಕ್ಸ್ ಬಹಿರಂಗಪಡಿಸಿರುವ ಮಾಹಿತಿಗಳು ಉತ್ತರಿಸಿವೆ ಎಂದು ಕಾಂಗ್ರೆಸ್ 'ಯುವರಾಜ'ನನ್ನು ವ್ಯಂಗ್ಯ ಮಾಡಿದ ಮೋದಿ, ಇಂತಹ ಹೇಳಿಕೆಗಳಿಂದ ಪಾಕಿಸ್ತಾನ ಮತ್ತಷ್ಟು ಬಲಿಷ್ಠವಾಗುವ ಹೊರತು ಮತ್ತೇನೂ ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಿಜೆಪಿಯ ಪ್ರಭಾವಿ ನಾಯಕ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಪಾಕಿಸ್ತಾನವು ಭಯೋತ್ಪಾದನೆಯನ್ನು ಹರಡುತ್ತಿದೆ ಎನ್ನುವುದು ಇಡೀ ಜಗತ್ತಿಗೆ ಗೊತ್ತಿರುವಂತದ್ದು; ಭಯೋತ್ಪಾದಕರಿಗೆ ತರಬೇತಿ ನೀಡುವ ಆ ದೇಶ ಭಯೋತ್ಪಾದನೆಯನ್ನು ರಫ್ತು ಮಾಡುವ ಬೃಹತ್ ಉದ್ಯಮವನ್ನು ಹೊಂದಿದೆ ಎಂದು ವಿವರಿಸಿದರು.

ಇಂತಹ ವಾಸ್ತವ ವಿಚಾರಗಳು ತಿಳಿದಿರುವ ಹೊರತಾಗಿಯೂ ಅಮೆರಿಕನ್ನರು ಪಾಕಿಸ್ತಾನವನ್ನು ಯಾಕೆ ಬೆಂಬಲಿಸುತ್ತಿದ್ದಾರೆ ಎಂಬುದು ನನಗೆ ಅರ್ಥವಾಗಿರಲಿಲ್ಲ. ಆದರೆ ವಿಕಿಲೀಕ್ಸ್ ಬಹಿರಂಗಪಡಿಸಿರುವ ಮಾಹಿತಿ ಇದಕ್ಕೆ ಉತ್ತರ ನೀಡಿದೆ. ಅಮೆರಿಕಾಕ್ಕೆ ನಿರ್ದೇಶನಗಳನ್ನು ನೀಡುವುದು ಮತ್ತು ಪಾಕಿಸ್ತಾನದ ಕುರಿತು ಮಾಹಿತಿಗಳನ್ನು ಒದಗಿಸುವುದು ಯಾರೆಂಬುದು ಗೊತ್ತಾಗಿದೆ. ಇದು ಭಾರತಕ್ಕೆ ಆಗಿರುವ ದೊಡ್ಡ ನಷ್ಟ ಎಂದು ರಾಹುಲ್ ಹೆಸರನ್ನು ಹೇಳದೆ ವಾಗ್ದಾಳಿ ನಡೆಸಿದರು.

ತಾವು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯವರತ್ತ ಬೆರಳು ತೋರಿಸುತ್ತಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಮೋದಿ ಯಾವುದೇ ಉತ್ತರ ನೀಡಲು ನಿರಾಕರಿಸಿ ಊಹೆಗೆ ಬಿಟ್ಟುಬಿಟ್ಟರು.

ಅತಿ ಬುದ್ಧಿವಂತಿಕೆ ಬೇಡ: ಶಿವಸೇನೆ
ಹಿಂದೂ ಭಯೋತ್ಪಾದನೆ ಬಗ್ಗೆ ಹೇಳಿಕೆ ನೀಡಿರುವ ರಾಹುಲ್ ಗಾಂಧಿಯ ಯೋಗ್ಯತೆಯನ್ನು ಪ್ರಶ್ನಿಸಿರುವ ಶಿವಸೇನೆ ವರಿಷ್ಠ ಬಾಳ್ ಠಾಕ್ರೆ, ಅತಿ ಬುದ್ಧಿವಂತರಂತೆ ಮೆರೆದಾಡೋದು ಬೇಡ ಎಂದು ಸಲಹೆ ನೀಡಿದರು.

ರಾಹುಲ್ ಗಾಂಧಿ ಯಾರು ಎಂದು ಪ್ರಶ್ನಿಸಿದ ಠಾಕ್ರೆ, ತನ್ನ ಇಟಲಿ ಸಂಬಂಧಗಳ ಬಗ್ಗೆ ರಾಹುಲ್ ಬೆಟ್ಟು ಮಾಡಿ ತೋರಿಸಬೇಕಾದ ಅಗತ್ಯವಿಲ್ಲ ಎಂದರು.

ಹಿಂದೂಗಳ ವಿರುದ್ಧ ಬಾಯಿಗೆ ಬಂದಂತೆ ಟೀಕಿಸುತ್ತಿರುವುದಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ. ವಿಫಲತೆಗಳು ಇಂತಹ ಹೇಳಿಕೆಗಳನ್ನು ಹೊರಡಿಸುತ್ತವೆ ಎಂದು ಠಾಕ್ರೆ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ